rtgh

SSLC, PUC ನಂತರ ಆಯ್ಕೆ ಮಾಡಬಹುದಾದ ಬೆಸ್ಟ್‌ ಕೋರ್ಸ್‌ಗಳು.! ಯಾವುದರಲ್ಲಿ ಎಷ್ಟು ಉದ್ಯೋಗಾವಕಾಶ?

after 10th courses list
Share

ಹಲೋ ಸ್ನೇಹಿತರೇ, ಈಗಾಗಲೇ ವಿದ್ಯಾರ್ಥಿಗಳಿಗೆ SSLC ಪರೀಕ್ಷೆ ಮುಗಿದಿದೆ. ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ, ಜೊತೆಗೆ ಮುಂದೇನು ಅನ್ನುವ ಆಲೋಚನೆಯೂ ನಿಮಗೂ ನಿಮ್ಮ ಫೋಷಕರಿಗೂ ಇರುತ್ತದೆ. ಆದ್ದರಿಂದ , SSLC ನಂತರದ ಕೋರ್ಸ್‌ಗಳ ಆಯ್ಕೆಯ ಬಗ್ಗೆ ನಮ್ಮ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ತಿಳಿಯಿರಿ.. ​

after 10th courses list

​2023-24ನೇ ಸಾಲಿನ , PUC/ 10ನೇ ತರಗತಿಯ ಪರೀಕ್ಷೆಗಳು ಮುಕ್ತಾವಾಗುತ್ತದೆ, ಇನ್ನೇನೋ ಫಲಿತಾಂಶವು ಸಹ ಬರಲಿದೆ. 10ನೇ ತರಗತಿಯಲ್ಲಿ ಪಾಸಾದ ವಿದ್ಯಾರ್ಥಿಗಳು & ಅವರ ಬಹುತೇಕ ಪೋಷಕರು , 10ನೇ ತರಗತಿ ನಂತರ ಯಾವ ಕೋರ್ಸ್‌ ತೆಗೆದುಕೊಳ್ಳಬೇಕು? ಭವಿಷ್ಯದ ದೃಷ್ಟಿಯಿಂದ ಯಾವ ಕೋರ್ಸ್‌ ಆಯ್ಕೆ ಉತ್ತಮ ಎಂಬ ಪ್ರಶ್ನೆಗಳು ಬರುವುದು ಸಹಜ. ವಿದ್ಯಾರ್ಥಿಗಳು ಇನ್ನು ಕಾಯದೆ ತಮಗೆ ಸೂಕ್ತ ಎನಿಸುವ ಕೋರ್ಸ್‌ನ್ನು ಆಯ್ಕೆ ಮಾಡಿಕೊಂಡು ಪ್ರವೇಶಾತಿಯನ್ನು ಪಡೆದುಕೊಳ್ಳಬೇಕಾಗುತ್ತದೆ.

ವಿದ್ಯಾರ್ಥಿಗಳು ತಮ್ಮ ಆಸಕ್ತಿ & ಸಾಮರ್ಥ್ಯಕ್ಕೆ ತಕ್ಕ ಹಾಗೆ ಕೋರ್ಸ್ ಆಯ್ಕೆ ಮಾಡಿ

ಮುಂದಿನ ಶಿಕ್ಷಣ ಆರಿಸುವಾಗ ಜೀವನದ ಉದ್ದೇಶ, ಸ್ವ-ವ್ಯಕ್ತಿತ್ವ, ಬೆಳದ ಪರಿಸರ & ಬಾಧ್ಯತೆ ಈ ವಿಷಯಗಳನ್ನು ಗಮನದಲ್ಲಿರಿಸಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾವುದೇ ವಿದ್ಯಾರ್ಥಿಯು ಶಿಕ್ಷಣದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತನ್ನ ಆಸಕ್ತಿ ಏನು, ಆಕಾಂಕ್ಷೆ ಏನು, ತನ್ನ ಸಾಮರ್ಥ್ಯ ಏನು, ತಾನು ಯಾವ ವಿಷಯವನ್ನು ಸುಲಭವಾಗಿ ಕಲಿಯಬಲ್ಲೆ ಎನ್ನುವುದನ್ನು ತಿಳಿದುಕೊಂಡು ನಂತರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಭವಿಷ್ಯವನ್ನು ಕಟ್ಟಿಕೊಳ್ಳುವುದು ಉತ್ತಮ.

SSLC ನಂತರ ಇರುವ ಆಯ್ಕೆಗಳ

ವಿಜ್ಞಾನ ವಿಭಾಗ (ಸೈನ್ಸ್‌) – ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಇತ್ಯಾದಿಗಳು.
ವಾಣಿಜ್ಯ ವಿಭಾಗ (ಕಾಮರ್ಸ್‌) – ಅಕೌಂಟೆನ್ಸಿ, ವ್ಯಾಪಾರೋದ್ಯಮ, ಗಣಿತ, ಸಂಖ್ಯಾಶಾಸ್ತ್ರ ಇತ್ಯಾದಿ.
ಕಲಾ ವಿಭಾಗ (ಆರ್ಟ್ಸ್‌) – ಶಿಕ್ಷಣ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ ಇತ್ಯಾದಿ.
ಡಿಪ್ಲೊಮ ( ಟೆಕ್ನಿಕಲ್ / ನಾನ್‌ ಟೆಕ್ನಿಕಲ್ )

ಪಿಯುಸಿ (ಪದವಿ ಪೂರ್ವ ಶಿಕ್ಷಣ )

SSLC ನಂತರ ಎಲ್ಲರು ಮೊದಲು ಆಯ್ಕೆ ಮಾಡುವುದು PUC. ಭಾರತೀಯ ವಿಶ್ವವಿದ್ಯಾಲಯದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿಯನ್ನು ಪಡೆಯಬಹುದು. ಈ ಕೋರ್ಸ್‌ನಲ್ಲಿ ನೀವು 3 ವಿಭಾಗಗಳಲ್ಲಿ ಅಧ್ಯಯನ ಮಾಡಬಹುದಾಗಿದೆ. ಸೈನ್ಸ್ ( ವಿಜ್ಞಾನ ವಿಭಾಗ), ಕಾಮರ್ಸ್ ( ವಾಣಿಜ್ಯ ವಿಭಾಗ), ಆರ್ಟ್ಸ ( ಕಲಾ ವಿಭಾಗ ), ಈ 3 ವಿಭಾಗಗಳಲ್ಲಿ ನಿಮಗೆ ಯಾವುದು ಸೂಕ್ತ ಎನಿಸುತ್ತದೆ ಆ ಕೋರ್ಸ್‌ ಅಧ್ಯಯನ ಮಾಡಬಹುದಾಗಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು & ಪೋಷಕರ ಮೊದಲ ಆಯ್ಕೆಯೆ ಸೈನ್ಸ್‌ ಆಗಿದೆ. ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳಿವೆ. ಈ ವಿಭಾಗ ಪೋಷಕರು & ವಿದ್ಯಾರ್ಥಿಗಳಿಗೆ ನೆಚ್ಚಿನ ವಿಭಾಗವಾಗಿದೆ.

  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ & ಜೀವಶಾಸ್ತ್ರ (PCMB)
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ & ಕಂಪ್ಯೂಟರ್ ಸೈನ್ಸ್ (PCMC)
  • ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ & ಎಲೆಕ್ಟ್ರಾನಿಕ್ಸ್ (PCME)

ವಾಣಿಜ್ಯ ವಿಭಾಗ (ಕಾಮರ್ಸ್)

ವಾಣಿಜ್ಯ ವಿಭಾಗದಲ್ಲಿ- ಯಾರಿಗೆ ಅರ್ಥಶಾಸ್ತ್ರ & ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅಂಥಹವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ ಮತ್ತು ಚಾರ್ಟರ್ಡ್‌ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಮಾಡುತ್ತದೆ.

ಇನ್ನು ಕಲಾ ವಿಭಾಗ- ಭಾಷಾ ವಿಷಯದಲ್ಲಿ ಆಸಕ್ತಿ ಇರುವಂತವರು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. PUC ನಂತರ ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು. ಅದಲ್ಲದೆ PUC ನಂತರ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮ ಮಾಡುವುದಕ್ಕೂ ಅವಕಾಶವಿರುತ್ತದೆ.

ಡಿಪ್ಲೊಮ ಕೋರ್ಸ್‌ಗಳು

SSLC ನಂತರ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ನಿಮಗೆ ಅವಕಾಶವಿದೆ. ಅದಲ್ಲದೆ SSLC ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಗಳು ಕೂಡಾ ಬೇಕಾಗಿದ್ದಲ್ಲಿ ಇಂಜಿನಿಯರಿಂಗ್‌ನಲ್ಲಿ ನೀವು ಡಿಪ್ಲೊಮ ಮಾಡಬಹುದಾಗಿದೆ. ವಿದ್ಯಾರ್ಥಿಗಳು ಇಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್‌ಗಳನ್ನು ಕೂಡ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.

ಇತರೆ ವಿಷಯಗಳು

ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನೀಡಿದ್ರಾ ನಿವೃತ್ತಿ

ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000‌ ರೂ. ಹಣ! ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್


Share

Leave a Reply

Your email address will not be published. Required fields are marked *