rtgh
Headlines

ನರೇಗಾ ಕಾರ್ಮಿಕರಿಗೆ ಕೂಲಿ ಹೆಚ್ಚಿಸಿದ ಕೇಂದ್ರ.! ಹೊಸ ಆದೇಶದಂತೆ ಕರ್ನಾಟಕಕ್ಕೆ ಎಷ್ಟು ಸಿಗಲಿದೆ?

Mgnrega Wage Hike
Share

ಹಲೋ ಸ್ನೇಹಿತರೇ, ಲೋಕಸಭಾ ಚುನಾವಣೆ ವೇಳೆಯಲ್ಲಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯ ಕೂಲಿಯನ್ನು ಹೆಚ್ಚಿಗೆ ಮಾಡಿ ಆದೇಶ ಹೊರಡಿಸಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ಲೇಖನವನ್ನು ಓದಿ.

Mgnrega Wage Hike

ಸರ್ಕಾರದ ಈ ಆದೇಶ ಏಪ್ರಿಲ್‌ 1 ರಿಂದ ಜಾರಿಯಾಗಲಿದೆ, ಕರ್ನಾಟಕದಲ್ಲಿ ದಿನಕ್ಕೆ 33 ರೂ. ಹೆಚ್ಚಿಗೆ ಮಾಡಲಾಗಿದೆ. ಹೊಸ ಕೂಲಿಯಂತೆ ಕರ್ನಾಟಕದಲ್ಲಿ ದಿನಕ್ಕೆ 349 ರೂ. ಸಿಗುತ್ತದೆ. ಹರಿಯಾಣಕ್ಕೆ ಗರಿಷ್ಠ ಕೂಲಿ ನಿಗದಿಯಾಗಿದೆ ಅರುಣಾಚಲ ಪ್ರದೇಶ & ನಾಗಾಲ್ಯಾಂಡ್‌ಗೆ ಕನಿಷ್ಠ ಕೂಲಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆಯಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕರಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೂಲಿಯನ್ನು ಹೆಚ್ಚು ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವಾಲಯವು ಸೂಚಿಸಿರುವ ಹೊಸ ಕೂಲಿಯು ಏಪ್ರಿಲ್‌ 1ರಿಂದ ಜಾರಿಯಾಗಲಿದೆ.

ಕರ್ನಾಟಕದಲ್ಲಿ ಕೂಲಿ ಶೇ. 10.44ರಷ್ಟು ಏರಿಕೆಯಾಗಿದೆ, ಈಗಿರುವ ದೈನಂದಿನ 316 ರೂ. ಕೂಲಿಯು ಏಪ್ರಿಲ್‌ 1ರಿಂದ ಇದು 349ರೂ. ಗೆ ಹೆಚ್ಚಳವಾಗಲಿದೆ. ಅಧಿಸೂಚನೆಯ ಪ್ರಕಾರ, ಹರಿಯಾಣಕ್ಕೆ ಗರಿಷ್ಠ ಕೂಲಿ (ದಿನಕ್ಕೆ 374 ರೂ.) ನಿಗದಿ ಮಾಡಲಾಗಿದ್ದಿ, ಅರುಣಾಚಲ ಪ್ರದೇಶ & ನಾಗಾಲ್ಯಾಂಡ್‌ಗೆ ಕನಿಷ್ಠ ಕೂಲಿ (ದಿನಕ್ಕೆ 234 ರೂ.) ಗೊತ್ತು ಮಾಡಲಾಗಿದೆ.

ಶೇ. 10. 56ರಷ್ಟು ಏರಿಕೆ ಮೂಲಕ ಶೇಕಡವಾರು ಕೂಲಿ ಹೆಚ್ಚಳದಲ್ಲಿ ಗೋವಾ ನಂ.1 ಸ್ಥಾನ ಪಡೆದಿದೆ. ಆದರೆ, ಉತ್ತರಪ್ರದೇಶ & ಉತ್ತರಾಖಂಡದಲ್ಲಿ ಶೇ. 3.04ರಷ್ಟು ಮಾತ್ರ ಶೇಕಡವಾರು ಏರಿಕೆಯಾಗಿದೆ.

ಕೂಲಿ ಹೆಚ್ಚಳಕ್ಕೆ ಮಾನದಂಡ?

  • ಮನರೇಗಾ ಕಾಯಿದೆ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯವಾರು ಕೂಲಿ ನಿಗದಿ ಮಾಡಿದೆ.
  • ರಾಜ್ಯದ ಕೃಷಿ ಕೂಲಿ & ಹಾಲಿ ಗ್ರಾಹಕ ಬೆಲೆ ಸೂಚ್ಯಂಕವನ್ನಾಧಿರಿಸಿ ಏರಿಕೆ ಮೊತ್ತ ನಿರ್ಣಯ ಮಾಡಲಾಗಿದೆ.

ಕೂಲಿ ಏರಿಕೆ

ರಾಜ್ಯ2023-242024-25ಏರಿಕೆ ಪ್ರಮಾಣ
ಗೋವಾ322356ಶೇ.10.56
ಕರ್ನಾಟಕ316349ಶೇ. 10.44
ಆಂಧ್ರಪ್ರದೇಶ272300ಶೇ. 10.29
ತೆಲಂಗಾಣ272300ಶೇ. 10.29
ಛತ್ತೀಸಗಢ221243ಶೇ. 9.95

ಇತರೆ ವಿಷಯಗಳು

ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಭರ್ಜರಿ ನೇಮಕಾತಿ !! ನಿಮ್ಮ ಊರಲ್ಲೇ ಸಿಗತ್ತೆ ಉದ್ಯೋಗ

ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಂತಾ ಚೆಕ್‌ ಮಾಡಿ? ಇಲ್ಲಿದೆ ಡೈರೆಕ್ಟ್ ಲಿಂಕ್


Share

Leave a Reply

Your email address will not be published. Required fields are marked *