rtgh
Headlines

ಯುವಕರಿಗೆ ಕೇಂದ್ರದ ಬಂಪರ್ ಸ್ಕೀಮ್!‌ ಪ್ರತಿ ತಿಂಗಳು 5 ಸಾವಿರ ರೂ. ಇಂಟರ್ನ್ ಶಿಪ್ ಸೌಲಭ್ಯ

Internship scheme
Share

ಹಲೋ ಸ್ನೇಹಿತರೇ, ಕೇಂದ್ರ ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಯುವಕರಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ಇಂಟರ್ನ್ ಶಿಪ್ ಯೋಜನೆಯೊಂದನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದೂ ಒಂದಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Internship scheme

ಈ ಯೋಜನೆಯಲ್ಲಿ 21 ರಿಂದ 24 ವರ್ಷದೊಳಗಿನ ಯುವಕರಲ್ಲಿ 5 ವರ್ಷದೊಳಗೆ ಕೌಶಲಾಭಿವೃದ್ಧಿ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಯುವ ಸಮುದಾಯದಲ್ಲಿ ಉದ್ಯೋಗ ಕೌಶಲ್ಯ ಹೆಚ್ಚಿಸಲು ಇಂಟರ್ನ್ ಶಿಪ್ ಯೋಜನೆ ಜಾರಿಗೆ ತರಲಾಗಿದೆ.

ಅದರಂತೆ ಸರ್ಕಾರ 500 ಟಾಪ್ ಕಂಪನಿಗಳನ್ನು ಈ ಯೋಜನೆಯಲ್ಲಿ ಬಳಸಿಕೊಳ್ಳಲಿದೆ. ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವಕ/ಯುವತಿಯರಿಗೆ ಈ ಕಂಪನಿಗಳಲ್ಲಿ ಪ್ರಾಯೋಗಿಕವಾಗಿ ಉದ್ಯೋಗ ತರಬೇತಿ ನೀಡುವುದು ಯೋಜನೆಯ ಭಾಗವಾಗಿದೆ. ಅವರಿಗೆ ಮಾಸಿಕವಾಗಿ 5,000 ರೂ. ಮತ್ತು ವರ್ಷಕ್ಕೆ ಒಟ್ಟು 66,000 ರೂ. ಭತ್ಯೆ ಸಿಗಲಿದೆ. ಕಂಪನಿಗಳೂ ಉದ್ಯೋಗ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗೆ ತರಬೇತಿ ಜೊತೆಗೆ ಹೆಚ್ಚುವರಿಯಾಗಿ 6,000 ರೂ. ನೀಡಬೇಕಾಗುತ್ತದೆ. ಈ ಮೂಲಕ ಕೌಶಲ್ಯ ತರಬೇತಿ ಜೊತೆಗೆ ಪ್ರೋತ್ಸಾಹ ಧನವೂ ಸಿಗಲಿದೆ.

ಇದನ್ನೂ ಸಹ ಓದಿ : ನಿರುದ್ಯೋಗಿಗಳಿಗೆ ಸರ್ಕಾರದಿಂದ 10 ಲಕ್ಷ.! ಕೇಂದ್ರ ಸರ್ಕಾರದ ಹೊಸ ಯೋಜನೆ

ಯೋಜನೆಗೆ ಯಾರು ಅರ್ಹರು?

  • ಪದವಿ ಮುಗಿಸಿರುವ ಇನ್ನೂ ಉದ್ಯೋಗ ಅರಸುತ್ತಿರುವ 21 ರಿಂದ 24 ವರ್ಷದೊಳಗಿನ ಯುವ ಸಮೂಹ ಇದಕ್ಕೆ ಅರ್ಹರು.
  • ಅವರು ಯಾವುದೇ ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಕುಟುಂಬದ ಇತರೆ ಸದಸ್ಯರು ಸರ್ಕಾರೀ ಉದ್ಯೋಗಿಗಳಾಗಿರಬಾರದು.
  • ಅಭ್ಯರ್ಥಿಗಳು ಐಐಟಿ, ಐಐಎಂ, ಸಿಎ, ಸಿಎಂಎ, ಐಐಎಸ್‌ಇಆರ್ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ ಮಾಡಿರಬಾರದು.
  • ಒಟ್ಟಾರೆಯಾಗಿ ಆರ್ಥಿಕವಾಗಿ ಹಿಂದುಳಿದ, ಉದ್ಯೋಗ ಗಿಟ್ಟಿಸಿಕೊಳ್ಳಲು ಕಷ್ಟಪಡುವ ವರ್ಗವನ್ನೇ ಗುರಿಯಾಗಿಟ್ಟುಕೊಂಡು ಈ ಯೋಜನೆ ತರಲಾಗಿದೆ.

ಇತರೆ ವಿಷಯಗಳು:

ವಾಹನ ಮಾಲೀಕರಿಗೆ ಶಾಕಿಂಗ್ ನ್ಯೂಸ್: ಹೆಚ್ಚಾಯ್ತು ವಾಹನಗಳ ಎಮಿಷನ್ ಟೆಸ್ಟಿಂಗ್ ದರ

ರೈತರಿಗೆ ಗುಡ್ ನ್ಯೂಸ್! ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

FD ಹೊಂದಿರುವವರಿಗೆ ವಿಶೇಷ ಸುದ್ದಿ! ಈ ಕೆಲಸ ಮಾಡದಿದ್ದರೆ ಕಟ್ಟಬೇಕು ತೆರಿಗೆ


Share

Leave a Reply

Your email address will not be published. Required fields are marked *