rtgh
Headlines

ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ಹುದ್ದೆಗಳ ಅರ್ಜಿಗೆ ಮತ್ತೆ ಅವಕಾಶ.! ಇಂದಿನಿಂದಲೇ ಅರ್ಜಿ ಸಲ್ಲಿಸಿ

nbcc recruitment
Share

ಹಲೋ ಸ್ನೇಹಿತರೇ, ಸಿಎ, ಡಿಪ್ಲೊಮ, ಐಸಿಡಬ್ಲ್ಯೂಎ, ಪಿಜಿಡಿಎಂ, ಎಂಬಿಎ, ಇತರೆ ವಿದ್ಯಾರ್ಹತೆಯನ್ನು ಪಾಸ್‌ ಮಾಡಿ, ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಆಸಕ್ತರು ಆನ್‌ಲೈನ್‌ ಮೂಲಕ ಇಂದಿನಿಂದಲೇ ಅರ್ಜಿ ಸಲ್ಲಿಸಿ.

nbcc recruitment

ರಾಷ್ಟ್ರೀಯ ಕಟ್ಟಡ ನಿರ್ಮಾಣ ಮಂಡಳಿ ಇಂಡಿಯಾ ಲಿಮಿಟೆಡ್‌ ಕಳೆದ ಫೆಬ್ರವರಿ ತಿಂಗಳಲ್ಲಿ ವಿವಿಧ 103 ಹುದ್ದೆಗಳ ಭರ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿ ಅಧಿಸೂಚಿಸಲಾಗಿದೆ. ಮಾರ್ಚ್ 27 ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಲಾಗಿದೆ, ಆನ್‌ಲೈನ್‌ ಅಪ್ಲಿಕೇಶನ್‌ ವಿಂಡೋ ಓಪನ್ ಮಾಡಲಾಗಿದೆ. ಆಸಕ್ತರು ಮೇ 7, 2024 ರ ವರೆಗೂ ಅಪ್ಲೇ ಮಾಡಬಹುದಾಗಿದೆ. ವಿವಿಧ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ತಾಂತ್ರಿಕ ಶಿಕ್ಷಣ ಪಡೆದ ಎಲ್ಲರಿಗೂ NBCC ಲಿಮಿಟೆಡ್‌ನ ವಿವಿಧ ಹುದ್ದೆಗಳಿದೆ.

ಹುದ್ದೆಗಳ ಹೆಸರು

ಹೆಚ್ಚುವರಿ ಮ್ಯಾನೇಜರ್, ಜೆನೆರಲ್ ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್, ಪ್ರಾಜೆಕ್ಟ್‌ ಮ್ಯಾನೇಜರ್, ಸೀನಿಯರ್ ಪ್ರಾಜೆಕ್ಟ್‌ ಮ್ಯಾನೇಜರ್, ಕಿರಿಯ ಅಭಿಯಂತರರು, ಮ್ಯಾನೇಜ್ಮೆಂಟ್ ಟ್ರೈನಿ ಪೋಸ್ಟ್‌ಗಳು.
ಈ ಹುದ್ದೆಗಳನ್ನು ಮಂಡಳಿಯ ಸಿವಿಲ್,ಮೆಕ್ಯಾನಿಕಲ್, ಹೆಚ್‌ಆರ್‌ಎಂ, ಪ್ಲಾನಿಂಗ್, ಆರ್ಕಿಟೆಕ್ಚರ್, ಇಲೆಕ್ಟ್ರಿಕಲ್, ಕ್ವಾಂಟಿಟಿ ಸರ್ವೇಯರ್, ಸ್ಟ್ರಕ್ಚರಲ್ ಡಿಸೈನ್ ಹಾಗೂ ಇತರೆ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ.

ಆನ್‌ಲೈನ್‌ ಮೂಲಕ ಅಪ್ಲೇ ಮಾಡಲು ಕೊನೆ ದಿನಾಂಕ : 07-05-2024 ರ ಸಂಜೆ 17-00 ಗಂಟೆವರೆಗೆ.

ಶೈಕ್ಷಣಿಕ ಅರ್ಹತೆಗಳು

ಸಿಎ / ಐಸಿಡಬ್ಲ್ಯೂಎ / ಡಿಪ್ಲೊಮ / ಪಿಜಿಡಿಎಂ / ಎಂಬಿಎ / ಎಂಎಸ್‌ಡಬ್ಲ್ಯೂ / ಪಿಜಿ ಡಿಪ್ಲೊಮ / ಪಿಜಿ ಡಿಗ್ರಿ ಶೈಕ್ಷಣಿಕ ಅರ್ಹತೆಗಳನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ

  • NBCC ವೆಬ್‌ಸೈಟ್‌ https://nbccindia.in/rec/ ಭೇಟಿ ನೀಡಿ.
  • ತೆರೆದ ವೆಬ್ಪೇಜ್‌ನಲ್ಲಿ ಸ್ಕ್ರಾಲ್‌ಡೌನ್ ಮಾಡಿಕೊಂಡು ‘ New Registration’ ಎಂದಲ್ಲಿ ಕ್ಲಿಕ್ ಮಾಡಿ.
  • ಇಮೇಲ್ ವಿಳಾಸ,Password ನೀಡಿ ಮೊದಲಿಗೆ ರಿಜಿಸ್ಟ್ರೇಷನ್‌ಪಡೆದುಕೊಂಡು ನಂತರ ಅಪ್ಲೇ ಮಾಡಿ.
  • ಮುಂದಿನ ರೆಫರೆನ್ಸ್‌ಗಾಗಿ ಅರ್ಜಿ ಪ್ರಿಂಟ್ ತೆಗೆಯಿರಿ.

ಅರ್ಜಿ ಶುಲ್ಕ ವಿವರ

ಯಾವುದೇ ಹುದ್ದೆಗಳಿಗೆ ರೂ.1000. ಶುಲ್ಕ
ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳಿಗೆ ರೂ.500. ಶುಲ್ಕ

ಅರ್ಜಿ ಸಲ್ಲಿಸಲು ಬೇಕಾದ ದಾಖಲೆ, ಮಾಹಿತಿಗಳು

  • ಆಧಾರ್ ಕಾರ್ಡ್‌ (aadhar card)
  • ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ (SSLC marks card)
  • ಮೊಬೈಲ್ ನಂಬರ್.
  • ಇ-ಮೇಲ್ ವಿಳಾಸ.
  • ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆ.

ಇತರೆ ವಿಷಯಗಳು

SSLC ರಿಸಲ್ಟ್‌ ಚೆಕ್‌ ಮಾಡಲು ಸುಲಭ ವಿಧಾನ! ಇಲ್ಲಿ ಕ್ಲಿಕ್ ಮಾಡಿ

6ನೇ ತರಗತಿ ಪ್ರವೇಶಾತಿಗೆ ಅಂತಿಮ ಮೆರಿಟ್‌ ಪಟ್ಟಿ ಬಿಡುಗಡೆ.! ಇಲ್ಲಿದೆ ಚೆಕ್‌ ಮಾಡುವ ವಿಧಾನ


Share

Leave a Reply

Your email address will not be published. Required fields are marked *