ಹಲೋ ಸ್ನೇಹಿತರೇ, ಭಾರತೀಯ ರೈಲ್ವೆ ಇಲಾಖೆಯ 9144 ಟೆಕ್ನೀಷಿಯನ್ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ, ಸದರಿ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಹಾಕಲು 3 ದಿನಗಳಷ್ಟೆ ಬಾಕಿ ಇದೆ. ಆಸಕ್ತರು ಕೊನೆ ಕ್ಷಣದವರೆಗೂ ಕಾದು ಕೂರದೇ ಬೇಗ ಬೇಗ ಅರ್ಜಿ ಹಾಕಿ.
ಭಾರತ ದೇಶದಲ್ಲಿ ಅತಿಹೆಚ್ಚು ಸರ್ಕಾರಿ ಉದ್ಯೋಗ ಅವಕಾಶಗಳನ್ನು ಹೊಂದಿದೆ ಒಂದೇ ಒಂದು ಕ್ಷೇತ್ರ / ಸಚಿವಾಲಯ ಎಂದರೆ ಅದು ರೈಲ್ವೆ ಸಚಿವಾಲಯ. ಭಾರತೀಯ ರೈಲ್ವೆ ಉದ್ಯೋಗ ಪಡೆಯುವುದು ಎಂದರೆ ಸುಲಭವಲ್ಲ. ಕೇವಲ SSLC ಅರ್ಹತೆಯ ಹುದ್ದೆಗಳನ್ನು ನೇಮಕ ಮಾಡಿದರೂ ಸಹ ಹಲವು ಹಂತದ ನೇಮಕ ಪ್ರಕ್ರಿಯೆ ಇವೆ. ಸ್ಪರ್ಧಾತ್ಮಕ ಪರೀಕ್ಷೆಯಿಂದ ಪ್ರಾರಂಭವಾಗಿ, ಮೆಡಿಕಲ್ ಟೆಸ್ಟ್, ಮೂಲ ದಾಖಲೆಗಳ ಪರಿಶೀಲನೆವರೆಗೆ ಎಲ್ಲ ಹಂತದಲ್ಲೂ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು. ಒಂದು ಅಕ್ಷರದ ವ್ಯತ್ಯಾಸ ಯಾವುದೇ ದಾಖಲೆಯಲ್ಲಿ ಕಂಡು ಬಂದರೂ ಸಹ ಅಂತಹ ಅಭ್ಯರ್ಥಿ ಪರೀಕ್ಷೆಯ ಎಲ್ಲ ಹಂತದಲ್ಲಿ ಅರ್ಹರಾಗಿದ್ದರು ಆಯ್ಕೆಯಾಗಲು ಮಾತ್ರ ಸಾಧ್ಯವಾಗುವುದಿಲ್ಲ.
ಒಂದರಹಿಂದೊಂದರಂತೆ 3 ನೇಮಕ ಅಧಿಸೂಚಯನ್ನು ಹೊರಡಿಸಿದೆ. ಅವುಗಳ ಪೈಕಿ ಈ ಟೆಕ್ನೀಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆಗಳು ಮತ್ತು ಟೆಕ್ನೀಷಿಯನ್ ಗ್ರೇಡ್ 3 ಹುದ್ದೆಗಳಿದೆ. ಒಟ್ಟು ಹುದ್ದೆಗಳ ಸಂಖ್ಯೆ 9144. ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸ್ವೀಕಾರ ಪ್ರಾರಂಭವಾಗಿದ್ದು ಅರ್ಜಿ ಸಲ್ಲಿಸಲು ಕೊನೆ 3 ದಿನಗಳಷ್ಟೆ ಬಾಕಿ ಇದೆ. ಸೆಂಟ್ರಲ್ ಗವರ್ನಮೆಂಟ್ ಉದ್ಯೋಗ ಪಡೆಯಬೇಕೆಂದರೆ, ಸರ್ಕಾರಿ ಸಂಬಳ ಪಡೆಯಬೇಕು ಎಂದು ಆಸೆ ಹೊಂದಿದವರು ಇನ್ನು ಕಾಯದೆ ತಕ್ಷಣ ಅರ್ಜಿ ಹಾಕಿ
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-04-2024 ರ ರಾತ್ರಿ 11-59 ಗಂಟೆವರೆಗೆ.
ಅಪ್ಲಿಕೇಶನ್ ತಿದ್ದುಪಡಿಗೆ ಕೊನೆಯ ದಿನಾಂಕ : 09-04-2024 ರಿಂದ 18-04-2024
Contents
ಟೆಕ್ನೀಷಿಯನ್ ಹುದ್ದೆಗಳ ವರ್ಗೀಕರಣ ಸಹಿತ ವಿವರ
ಟೆಕ್ನೀಷಿಯನ್ ಗ್ರೇಡ್ -3 : 8052
ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ : 1092
ಒಟ್ಟು ಹುದ್ದೆಗಳ ಸಂಖ್ಯೆ : 9144
ರೈಲ್ವೆ ಟೆಕ್ನೀಷಿಯನ್ ಹುದ್ದೆಗೆ ಶೈಕ್ಷಣಿಕ ಅರ್ಹತೆ
ಟೆಕ್ನೀಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗಳಿಗೆ B.Sc / ಡಿಪ್ಲೊಮ / ಇಂಜಿನಿಯರಿಂಗ್ ಪಾಸಾಗಿರಬೇಕು.
ಟೆಕ್ನೀಷಿಯನ್ ಗ್ರೇಡ್ -3 ಹುದ್ದೆಗಳಿಗೆ ಮೆಟ್ರಿಕ್ಯೂಲೇಷನ್ ಜತೆಗೆ ITI ಪಾಸ್ ಮಾಡಿರಬೇಕು. ಎನ್‌ಸಿವಿಟಿ / ಎಸ್‌ಸಿವಿಟಿ ಪ್ರಮಾಣ ಪತ್ರ ಪಡೆದಿರಬೇಕು.
ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಹಾಕುವ ವಿಧಾನ
- ವೆಬ್‌ಸೈಟ್ ವಿಳಾಸ https://www.rrbbnc.gov.in/ ಗೆ ಭೇಟಿ ಮಾಡಿ.
- ಓಪನ್ ಆಗುವ ವೆಬ್ ಮುಖಪುಟದಲ್ಲಿ ‘CEN 02/2024 – Technician Categories Detailed CEN NEW’ ಎನ್ನುವುದರ ಮುಂದೆ ಇಂಗ್ಲಿಷ್, ಹಿಂದಿ ನೋಟಿಫಿಕೇಶನ್ ಇರಲಿದೆ. ಓದಲು ಕ್ಲಿಕ್ ಮಾಡಿ.
- ಇದರ ಕೆಳಗಡೆ ‘ Click to Submit Online Application’ ಎಂದಿರುವಲ್ಲಿ ಕ್ಲಿಕ್ ಮಾಡಿಕೊಳ್ಳಿ.
- ರೈಲ್ವೆಯ ಮತ್ತೊಂದು ವೆಬ್‌ಪುಟ Open ಆಗುತ್ತದೆ.
- ಈ ವೆಬ್‌ಪೇಜ್‌ನಲ್ಲಿ ‘Apply’ ಎಂದಿರುವಲ್ಲಿ ಕ್ಲಿಕ್ ಮಾಡಿಕೊಳ್ಳಿ.
- ನಿಮ್ಮ ಮುಂದಿರುವ ಆಯ್ಕೆಗಳ ಪೈಕಿ ‘Create An Account’ ಎಂದಿರುವಲ್ಲಿ ಕ್ಲಿಕ್ ಮಾಡಿಕೊಳ್ಳಿ.
- ಕೇಳಲಾಗುವ ಎಲ್ಲಾ ವಿವರಗಳನ್ನು ನೀಡಿರಿ ನಂತರ ಅಕೌಂಟ್ ಕ್ರಿಯೇಟ್ ಮಾಡಿ.
- ಬಳಿಕ ಮತ್ತೆ ಲಾಗಿನ್ ಆಗುವ ಮೂಲಕ ವೈಯಕ್ತಿಕ ಮಾಹಿತಿಗಳು, ಶೈಕ್ಷಣಿಕ ಮಾಹಿತಿಗಳು, ಮೀಸಲಾತಿ ವಿವರ ನೀಡಿ ಮತ್ತು ದಾಖಲೆಗಳನ್ನು Upload ಮಾಡಿ.
- ಅರ್ಜಿಯನ್ನು ಪೂರ್ಣಗೊಳಿಸಿ ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಿ.
- ಪೂರ್ಣಗೊಂಡ ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆಯಿರಿ..
ರೈಲ್ವೆ ಹುದ್ದೆಗೆ ಅಪ್ಲೇ ಮಾಡಲು ಬೇಕಾಗಿರುವ ದಾಖಲೆಗಳು, ವಯಸ್ಸಿನ ಅರ್ಹತೆ, ವೇತನದ ವಿವರ, ಅರ್ಜಿ ಶುಲ್ಕದ ಮಾಹಿತಿಗಳನ್ನು, ಇತರೆ ವಿವರಗಳಿಗಾಗಿ ಮೇಲಿನ ಲಿಂಕ್ ಕ್ಲಿಕ್ ಮಾಡಿ ಓದಿಕೊಳ್ಳಿ.
ಈ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಆಯ್ಕೆಯನ್ನು ಮಾಡಲಾಗುತ್ತದೆ.
ಇತರೆ ವಿಷಯಗಳು
ಏರ್ ಇಂಡಿಯಾ ಏರ್ಪೋರ್ಟ್‌ನಲ್ಲಿ ಉದ್ಯೋಗವಕಾಶ.! SSLC ಪಾಸಾಗಿದ್ರೆ ಅಪ್ಲೇ ಮಾಡಿ ₹60,000 ಸಂಬಳ ಸಿಗುತ್ತೇ
SSLC, PUC ನಂತರ ಆಯ್ಕೆ ಮಾಡಬಹುದಾದ ಬೆಸ್ಟ್ ಕೋರ್ಸ್‌ಗಳು.! ಯಾವುದರಲ್ಲಿ ಎಷ್ಟು ಉದ್ಯೋಗಾವಕಾಶ?