rtgh
Headlines

ಮಲೆನಾಡಿನಲ್ಲಿ ಮತ್ತೆ ಚುರುಕುಗೊಂಡ ಮಳೆ.! ಈ ಎಲ್ಲಾ ಜಿಲ್ಲೆಗಳಿಗೆ ಪ್ರವಾಹದ ಭೀತಿ

karnataka rain update
Share

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಮಳೆ ಆರ್ಭಟ ಜೋರಾಗಿದೆ. ಪುಷ್ಯ ಮಳೆ ಪ್ರಾರಂಭದಿಂದಲೇ ಅಬ್ಬರ ಶುರು ಮಾಡಿದೆ. ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲಾ. ನದಿ ಪಾತ್ರದ ಗ್ರಾಮಗಳು ಪ್ರವಾಹದ ಭೀತಿಯಲ್ಲಿದೆ. ಯಾವೆಲ್ಲಾ ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ನೀಡಿದೆ ಎಂಬುದನ್ನು ಲೇಖನದಲ್ಲಿ ತಿಳಿಯಿರಿ.

karnataka rain update

ಮಲೆನಾಡಿನಲ್ಲಿ ಮತ್ತೆ ಬಿರುಸುಗೊಂಡ ಮಳೆ

ಶಿವಮೊಗ್ಗ: ಮಲೆನಾಡಿನಲ್ಲಿ ಮತ್ತೆ ಬಿರುಸುಗೊಂಡ ಮಳೆ. ಮಲೆನಾಡಿನ ತಾಲೂಕುಗಳಾದ ತೀರ್ಥಹಳ್ಳಿ, ಹೊಸನಗರ & ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೊಷಿಸಲಾಗಿದೆ.

ಬಾಗಲಕೋಟೆ : ಘಟಪ್ರಭಾ, ಕೃಷ್ಣಾ ನದಿಗೆ ಅಪಾರ ನೀರು ಹರಿದುಬರುತ್ತಿರುವ ಕಾರಣ 3 ತಾಲೂಕುಗಳ ಶಾಲೆ, ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕುಗಳ ಶಾಲೆ, ಕಾಲೇಜ್ ರಜೆ ಘೋಷಿಸಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕರಾವಳಿ ಜಿಲ್ಲೆಯಾದ್ಯಂತ ಇಂದು ಮುಂಜಾನೆಯಿಂದಲೇ ವ್ಯಾಪಕ ಮಳೆ

ಕರಾವಳಿ ಜಿಲ್ಲೆಯಾದ್ಯಂತ ಇಂದು ಮುಂಜಾನೆಯಿಂದಲೇ ವ್ಯಾಪಕ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು, ಬಾರೀ ಗಾಳಿ ಹಾಗೂ ಸಾಧಾರಣ ಮಳೆಯಾಗುತ್ತಿದೆ. ಒಳನಾಡಿನ ಎಲ್ಲಾ ಜಿಲ್ಲೆಗಳ ಹಲವೆಡೆ ಮಳೆಯಾಗಿದೆ.

ಶಿವಮೊಗ್ಗ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿನಲ್ಲೂ ಭಾರೀ ಮಳೆ

ಶಿವಮೊಗ್ಗ, ಕೊಡಗು, ಹಾಸನ ಹಾಗೂ ಚಿಕ್ಕಮಗಳೂರಿಗೆ ಭಾರೀ ಮಳೆಯ ಅಲರ್ಟ್ ನೀಡಲಾಗಿದ್ದು, ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆ ನೀಡಲಾಗಿದೆ. ಶಿವಮೊಗ್ಗ, ಕೊಡಗು ಚಿಕ್ಕಮಗಳೂರಿಗೆ ಇಂದಿನಿಂದ ಮೂರು ದಿನ ಹಾಗೂ ಹಾಸನಕ್ಕೆ ಇಂದು ಮಾತ್ರ ಆರೆಂಜ್ ಅಲರ್ಟ್ ನೀಡಿದ್ದು ಇದು ಅತಿ ಭಾರೀ ಮಳೆಯ ಮುನ್ಸೂಚನೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆ

ಉತ್ತರ ಒಳನಾಡಿನ ಜಿಲ್ಲೆಯಾದ ಬೆಳಗಾವಿಗೂ ಇಂದು & ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.

ಉಡುಪಿ, ಉತ್ತರ ಕನ್ನಡ, ಹಾಗೂ ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್

ಉಡುಪಿ, ಉತ್ತರ ಕನ್ನಡ, ಹಾಗೂ ದಕ್ಷಿಣ ಕನ್ನಡಕ್ಕೆ 115 ಮಿಮೀಗಿಂತ ಅಧಿಕ, 204 ಮಿಮಿ ನಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ನೀಡಲಾಗಿದೆ.

ಜುಲೈ 25 ರಿಂದ 27 ರವರೆಗೆ 3 ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ಆರೆಂಜ್ ಅಲರ್ಟ್ ಅತ್ಯಂತ ಭಾರೀ ಮಳೆಗೆ ನೀಡುವ ಅಲರ್ಟ್ ಆಗಿದ್ದು, ಜುಲೈ 25 ರಿಂದ 27 ರವರೆಗೆ 3 ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಇತರೆ ವಿಷಯಗಳು

ರೈತರು ಬೆಳೆ ವಿಮೆ ಪರಿಹಾರ ಪಡೆಯಲು ಇದೇ ಕೊನೆಯ ದಿನಾಂಕ..!

ಉದ್ಯೋಗಿಗಳ ಕೆಲಸದ ಸಮಯ ವಿಸ್ತರಣೆ!


Share

Leave a Reply

Your email address will not be published. Required fields are marked *