rtgh
Headlines

6ನೇ ತರಗತಿ ಪ್ರವೇಶಾತಿಗೆ ಅಂತಿಮ ಮೆರಿಟ್‌ ಪಟ್ಟಿ ಬಿಡುಗಡೆ.! ಇಲ್ಲಿದೆ ಚೆಕ್‌ ಮಾಡುವ ವಿಧಾನ

KREIS admission 2023-24
Share

ಹಲೋ ಸ್ನೇಹಿತರೇ, 2023-24ನೇ ಸಾಲಿನ KREIS ಶಾಲೆಗಳ 6ನೇ ತರಗತಿ ಅಡ್ಮಿಷನ್‌ ಸಂಬಂಧ ನಡೆಸಿದ್ದ CET ಪರೀಕ್ಷೆಯ ಆಧಾರದಲ್ಲಿ ಇದೀಗ ಅಂತಿಮ ಮೆರಿಟ್‌ ಪಟ್ಟಿಯನ್ನು KEA ಬಿಡುಗಡೆ ಮಾಡಿದೆ. ಚೆಕ್‌ ಮಾಡಲು ಇಲ್ಲಿದೆ ನೇರ ಲಿಂಕ್‌ ಹಾಗು ಅಪ್ಲೇ ಮಾಡುವ ವಿಧಾನ.

KREIS admission 2023-24

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿ ಶಾಲೆಯಲ್ಲಿ 6ನೇ ತರಗತಿಗೆ ಪ್ರವೇಶ ಸಂಬಂಧ, ಎಂಟ್ರ್ಯಾನ್ಸ್‌ ಎಕ್ಸಾಮ್‌ ಬರೆದ ವಿದ್ಯಾರ್ಥಿಗಳ ಅಂತಿಮ ಮೆರಿಟ್‌ ಪಟ್ಟಿಯನ್ನು ಇದೀಗ KEA ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು KEA ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಜಿಲ್ಲೆಯ ಲಿಂಕ್ ಕ್ಲಿಕ್ ಮಾಡಿ ಮೆರಿಟ್‌ ಪಟ್ಟಿ ಚೆಕ್‌ ಮಾಡಿ.

ಪ್ರಸ್ತುತ ಬಿಡುಗಡೆ ಮಾಡಿರುವ KREIS ಅಂತಿಮ ಮೆರಿಟ್‌ ಪಟ್ಟಿಗೆ ಯಾವುದೇ ಆಕ್ಷೇಪಣೆಗಳು ಇದ್ದಲ್ಲಿ e-mail [email protected] ಗೆ ಏಪ್ರಿಲ್ 17, 2024 ರ ಸಂಜೆ 05-00 ಗಂಟೆ ಒಳಗೆ ತಲುಪಿಸಬೇಕು.

ಜಿಲ್ಲಾವಾರು ಅಂತಿಮ ಶ್ರೇಣಿ ಪಟ್ಟಿಯಲ್ಲಿ ವಿದ್ಯಾರ್ಥಿಗಳ STATS ನಂಬರ್, ವಿದ್ಯಾರ್ಥಿಗಳ ಹೆಸರು, ರಿಜಿಸ್ಟ್ರೇಷನ್ ನಂಬರ್, ಲಿಂಗ, ಜನ್ಮ ದಿನಾಂಕದ ವಿವರ, ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ರಾಜ್ಯ ಶ್ರೇಣಿಯ ಮಾಹಿತಿಯನ್ನು ನೀಡಿದೆ.

ಆಕ್ಷೇಪಣೆ ಸ್ವೀಕಾರ ನಂತರ, ಅವುಗಳನ್ನು ಪರಿಶೀಲಿಸಿ ಮುಂದಿನ ಪ್ರವೇಶ ಪ್ರಕ್ರಿಯೆಗೆ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡಲಿದೆ.

KREIS 2024 ಅಂತಿಮ ಮೆರಿಟ್‌ ಲಿಸ್ಟ್ ಚೆಕ್‌ ಮಾಡುವ ವಿಧಾನ

– ಕರ್ನಾಟಕ ಪರೀಕ್ಷಾ ಪ್ರಾಧಿಕಾರ https://cetonline.karnataka.gov.in/kea/ ವೆಬ್‌ಸೈಟ್‌ ವಿಳಾಸಕ್ಕೆ ಭೇಟಿ ನೀಡಿ.
– ‘ಇತ್ತೀಚಿನ ಪ್ರಕಟಣೆಗಳು’ ಅಡಿಯಲ್ಲಿ ಗಮನಿಸಿ.
– ಏಪ್ರಿಲ್ 12 ರಂದು ಪ್ರಕಟವಾಗಿರುವ ಜಿಲ್ಲಾವಾರು ಆಯ್ಕೆ ಲಿಸ್ಟ್‌ಗಳ ಲಿಂಕ್‌ ಇರುತ್ತದೆ.
– ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ಕ್ಲಿಕ್ ಮಾಡಿ.
– PDF ಫೈಲ್‌ ಓಪನ್ ಆಗುತ್ತದೆ ವಿದ್ಯಾರ್ಥಿಗಳು ತಮ್ಮ ಹೆಸರು ಇರುವ ಬಗ್ಗೆ ಚೆಕ್‌ ಮಾಡಿಕೊಳ್ಳಿ.

ಯಾದಗಿರಿ, ವಿಜಯನಗರ, ಉತ್ತರ ಕನ್ನಡ, ವಿಜಯಪುರ, ತುಮಕೂರು, ರಾಮನಗರ, ಶಿವಮೊಗ್ಗ, ಮಂಡ್ಯ, ಕೊಪ್ಪಳ, ಕೋಲಾರ, ಮೈಸೂರು, ಕಲಬುರಗಿ, ಹಾಸನ, ಗದಗ, ಧಾರವಾಡ, ಹಾವೇರಿ, ದಾವಣಗೆರೆ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕೋಡಿ, ಚಿಕ್ಕಮಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೀದರ್, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬಳ್ಳಾರಿ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಪ್ರತ್ಯೇಕ ಅಂತಿಮ ಮೆರಿಟ್‌ ಲಿಸ್ಟ್‌ಗಳ ಲಿಂಕ್‌ಗಳನ್ನು ನೀಡಲಾಗಿದೆ.

ಇತರೆ ವಿಷಯಗಳು

ವ್ಯಾಪಾರಸ್ಥರ ಕೈ ಹಿಡಿದ ಸರ್ಕಾರ! ವ್ಯಾಪಾರ ಪ್ರಾರಂಭಕ್ಕೆ ಸಿಗುತ್ತೆ ₹50,000

ಕರ್ನಾಟಕ ಹೈಕೊರ್ಟ್‌ನಲ್ಲಿ ಉದ್ಯೋಗ.! ಪದವೀಧರರಿಗೆ ಅಪ್ಲೇ ಮಾಡಲು ಡೈರೆಕ್ಟ್‌ ಲಿಂಕ್


Share

Leave a Reply

Your email address will not be published. Required fields are marked *