ಹಲೋ ಸ್ನೇಹಿತರೇ, ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ಜೊತೆಗೆ ಡಿಎ ಏರಿಕೆ, ಈಗ HRA ಮತ್ತು ಇತರೆ ಭತ್ಯೆಗಳು ಬದಲಾವಣೆಯಾಗಲಿದೆ, ಎಷ್ಟೆಲ್ಲಾ ಬದಲಾವಣೆಯಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಲಕ್ಷಗಟ್ಟಲೆ ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಶೇ.50ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿದೆ. ಮಾರ್ಚ್ ಮೊದಲ ವಾರದಲ್ಲಿಯೇ ಸರ್ಕಾರ ಇದರ ಬಗ್ಗೆ ಘೋಷಣೆ ಮಾಡಿದೆ.
ಜನವರಿ 1ರಿಂದಲೇ ಅನ್ವಯವಾಗುವಂತೆ ಈ ಆದೇಶ ಜಾರಿಗೊಳಿಸಲಾಗಿದೆ. ನಿಯಮಗಳ ಪ್ರಕಾರ, DA 50 ಪ್ರತಿಶತವನ್ನು ತಲುಪಿದರೆ, ಮನೆ ಬಾಡಿಗೆ ಭತ್ಯೆ (HRA) & ಇತರ ಕೆಲವು ಭತ್ಯೆಗಳು ಬದಲಾಗಲಿದೆ. ಹಾಗಾಗಿ DA ಹೆಚ್ಚಳದ ನಂತರ ಕೇಂದ್ರ ನೌಕರ ಇದೀಗ ಮತ್ತೊಂದು ಭತ್ಯೆ ಏರಿಕೆಗಾಗಿ ಕಾಯುತ್ತಿದ್ದಾರೆ.
Contents
HRA ಬದಲಾವಣೆ ಕುರಿತು ಯಾವುದೇ ಆದೇಶ ಹೊರಡಿಸಿಲ್ಲ:
ಡಿಒಪಿಟಿ ಈಗಾಗಲೇ ಭತ್ಯೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. DA ಹೆಚ್ಚಳದ ನಂತರ ಇದನ್ನು ಪರಿಷ್ಕರಿಸಲಾಗುವುದು. ಆದರೆ ಮನೆ ಬಾಡಿಗೆ ಭತ್ಯೆ ಕುರಿತು ಯಾವುದೇ ಆದೇಶ ಹೊರಡಿಸಿಲ್ಲಾ. ಕೇಂದ್ರ ಸರ್ಕಾರ HRA ಬದಲಾವಣೆ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುವುದೇ ಎಂಬ ಪ್ರಶ್ನೆ. DA 50 ಪರ್ಸೆಂಟ್ ತಲುಪಿದ ಕಾರಣ ಮನೆ ಬಾಡಿಗೆ ಭತ್ಯೆ ಎಷ್ಟು ಏರಿಕೆಯಾಗಲಿದೆ?
ಡಿಎ 50% ತಲುಪಿದಾಗ HRA ಯಲ್ಲಿ ಬದಲಾವಣೆಯಾಗುತ್ತದೆ. ಆದರೆ HRA ನಗರಕ್ಕೆ ಅನುಸಾರವಾಗಿ ಬದಲಾವಣೆಯಾಗಲಿದೆ. ನಗರವು ಉದ್ಯೋಗಿ & ಅವನ ಕುಟುಂಬ ವಾಸಿಸುವ ಸ್ಥಳವಾಗಿದೆ. HRA ಲೆಕ್ಕಾಚಾರಕ್ಕಾಗಿ ಕೆಲವು ಆಧಾರದ ಮೇಲೆ ನಗರಗಳನ್ನು X, Y & Z ವರ್ಗಗಳಾಗಿ ವರ್ಗೀಕರಿಸಲಾಗಿದೆ. 7ನೇ ವೇತನ ಆಯೋಗದ ಪ್ರಕಾರ HRA ಅನ್ನು 1 ಜುಲೈ 2017 ರಿಂದ ವರ್ಗ X, Y & Z ನಗರಗಳಿಗೆ ಕ್ರಮವಾಗಿ 24%, 16% & 8% ಮೂಲ ವೇತನಕ್ಕೆ ಏರಿಕೆಯಾಗಲಿದೆ.
ಹಳೆಯ ದರದಂತೆ HRA ಲೆಕ್ಕ
DA 25% ತಲುಪಿದಾಗ, X, Y & Z ನಗರಗಳಿಗೆ HRA ದರವು ಕ್ರಮವಾಗಿ ಮೂಲ ವೇತನದ 27%, 18% & 9% ಏರಿಸಲಾಯಿತು. ಇದರ ಪ್ರಕಾರ ಉದ್ಯೋಗಿಯ ಮೂಲ ವೇತನವು 35,000 ರೂ.ಗಳಾಗಿದ್ದರೆ ನಗರ ವರ್ಗದ ಪ್ರಕಾರ HRA ಈ ರೀತಿ ಇರುತ್ತದೆ.
1.) X ವರ್ಗದ ನಗರಗಳಿಗೆ, ₹35,000 ಮೂಲ ವೇತನವಾದರೆ 27% ಅಂದರೆ ₹9,450
2.) Z ವರ್ಗದ ನಗರಗಳಿಗೆ, 3,150 ರೂ.
3.) Y ವರ್ಗದ ನಗರಗಳಿಗೆ 6,300 ರೂ.
ಎಕ್ಸ್ ಕೆಟಗರಿ ನಗರಕ್ಕೆ HRA ₹9450 ಕೆಟಗರಿ ನಗರಕ್ಕೆ ₹6300 & ಝಡ್ ಕೆಟಗರಿ ನಗರಕ್ಕೆ ₹3150 ಆಗುತ್ತದೆ. ಆದರೆ ಈಗ 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ DA 50% ಆಗಿರುವಾಗ X, Y & Z ವರ್ಗದ ನಗರಗಳಿಗೆ ಕ್ರಮವಾಗಿ 30%, 20% & 10% ಆಗಿರಬೇಕು.
ಹೊಸ ದರದಂತೆ HRA ಲೆಕ್ಕಾಚಾರ :
ಈಗ ಹೊಸ ದರದ ಪ್ರಕಾರ ₹35,000 ಮೂಲ ವೇತನವಿರುವ ಕೇಂದ್ರ ನೌಕರರಿಗೆ ಪರಿಷ್ಕೃತ HRA ನೀಡಲಾಗುವುದು.
1.) X ವರ್ಗದ ನಗರಗಳಿಗೆ, ₹35,000 ಮೂಲವೇತನದ ಪ್ರಕಾರ HRA 30% ಅಂದರೆ ₹10,500
2.) Z ವರ್ಗದ ನಗರಗಳಿಗೆ, 3,500 ರೂ .
3.) Y ವರ್ಗದ ನಗರಗಳಿಗೆ, 7,000 ರೂ.
ವೇತನದಲ್ಲಿ ಎಷ್ಟೆಲ್ಲಾ ಬದಲಾವಣೆಯಾಗಲಿದೆ
ಎಚ್‌ಆರ್ ಎಕ್ಸ್ ಮಾದರಿ ನಗರಕ್ಕೆ ₹10500 ವೈ ಮಾದರಿಗೆ ₹7000 & ಝಡ್ ಮಾದರಿಯ ನಗರಕ್ಕೆ ₹3500 ಹೆಚ್ಚಾಗಲಿದೆ. ಎಕ್ಸ್ ಟೈಪ್ ಸಿಟಿ ಹೋಲ್ಡರ್ ತಿಂಗಳಿಗೆ ₹1050 ವಾರ್ಷಿಕ ಆಧಾರದಲ್ಲಿ ₹12600 HRA ಪಡೆದುಕೊಳ್ಳುತ್ತಾರೆ. ವರ್ಗಕ್ಕೆ ಸೇರಿದವರಿಗೆ ₹8400 ಝಡ್ ವರ್ಗಕ್ಕೆ ಸೇರಿದವರು ವಾರ್ಷಿಕವಾಗಿ ₹4200 ಹೆಚ್ಆರ್ ಪಡೆದುಕೊಳ್ಳುತ್ತಾರೆ.
ಇತರೆ ವಿಷಯಗಳು
PDO ಹುದ್ದೆಗೆ ಅರ್ಜಿ ಸಲ್ಲಿಕೆ ಆರಂಭ.! ₹70,850 ವೇತನ ಪಡೆಯಲು ಇಂದೇ ಅರ್ಜಿ ಸಲ್ಲಿಸಿ
ಹೆಣ್ಣು ಮಕ್ಕಳಿಗೆ 50 ಸಾವಿರ!! ನೀವು ಈ ಹಣ ಪಡೆಯಲು ತಕ್ಷಣ ಅರ್ಜಿ ಹಾಕಿ