rtgh
Headlines

ರೈತರಿಗೆ ಗುಡ್ ನ್ಯೂಸ್! ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

horticulture subsidy schemes
Share

ಹಲೋ ಸ್ನೇಹಿತರೇ, ತೋಟಗಾರಿಕೆ ಇಲಾಖೆ ವತಿಯಿಂದ ಪ್ರಸ್ತಕ ಸಾಲಿಗೆ ಕೇಂದ್ರ ಪುರಸ್ಕೃತ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ತಾಳೆಬೆಳೆ ಬೆಳೆಯಲು ಆಸಕ್ತಿ ಇರುವ ರೈತರಿಂದ ಸಹಾಯಧನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಸಂತೋಷ್ ಸಪ್ಪಂಡಿ ಅವರು ತಿಳಿಸಿದ್ದಾರೆ.

horticulture subsidy schemes

ಹೊಸ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಪ್ರತೀ ಹೆಕ್ಟೇರ್ಗೆ ಶೇ.50 ರಂತೆ ರೂ.29 ಸಾವಿರ, ಮೊದಲನೇ ವರ್ಷದಿಂದ ನಾಲ್ಕು ವರ್ಷಗಳ ಬೇಸಾಯ ನಿರ್ವಹಣೆ ಕಾರ್ಯಕ್ರಮಕ್ಕೆ ಪ್ರತೀ ವರ್ಷ ನಿರ್ವಹಣೆಗೆ ರೂ.5250 ರಂತೆ ಪ್ರತೀ ಹೆಕ್ಟೇರ್ಗೆ ಸಹಾಯಧನ ನೀಡಲಾಗುವುದು.

ಅಂತರ ಬೆಳೆಗೆ ರೂ.5250, ಎತ್ತರವಾದ ತಾಳೆ ಮರಗಳಿಂದ ಹಣ್ಣು ಕಟಾವು ಮಾಡಲು ರೂ.0 ಸಾವಿರ ಪ್ರತೀ ಟನ್ಗೆ (ಗರಿಷ್ಠ 6೦ ಟನ್ ಮಾತ್ರ) ಸಹಾಯಧನ, ಡೀಸೆಲ್ ಪಂಪ್ ಸೆಟ್ ಕೊಳ್ಳಲು ರೂ.5 ಸಾವಿರ, ಕೊಳವೆ ಬಾವಿಗೆ ರೂ.50 ಸಾವಿರ ಸಹಾಯಧನ, ತಾಳೆ ಹಣ್ಣು ಕಟಾವು ಮಾಡುವ ಉಪಕರಣ, ಮೊಟೊರೈಸ್ಡ್ ಚಿಸೆಲ್ ರೂ.15 ಸಾವಿರ, ತಾಳೆ ಹಣ್ಣು ಕಟಾವು ಏಣಿ ರೂ.5 ಸಾವಿರ, ಚಾಫ್ ಕಟ್ಟರ್ ರೂ.50 ಸಾವಿರ, ಟ್ರಾಕ್ಟರ್ ಟ್ರೋಲಿ ಖರೀದಿಸಲು ರೂ.1,60,000 (ಶೇ.50 ರಂತೆ) ಸಹಾಯಧನ ಸೌಲಭ್ಯ ನೀಡಲಾಗುವುದು.

ಇದನ್ನೂ ಸಹ ಓದಿ : ಉದ್ಯೋಗಿಗಳಿಗೆ ಬ್ಯಾಡ್‌ ನ್ಯೂಸ್.!‌ ಕೆಲಸದ ಅವಧಿ ಇನ್ಮುಂದೆ ಒಂಬತ್ತಲ್ಲಾ 14 ಗಂಟೆ

ಈ ಯೋಜನೆಯಡಿ ಅಲ್ಪಸಂಖ್ಯಾತರಿಗೆ ಶೇ.15, ವಿಕಲಾಂಗಚೇತನರಿಗೆ ಶೇ.5 ಮತ್ತು ರೈತ ಮಹಿಳೆಯರಿಗೆ ಶೇ.33 ರಷ್ಟು ಅನುದಾನ ಮೀಸಲಿರಸಲಾಗಿದ್ದು, ಆಸಕ್ತ ರೈತ ಫಲಾನುಭವಿಗಳು ಈ ಯೋಜನೆಗಳ ಸಹಾಯಧನ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಜಿಲ್ಲೆಯಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಮತ್ತು ತೋಟಗಾರಿಕೆ ಉಪನಿರ್ದೇಶಕರ ಕಾರ್ಯಾಲಯ ಅಥವಾ ದೂ.೦೮೩೯೨-೨೭೮೧೭೯ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ವಿಷಯಗಳು:

ರೈತರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ರದ್ದು.! ಈ ಕೆಲಸಕ್ಕೆ ಇನ್ನೂ 7 ದಿನ ಮಾತ್ರ ಬಾಕಿ

FD ಹೊಂದಿರುವವರಿಗೆ ವಿಶೇಷ ಸುದ್ದಿ! ಈ ಕೆಲಸ ಮಾಡದಿದ್ದರೆ ಕಟ್ಟಬೇಕು ತೆರಿಗೆ

ನಿರುದ್ಯೋಗಿಗಳಿಗೆ ಸರ್ಕಾರದಿಂದ 10 ಲಕ್ಷ.! ಕೇಂದ್ರ ಸರ್ಕಾರದ ಹೊಸ ಯೋಜನೆ


Share

Leave a Reply

Your email address will not be published. Required fields are marked *