rtgh
Headlines

ಮಾರ್ಚ್ 31ರ ಒಳಗೆ ಕೃಷಿ ಸಾಲದ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ! ರಾಜ್ಯ ಸರ್ಕಾರದ ಘೋಷಣೆ

Agricultural loan interest waiver
Share

ಹಲೋ ಸ್ನೇಹಿತರೇ, ರೈತರ ಕೃಷಿ ಸಾಲ ಮನ್ನಾ ಮಾಡುವ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ. ಸಾಕಷ್ಟು ರೈತರು ಕೃಷಿ ಸಾಲ ಮನ್ನಾ ವಿಚಾರವಾಗಿ ಸಂತಸದಲ್ಲಿ ಇದ್ದಾರೆ, ಇಂಥವರಿಗೆ ಈಗ ಒಂದು ಮುಖ್ಯವಾದ ಆದೇಶವನ್ನು ಸರ್ಕಾರ ನೀಡಿದ್ದು ಇದೇ ಬರುವ 31 ಮಾರ್ಚ್ 2024ರ ಒಳಗೆ ಈ ಕೆಲಸ ಮಾಡಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

Agricultural loan interest waiver

Contents

ಮಾರ್ಚ್ 31ರ ಒಳಗೆ ಅಸಲು ಪಾವತಿ ಮಾಡಿದ್ರೆ ಬಡ್ಡಿ ಮನ್ನಾ:

ಪ್ರಾಥಮಿಕ ಸಹಕಾರಿ ಕೃಷಿ ಬ್ಯಾಂಕ್ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ಗಳಲ್ಲಿ ರೈತರು ಕೃಷಿ ಸಾಲ ತೆಗೆದುಕೊಂಡಿದ್ದರೆ ಅವರ ಬಡ್ಡಿಯನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿತು. ಆದರೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದಾದರೆ ಮಾರ್ಚ್ 31 2024ರ ಒಳಗೆ ಸಾಲದ ಅಸಲು ಪಾವತಿ ಮಾಡಬೇಕು. ಈ ರೀತಿಯ ಅಸಲು ಪಾವತಿ ಮಾಡಿದರೆ ಬಡ್ಡಿ ಮನ್ನಾ ಆಗುತ್ತದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು, ಮೊದಲಾದ ಬ್ಯಾಂಕುಗಳಲ್ಲಿ ರೈತರು ಸಾಲ ಪಡೆದುಕೊಂಡಿದ್ದರೆ, ಮಾರ್ಚ್ 31 2024ರ ಒಳಗೆ ಅಲ್ಪಾವಧಿಯ ಅಥವಾ ದೀರ್ಘಾವಧಿಯ ಸಾಲದ ಅಸಲು ಮರುಪಾವತಿ ಮಾಡಲು ಅವಕಾಶ ನೀಡಲಾಗಿದ್ದು, ಈ ಅವಧಿಯೊಳಗೆ ಅಸಲು ಮರುಪಾವತಿ ಆದರೆ ಅಂಥವರ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಸರ್ಕಾರ ಮತ್ತೆ ಆದೇಶ ಹೊರಡಿಸಿದೆ.

ಇದನ್ನೂ ಸಹ ಓದಿ : ಈಗ ಮತದಾರರ ಕಾರ್ಡ್ ಮಾಡುವುದು ಇನ್ನಷ್ಟು ಸುಲಭ! ಒಂದೇ ಕ್ಲಿಕ್ ನಲ್ಲಿ ಮನೆಯಲ್ಲಿ ಕುಳಿತು ಅರ್ಜಿ ಸಲ್ಲಿಸಿ

ಸರ್ಕಾರ ಫೆಬ್ರವರಿ 29, 2024ರ ವರೆಗೆ ಬಡ್ಡಿ ಮನ್ನಾ ಪಡೆದುಕೊಳ್ಳಲು ಅಸಲು ಪಾವತಿ ಮಾಡುವುದಕ್ಕೆ ಅವಕಾಶ ನೀಡಿತ್ತು. ಆದರೆ ಈಗ ಮತ್ತೆ ಸಮಯ ಅವಕಾಶ ವಿಸ್ತರಣೆ ಮಾಡಲಾಗಿದ್ದು, 31 ಮಾರ್ಚ್ 2024 ಫಸಲು ಮರುಪಾವತಿ ಮಾಡಲು ಕೊನೆಯ ದಿನಾಂಕ ಎಂದು ತಿಳಿಸಲಾಗಿದೆ.

ಹೌದು, ಮಾರ್ಚ್ 31-2024ಕ್ಕೆ ಸುಸ್ತಿಯಾಗುವ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಲ್ಲಿ ತೆಗೆದುಕೊಂಡು ಸಾಲ ಮರುಪಾವತಿ ಮಾಡಬೇಕಿತ್ತು. ಸಹಕಾರಿ ಸಂಘಗಳು ತಿಳಿಸಿರುವ ಮಾಹಿತಿಯ ಪ್ರಕಾರ, ಫೆಬ್ರುವರಿ 29.2024ರ ಹೊತ್ತಿಗೆ 29,456 ರೈತರು 281.88 ಕೋಟಿ ರೂಪಾಯಿಗಳ ಸುಸ್ತಿ ಸಾಲವನ್ನು ಮರುಪಾವತಿ ಮಾಡಿದ್ದಾರೆ. ಇದರ ಮೇಲೆ ಸರ್ಕಾರ ಒದಗಿಸಿರುವ ಬಡ್ಡಿ 214.55 ಕೋಟಿ ರೂಪಾಯಿಗಳು.

ಬರಗಾಲದ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ರೈತರಿಗೂ ಅಸಲು ಮರುಪಾವತಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೆ ಒಂದು ತಿಂಗಳ ಅವಕಾಶವನ್ನು ಸರ್ಕಾರ ನೀಡಿದ್ದು ಮಾರ್ಚ್ 31 2024ರ ಒಳಗೆ ಅಸಲು ಮರುಪಾವತಿ ಮಾಡಿದರೆ ಅಂತ ರೈತರಿಗೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇತರೆ ವಿಷಯಗಳು:

ರೈತ ಪಿಂಚಣಿ: ಪ್ರತಿ ತಿಂಗಳು 3,000 ನೀಡಲು ಹೊಸ ಘೋಷಣೆ!!

ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಭರ್ಜರಿ ನೇಮಕಾತಿ !! ನಿಮ್ಮ ಊರಲ್ಲೇ ಸಿಗತ್ತೆ ಉದ್ಯೋಗ

ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಬಂತಾ ಚೆಕ್‌ ಮಾಡಿ? ಇಲ್ಲಿದೆ ಡೈರೆಕ್ಟ್ ಲಿಂಕ್


Share

Leave a Reply

Your email address will not be published. Required fields are marked *