rtgh
Headlines

ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಇಂತಹವರಿಗೆ ಇನ್ಮುಂದೆ ಈ ಸೌಲಭ್ಯ ಇಲ್ಲ

gruha jyothi scheme update
Share

ಹಲೋ ಸ್ನೇಹಿತರೇ, ರಾಜ್ಯದ ನಗರ ಪ್ರದೇಶಗಳಲ್ಲಿ ಪ್ರಾರಂಭಿಸಿ ಹಳ್ಳಿ ಪ್ರದೇಶಗಳವರೆಗೂ ಕೂಡ ವಿದ್ಯುತ್ ಹಣವನ್ನು ಜನರು ಉಳಿತಾಯ ಮಾಡುತ್ತಿದ್ದಾರೆ. 200 ಯೂನಿಟ್ ವರೆಗೂ ಕೂಡ ವಿದ್ಯುತ್ ಅನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳುವ ಮೂಲಕ ತಮ್ಮ ಖರ್ಚಿನಲ್ಲಿ ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಆದರೆ ವಿದ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿರುವಂತಹ ಕುಟುಂಬಗಳಿಗೆ ಸ್ವಲ್ಪಮಟ್ಟಿಗೆ ಕಹಿ ನ್ಯೂಸ್ ಹೊರ ಬಂದಿದೆ ಎಂಬುದಾಗಿ ತಿಳಿದುಬಂದಿದೆ.

gruha jyothi scheme update

Contents

ಹೆಚ್ಚಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದೀರಾ?

ಈಗ ಇಡೀ ಕರ್ನಾಟಕ ರಾಜ್ಯದಲ್ಲಿ ತಾಪಮಾನ ಯಾವ ರೀತಿ ಇದೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಬಿಸಿಲು ಬೆಂಕಿಯ ರೂಪವನ್ನು ಪಡೆದುಕೊಂಡಿದೆ. ಬಿಸಿಲಿನ ಈ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಚ್ಚಾಗಿ ಜನರು ಫ್ಯಾನ್ ಹಾಗೂ ಕೂಲರ್ ಮತ್ತು ಎಸಿ ಗಳಂತಹ ಉಪಕರಣಗಳನ್ನು ಬಳಸುತ್ತಿದ್ದಾರೆ.

ಇದರಿಂದಾಗಿ ಬರುತ್ತಿರುವಂತಹ ಕರೆಂಟ್ ಬಿಲ್ ಕೂಡ ಹೆಚ್ಚಾಗುತ್ತಿದೆ. 200 ಯೂನಿಟ್ ವರೆಗೆ ಮಾತ್ರ ಉಚಿತ ವಿದ್ಯುತ್ ನೀಡುವಂತಹ ಘೋಷಣೆ ಸರ್ಕಾರ ಮಾಡಿರುವುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿದೆ.

ಆದರೆ ಈಗ ಇರುವಂತಹ ಬಿಸಿಲಿನ ಬೇಗೆಗೆ ಆ ಲಿಮಿಟ್ ಅನ್ನು ಮರೆತು ಹೆಚ್ಚಾಗಿಯೇ ಕರೆಂಟ್ ಅನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ ಉಚಿತ ವಿದ್ಯುತ್ ಲಾಭವನ್ನು ಪಡೆದುಕೊಳ್ಳುವುದು ಅಸಾಧ್ಯ ಆಗಬಹುದಾಗಿದೆ.

ಇದನ್ನೂ ಸಹ ಓದಿ : ನರೇಗಾ ಕಾರ್ಮಿಕರ ದಿನಗೂಲಿ ಹೆಚ್ಚಳ! ಯಾವ ರಾಜ್ಯದಲ್ಲಿ ಎಷ್ಟು ವೇತನ ಹೆಚ್ಚಿಸಲಾಗಿದೆ?

ಗೃಹಜ್ಯೋತಿ ಯೋಜನೆಯ ಪ್ರಯೋಜನ ಇವರಿಗಿಲ್ಲ:

ಗೃಹ ಜ್ಯೋತಿ ಯೋಜನೆಯ ಪ್ರಕಾರ ನೀವು ವಾರ್ಷಿಕವಾಗಿ ಬಳಕೆ ಮಾಡಿರುವಂತಹ ವಿದ್ಯುತ್ ಮೇಲೆ 20 ಯೂನಿಟ್ ಹೆಚ್ಚಿಗೆ ಬಳಕೆ ಮಾಡಬಹುದಾಗಿದೆ. ಉದಾಹರಣೆಗೆ ನಿಮಗೆ 150 ಯೂನಿಟ್ ಉಚಿತ ವಿದ್ಯುತ್ ಪಡೆದುಕೊಳ್ಳುವಂತಹ ಅವಕಾಶವನ್ನು ಸರ್ಕಾರ ನೀಡಿದರೆ ನಿಗದಿತ ಯೂನಿಟ್ ಗಿಂತ 50 ಯೂನಿಟ್ ಹೆಚ್ಚಿಗೆ ಬಳಕೆ ಮಾಡಿದರೆ ಆ ಸಂದರ್ಭದಲ್ಲಿ ಪ್ರತಿ ಯೂನಿಟ್ ಗೆ ಏಳು ರೂಪಾಯಿ ಹಣವನ್ನು ಹೆಚ್ಚಾಗಿ ಕಟ್ಟ ಬೇಕಾಗಿರುತ್ತದೆ.

ಒಂದು ವೇಳೆ ನೀವು ಸರ್ಕಾರ ನಿಗದಿಪಡಿಸಿರುವಂತಹ 200 ಯೂನಿಟ್ ಗಳಿಗಿಂತ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡಿದರೆ ಆ ಸಂದರ್ಭದಲ್ಲಿ ಸಂಪೂರ್ಣ ಹಣವನ್ನು ನೀವು ಕಟ್ಟಬೇಕಾಗುತ್ತದೆ ಎಂಬುದಾಗಿ ಸರ್ಕಾರಿ ಮೂಲಗಳಿಂದ ನಿಯಮ ಜಾರಿಗೆ ಬಂದಿದೆ.

ಬಿಸಿಲಿನ ಬೇಗೆಯ ಕಾರಣದಿಂದಾಗಿ ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿರುವ ಕಾರಣದಿಂದಾಗಿ ವಿದ್ಯುತ್ ಬಳಕೆ ಕೂಡ ಗಣನೀಯವಾಗಿ ಹೆಚ್ಚಾಗಿದೆ. ಮಾರ್ಚ್ ತಿಂಗಳಿನಲ್ಲಿ ವಿದ್ಯುತ್ ಬೇಡಿಕೆ 20 ಪ್ರತಿಶತ ಹೆಚ್ಚಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಒಂದು ವೇಳೆ ಗೃಹಜ್ಯೋತಿ ಯೋಜನೆಯ ನೀವು ಮುಂದೆಯೂ ಕೂಡ ಪಡೆದುಕೊಳ್ಳಬೇಕು ಎಂದಾದಲ್ಲಿ ನೀವು ನಿಮಗೆ ನೀಡಿರುವಂತಹ ಲಿಮಿಟ್ ಒಳಗೆ ವಿದ್ಯುತ್ ಅನ್ನು ಖರ್ಚು ಮಾಡಬೇಕಾಗಿರುತ್ತದೆ ಹಾಗೂ ವಿದ್ಯುತ್ ಅಗತ್ಯ ಇಲ್ಲದೆ ಹೋದಲ್ಲಿ ಆಫ್ ಮಾಡುವುದನ್ನು ಮರೆಯಬೇಡಿ. ಇಲ್ಲವಾದಲ್ಲಿ ನೀವು ಹೆಚ್ಚಿನ ವಿದ್ಯುತ್ ಅನ್ನು ಬಳಸುವ ಮೂಲಕ ನಿಮಗೆ ಸಿಕ್ಕಿರುವಂತಹ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಅನ್ನು ಅನ್ನು ಕಳೆದುಕೊಳ್ಳಬೇಕಾಗುತ್ತದೆ.

ಇತರೆ ವಿಷಯಗಳು:

ರೈತರಿಗೆ ಪ್ರತಿ ವರ್ಷ ₹6000 ಆರ್ಥಿಕ ನೆರವು.! ಹೊಸದಾಗಿ ನೋಂದಣಿ ಮಾಡುವವರಿಗೆ ಇಲ್ಲಿದೆ ಸುಲಭ ಪ್ರಕ್ರಿಯೆ

ನರೇಗಾ ಕಾರ್ಮಿಕರಿಗೆ ಕೂಲಿ ಹೆಚ್ಚಿಸಿದ ಕೇಂದ್ರ.! ಹೊಸ ಆದೇಶದಂತೆ ಕರ್ನಾಟಕಕ್ಕೆ ಎಷ್ಟು ಸಿಗಲಿದೆ?

ಗ್ರಾಮ ಪಂಚಾಯತಿ ಹುದ್ದೆಗಳ ಹೊಸ ನೇಮಕಾತಿ ಅರ್ಜಿ ಆಹ್ವಾನ!! PUC ಪಾಸ್‌ ಆದವರಿಗೆ ಸುವರ್ಣಾವಕಾಶ


Share

Leave a Reply

Your email address will not be published. Required fields are marked *