rtgh
Headlines

ಪದವಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇಂಟರ್ನ್‌ಶಿಪ್ ಜೊತೆಗೆ 17,000 ಸಂಬಳ ನೀಡಲು ರಾಜ್ಯ ಸರ್ಕಾರ ಚಿಂತನೆ

Graduate student internships
Share

ಹಲೋ ಸ್ನೇಹಿತರೇ, ಪದವಿ ವಿದ್ಯಾರ್ಥಿಗಳಿಗೆ ಇಲ್ಲಿಯವರೆಗೂ ಇಂಟರ್ನ್ಶಿಪ್ ಎಂಬುವ ಆಪ್ಷನ್ ಇರಲಿಲ್ಲ. ಇಂಜಿನಿಯರ್ ಡಿಗ್ರೀಯನ್ನು ಹೊರತು ಪಡಿಸಿ ಉಳಿದ ಎಲ್ಲಾ ಡಿಗ್ರೀ ವಿದ್ಯಾರ್ಥಿಗಳು ಡಿಗ್ರೀ ಮುಗಿದ ನಂತರದಲ್ಲಿ ಡೈರೆಕ್ಟ್ ಆಗಿ ಉದ್ಯೋಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಉದ್ಯೋಗದ ಬಗ್ಗೆ ಯಾವ ರೀತಿಯ ಮಾಹಿತಿಯೂ ಇರುವುದಿಲ್ಲ. ಇಂಟರ್ನ್ ಶಿಪ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Graduate student internships

ಪದವಿ ವಿದ್ಯಾರ್ಥಿಗಳು ಉದ್ಯೋಗಕ್ಕೆ ಹೋದಾಗ ಕಡಿಮೆ ಸಂಬಳ ನೀಡಲಾಗುವುದು. ಇದನ್ನು ಪರಿಗಣಿಸಿದ ಸರ್ಕಾರ ಇನ್ನೂ ಮುಂದೆ BCOM, BA, BSC ಅಂತಹ ಪದವಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಜಾರಿಗೆ ತರುವ ಬಗ್ಗೆ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ, ಸಿ ಸುಧಾಕರ್ ತಿಳಿಸಿದ್ದಾರೆ.

ಇಂಟರ್ನ್ಶಿಪ್ ನಲ್ಲಿ ಸಿಗುವ ಸಂಬಳ :-

ಇಂಟರ್ನ್ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ 11,000 ರೂ. ನಿಂದ 17,000 ಸಂಬಳ ನೀಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ತರಬೇತಿಯ ಸಮಯದಲ್ಲಿ ಕೌಶಲ್ಯದ ಬಗ್ಗೆ ಕಲಿಕೆ ಸಾಧ್ಯ. ಹಾಗೂ ಮುಂದಿನ ಜೀವನಕ್ಕೆ ಒಂದು ಉತ್ತಮ ಅಡಿಪಾಯವು ಸಿಗುತ್ತದೆ. ಎಇಡಿಪಿ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನಡೆಸಲಾಗುತ್ತದೆ. ಇದರ ಜೊತೆಗೆ ಉನ್ನತ ಶಿಕ್ಷಣದಲ್ಲಿ ಹಲವು ಬದಲಾವಣೆಯನ್ನು ತರಲು ಇಲಾಖೆಯು ನಿರ್ಧಾರವನ್ನು ಮಾಡಿದೆ. ಹಾಗೂ ಬೋಧಕರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ, ಸಿ ಸುಧಾಕರ್ ಅವರು ಹೇಳಿದ್ದಾರೆ.

ಇಂಟರ್ನ್ಶಿಪ್ ಮಾಡುವುದರಿಂದ ಏನು ಲಾಭ:

  • ಇಂಟರ್ನ್ಶಿಪ್ ನಿಮಗೆ ಒಂದು ಕ್ಷೇತ್ರದಲ್ಲಿ ಕೆಲಸದ ಅನುಭವವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ. ಈ ಅನುಭವವು ನಿಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಲು & ನಿಮ್ಮ ರೆಸ್ಯೂಮ್ ಬಲಪಡಿಸಲು ಸಹಾಯವನ್ನು ಮಾಡುತ್ತದೆ.
  • ಇಂಟರ್ನ್ಶಿಪ್ ನಿಮಗೆ ನಿಮ್ಮ ಕ್ಷೇತ್ರದಲ್ಲಿನ ವೃತ್ತಿಪರರೊಂದಿಗೆ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉದ್ಯೋಗಾವಕಾಶಗಳಿಗೆ ಸಹಾಯಕವಾಗಲಿದೆ.
  • ಇಂಟರ್ನ್ಶಿಪ್ ನಿಂದ ನಿಮಗೆ ನಿಮ್ಮ ವೃತ್ತಿಜೀವನದ ಗುರಿಗಳನ್ನು ಪರಿಶೀಲಿಸಲು ಅವಕಾಶ ಮಾಡುತ್ತದೆ. ನಿಮಗೆ ಯಾವ ರೀತಿಯ ಕೆಲಸ ಇಷ್ಟವಾಗಿದೆ & ಯಾವುದು ಇಷ್ಟವಿಲ್ಲ ಎಂಬುದರ ಅರಿಯಲು ನೀಡಲು ಸಹಾಯವಾಗುತ್ತದೆ.
  • ಇಂಟರ್ನ್ಶಿಪ್‌ಗಳು ವೇತನವನ್ನು ನೀಡುವುದರಿಂದ ಇದು ನಿಮ್ಮ ಶಿಕ್ಷಣ ವೆಚ್ಚಗಳನ್ನು ಭರಿಸಲು / ನಿಮ್ಮ ಜೀವನ ವೆಚ್ಚಗಳನ್ನು ಭರಿಸಲು ಸಹಾಯಕವಾಗುತ್ತದೆ.
  • ಇಂಟರ್ನ್ಶಿಪ್ ವಿದ್ಯಾರ್ಥಿಗಳಿಗೆ ಹೊಸ ಕೌಶಲ್ಯಗಳನ್ನು ಕಲಿಯಲು & ನಿಮ್ಮ ಪ್ರಸ್ತುತ ಕೌಶಲ್ಯವನ್ನು ಸುಧಾರಿಸಲು ಅವಕಾಶವನ್ನು ನೀಡುತ್ತದೆ.
  • ಕೌಶಲ್ಯ ತರಬೇತಿಗೆ ಎಂದು ಸಾವಿರಾರು ರೂ.ಗಳನ್ನು ವ್ಯಯ ಮಾಡುವುದನ್ನು ತಪ್ಪಿಸಬಹುದಾಗಿದೆ.
  • ಡಿಗ್ರೀ ಮುಗಿದ ನಂತರ ಕೋರ್ಸ್ಗಳಿಗೆ ಜಾಯಿನ್ ಆಗಿ ಸಮಯ ವ್ಯರ್ಥ ಆಗುವುದನ್ನು ತಪ್ಪಿಸಬಹುದಾಗಿದೆ.
  • ಇಂಟರ್ನಲ್ ಶಿಪ್ ಜಾಯಿನ್ ಆಗೋದರಿಂದ ಕಂಪನಿಯಲ್ಲಿ ಕೆಲಸ ಮಾಡುವ ರೀತಿಯಲ್ಲಿ ನಿಮ್ಮ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ. ಉನ್ನತ ಕಂಪನಿಗಳಲ್ಲಿ ಇಂಟರ್ವ್ಯೂ ಸಂದರ್ಭದಲ್ಲಿ ನಿಮ್ಮ ರೆಸ್ಯುಮ್ ಗೆ ಹೆಚ್ಚಿನ ಪ್ರಾಧಾನ್ಯತೆ ಸಿಗುತ್ತದೆ.

ಇತರೆ ವಿಷಯಗಳು

WCD ಚಾಮರಾಜನಗರ ನೇಮಕಾತಿ 2024, ಪದವಿ ಆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸ ವೋಟರ್ ಐಡಿ ವಿತರಣೆ ಆರಂಭ.! ಕಚೇರಿಗೆ ಅಲೆದಾಡೋ ಬದಲು ಮೊಬೈಲ್‌ನಲ್ಲಿ ಈ ರೀತಿ ಡೌನ್ಲೋಡ್‌ ಮಾಡಿ


Share

Leave a Reply

Your email address will not be published. Required fields are marked *