rtgh
Headlines

ಸಹಕಾರ ಸಂಘಗಳಲ್ಲಿ ಬಿಕಾಂ ಪಾಸಾದವರಿಗೆ ಉದ್ಯೋಗ: ತಿಂಗಳಿಗೆ ರೂ. 32,000 ವೇತನ

klete co operative society recruitment
Share

ಹಲೋ ಸ್ನೇಹಿತರೇ, ನೀವೇನಾದ್ರು ಬಿಕಾಂ ಪಾಸ್‌ ಮಾಡಿದ್ದು ಸರ್ಕಾರಿ ಹುದ್ದೆ / ಸರ್ಕಾರಿ ಸಂಸ್ಥೆ ಹುದ್ದೆಗಾಗಿ ಕಾಯುತ್ತಿದ್ದವರಿಗೆ ಜಾಬ್ ಆಫರ್. ಬಿಕಾಂ ವಿದ್ಯಾರ್ಹತೆ ಇದ್ದು & ಸರ್ಕಾರಿ ಹುದ್ದೆ ಆಸಕ್ತರಾಗಿದ್ದರೆ KLETE ಕೋ-ಆಪರೇಟಿವ್ ಸೊಸೈಟಿ ಗುಮಾಸ್ತರ ಹುದ್ದೆಗೆ ಅರ್ಜಿ ಹಾಕಿ. ಹುದ್ದೆಯ ಸಂಪೂರ್ಣ ಮಾಹಿತಿಗಾಗಿ ನಮ್ಮ ಲೇಖನದಲ್ಲಿ ಓದಿ.

klete co operative society recruitment

ಕರ್ನಾಟಕ ರಾಜ್ಯ ಸಹಕಾರ ಸಂಘಗಳ ವರ್ಗೀಕರಣದಲ್ಲಿ ‘ಎ’ ಶ್ರೇಣಿಯಲ್ಲಿರುವ ಕರ್ನಾಟಕ ಕಾರ್ಮಿಕ, ಉದ್ಯೋಗ ಮತ್ತು ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘದಲ್ಲಿ ಖಾಲಿ ಇರುವ ಗುಮಾಸ್ತರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸದರಿ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಂಘದ ಕಚೇರಿಗೆ ಖುದ್ದಾಗಿ / ಅಂಚೆ ಮೂಲಕ ದಿನಾಂಕ 21-08-2024 ರ ಸಂಜೆ 05-30 ರ ಒಳಗೆ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಯ ಇಲಾಖೆಕರ್ನಾಟಕ ಕಾರ್ಮಿಕ, ಉದ್ಯೋಗ & ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ
ಹುದ್ದೆ ಹೆಸರುಗುಮಾಸ್ತರು
ಹುದ್ದೆ ಸಂಖ್ಯೆ01
ವೇತನ ಶ್ರೇಣಿರೂ.17,650-32,000 ಜತೆಗೆ ಇತರೆ ಭತ್ಯೆಗಳು
ವಿದ್ಯಾರ್ಹತೆಬಿಕಾಂ (ಪ್ರಥಮ ದರ್ಜೆ) ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ವಯೋಮಿತಿ ಅರ್ಹತೆಗರಿಷ್ಠ 32 ವರ್ಷಗಳನ್ನು ಮೀರಿರಬಾರದು.
  • ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: 22-07-2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-08-2024 ರ ಸಂಜೆ 05-30 ಗಂಟೆ ವರೆಗೆ.

ಅರ್ಜಿ ಶುಲ್ಕ ವಿವರ : ರೂ.500. (ನಗದು ರಸೀದಿ/ ಡಿಡಿ)

ಅರ್ಜಿ ಸಲ್ಲಿಸುವ ವಿಧಾನ

ಈ ಹುದ್ದೆಗಳಿಗೆ ಬಿಕಾಂ ಪಾಸಾದವರು ವಿಳಾಸ – ‘ಕರ್ನಾಟಕ ಕಾರ್ಮಿಕ, ಉದ್ಯೋಗ & ತರಬೇತಿ ಇಲಾಖೆಗಳ ನೌಕರರ ಸಹಕಾರ ಸಂಘ, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 560029’ ಇಲ್ಲಿಗೆ ಭೇಟಿ ನೀಡಿ, ಅರ್ಜಿ ನಮೂನೆ ಪಡೆಯುವುದು ಅಥವಾ ಸಂಘದ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಪಡೆಯುವುದು. ಅದರಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೆರಾಕ್ಸ್‌ ಕಾಪಿಯನ್ನು ಲಗತ್ತಿಸಿ ಸದರಿ ವಿಳಾಸಕ್ಕೆ ಆಗಸ್ಟ್‌ 21 ಸಂಜೆ 05-30 ಗಂಟೆಯೊಳಗೆ ಅರ್ಜಿ ಸಲ್ಲಿಸುವುದು.

ಅಗತ್ಯ ದಾಖಲೆಗಳು

  1. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ(SSLC marks card)
  2. Aadhar card
  3. ಬಿಕಾಂ ವಿದ್ಯಾರ್ಹತೆ ದಾಖಲೆ
  4. ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ
  5. ಕಾರ್ಯಾನುಭವ ಇದ್ದಲ್ಲಿ ದಾಖಲೆ
  6. ಇಮೇಲ್ ವಿಳಾಸ
  7. ಮೊಬೈಲ್ ನಂಬರ್
  8. ಲೇಟೆಸ್ಟ್‌ ಭಾವಚಿತ್ರ
  9. ವೈಯಕ್ತಿಕ ವಿವರಗಳು

ಹೆಚ್ಚಿನ ಮಾಹಿತಿಗಾಗಿ ಸಂಘದ ವೆಬ್‌ಸೈಟ್‌ : klete.coopsociety.in ಅನ್ನು ನೋಡಬಹುದು / ಸಂಘದ ಕಾರ್ಯದರ್ಶಿ (ಮೊಬೈಲ್ ಸಂಖ್ಯೆ – 94493 46973 ) ರವರನ್ನು ಕಚೇರಿಯಲ್ಲಿ ಸಂಪರ್ಕಿಸಬಹುದು.

ಮೇಲೆ ತಿಳಿಸಿದ ವಿಧಾನ ಹೊರತುಪಡಿಸಿ, ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸಿದವರ ಪೈಕಿ ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಮತ್ತು ಕಂಪ್ಯೂಟರ್‌ ತರಬೇತಿ ಪಡೆದವರ ಆಧಾರದ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಿದೆ. ಶಾರ್ಟ್‌ಲಿಸ್ಟ್‌ ಆದವರಿಗೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಇತರೆ ವಿಷಯಗಳು

ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌: ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ

ಕೃಷಿ ನವೀಕರಣಕ್ಕಾಗಿ ಬಜೆಟ್‌ನಲ್ಲಿ ಹೊಸ ಯೋಜನೆ ಅನಾವರಣ..!


Share

Leave a Reply

Your email address will not be published. Required fields are marked *