rtgh
Headlines

FDA, SDA ಸರ್ಕಾರಿ ಹುದ್ದೆಗಳ ನೇಮಕ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಫಿಕೇಶನ್ ಬಿಡುಗಡೆ

FDA SDA recruitment
Share

ಹಲೋ ಸ್ನೇಹಿತರೇ, ಬೆಂಗಳೂರು ಡೆವಲಪ್ಮೆಂಟ್‌ ಅಥಾರಿಟಿಯಲ್ಲಿ ಪದವಿ ಪಾಸಾದವರು ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಜಾಬ್ ಆಫರ್‌ನ ನೋಟಿಫಿಕೇಶನ್‌ ಬಿಡುಗಡೆಯಾಗಿದೆ. FDA, SDA ಹುದ್ದೆಗಳ ಭರ್ತಿಗೆ ಸಂಬಂಧಿಸಿ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ಓದಿ.

FDA SDA recruitment

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು & ದ್ವಿತೀಯ ದರ್ಜೆ ಸಹಾಯಕರು ಹುದ್ದೆಯ ಭರ್ತಿಗಾಗಿ ಕರ್ನಾಟಕ Examination ಅಥಾರಿಟಿ ಮುಖಾಂತರ ನೇರ ನೇಮಕಾತಿ ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆಯಾಗಿದೆ.

ಬಿಡಿಎ’ನಲ್ಲಿ ಉಳಿಕೆ ಮೂಲ ವೃಂದ & ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದ ಹುದ್ದೆಯಾಗಿದ್ದು, ಇವುಗಳ ಭರ್ತಿಗೆ ಕೆಇಎ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುವುದು. ಒಟ್ಟು ಹುದ್ದೆಗಳ ಪೈಕಿ ಉಳಿಕೆ ಮೂಲ ವೃಂದದ 18 ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ 7 ಪೋಸ್ಟ್‌ಗಳಿವೆ.

ಪ್ರಸ್ತುತ ಶಾರ್ಟ್‌ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ, ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆ, ವೇತನ ವಿವರ, ಅಭ್ಯರ್ಥಿಗಳ ಇತರೆ ಅರ್ಹತೆ, ವಯಸ್ಸಿನ ಅರ್ಹತೆ, ಪರೀಕ್ಷೆ ಮಾದರಿ ಮತ್ತು ಆಯ್ಕೆ ಪ್ರಕ್ರಿಯೆ ನಿಯಮ, ಇತರೆ ಮಾಹಿತಿಗಳೊಂದಿಗೆ ಮಾರ್ಚ್‌ 24 ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಲಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪ್ರಥಮ ದರ್ಜೆ ಸಹಾಯಕರು & ದ್ವಿತೀಯ ದರ್ಜೆ ಸಹಾಯಕರು ಹುದ್ದೆಗೆ ಆನ್‌ಲೈನ್‌ ಮೂಲಕವಾಗಿ ಅರ್ಜಿಯನ್ನು ಮಾರ್ಚ್ 24 ರಿಂದ ಏಪ್ರಿಲ್ 23, 2024 ರವರೆಗೂ ಸ್ವೀಕರಿಸಲಾಗುತ್ತದೆ. ಅರ್ಜಿ ಲಿಂಕ್‌ ಅನ್ನು ಸಹ ಮಾರ್ಚ್ 24 ರಂದೇ ಬಿಡುಗಡೆ ಮಾಡಲಾಗುತ್ತದೆ. ಅರ್ಜಿ ಶುಲ್ಕ ಪಾವತಿಗೆ ಏಪ್ರಿಲ್ 25 ರವರೆಗೂ ಅವಕಾಶ ನೀಡಲಾಗುತ್ತದೆ ಎಂದು ಈಅಧಿಸೂಚನೆಯಲ್ಲಿ ತಿಳಿಸಲಾಗುವುದು.

ವಿದ್ಯಾರ್ಹತೆ
ಪ್ರಥಮ ದರ್ಜೆ ಸಹಾಯಕರು : ಪದವಿ ಪಾಸ್‌ / ತತ್ಸಮಾನ ಪರೀಕ್ಷೆ ಪಾಸ್.
ದ್ವಿತೀಯ ದರ್ಜೆ ಸಹಾಯಕರು :12nd PUC ಪಾಸ್‌ / ತತ್ಸಮಾನ ಪರೀಕ್ಷೆ ಪಾಸ್.

ಅಪ್ಲಿಕೇಶನ್‌ ಹಾಕುವ ವಿಧಾನ
ಬಿಡಿಎ’ಯ ಸರ್ಕಾರಿ FDA, SDA ಹುದ್ದೆಗಳಿಗೆ ಅರ್ಜಿ ಸಲ್ಲಿಸಲು KEA ವೆಬ್‌ ವಿಳಾಸ http://kea.kar.nic.in ಗೆ ಭೇಟಿ ಮಾಡಿ ‘ಇತ್ತೀಚಿನ ಪ್ರಕಟಣೆಗಳು’ ಕಾಲಂನಲ್ಲಿ ‘BDA – Recruitment 2024’ ಎಂದಿರುತ್ತದೆ ಅದನ್ನು ಲಿಂಕ್‌ ಕ್ಲಿಕ್ ಮಾಡಿ, ಆನ್‌ಲೈನ್‌ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು. ಈ ಲಿಂಕ್‌ ಅನ್ನು KEA ಮಾರ್ಚ್ 24 ರಂದು ಲಭ್ಯವಾಗಲಿದೆ.

ವೇತನ ಶ್ರೇಣಿ ವಿವರ
ಪ್ರಥಮ ದರ್ಜೆ ಸಹಾಯಕರು (ಗ್ರೂಪ್ C) : ₹27650 – ₹52650
ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಮಾಸಿಕ ವೇತನ ₹21400 – ₹42000.

ಇತರೆ ವಿಷಯಗಳು

PPF, SSY, NPSಗಳಲ್ಲಿ ಖಾತೆ ಇದಿಯಾ? ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ಆಗಲಿದೆ ದೊಡ್ಡ ನಷ್ಟ

ಈ ತಿಂಗಳ ಪಿಎಂ ಕಿಸಾನ್ ಪ್ರಸ್ತಾವನೆ ಬಿಡುಗಡೆ! ಈ ಬಾರಿ ರೈತರಿಗೆ ಪೂರ್ಣ ₹ 8 ಸಾವಿರ ಸಿಗಲಿದೆ


Share

Leave a Reply

Your email address will not be published. Required fields are marked *