rtgh
Headlines

PPF, SSY, NPSಗಳಲ್ಲಿ ಖಾತೆ ಇದಿಯಾ? ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ಆಗಲಿದೆ ದೊಡ್ಡ ನಷ್ಟ

PPF, SSY, NPS account update
Share

ಹಲೋ ಸ್ನೇಹಿತರೇ, ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಬೇಕಾಗುತ್ತದೆ. ಖಾತೆಯನ್ನು ಸಕ್ರಿಯವಾಗಿರಿಸಲು, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಬಹಳ ಮುಖ್ಯ. ಮಾರ್ಚ್‌ 31 ರೊಳಗೆ ಯಾವ ಕೆಲಸ ಮಾಡದಿದ್ದರೆ ನಿಮಗೆ ನಷ್ಟವಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

PPF, SSY, NPS account update

Contents

PPF ಬಡ್ಡಿದರ

PPF ಖಾತೆ (PPF) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಮೂಲಕ ಹಣವನ್ನು ಹೂಡಿಕೆ ಮಾಡುತಿದ್ರೆ ಈ ಸುದ್ದಿಯನ್ನು ನೀವು ಓದಬೇಕಾಗುತ್ತದೆ. ಸಣ್ಣ ಉಳಿತಾಯ ಯೋಜನೆಯಡಿಯಲ್ಲಿ, ನೀವು ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಬೇಕಾಗುತ್ತದೆ. ಖಾತೆಯನ್ನು ಸಕ್ರಿಯವಾಗಿರಿಸಲು, ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಇಲ್ಲಿ ಬಹಳ ಮುಖ್ಯವಾಗಿದೆ. ಖಾತೆದಾರರು ಪ್ರತಿ ವರ್ಷ ಕನಿಷ್ಠ ಮೊತ್ತವನ್ನು ಠೇವಣಿ ಮಾಡಲು ವಿಫಲವಾದ್ರೆ ಖಾತೆಯನ್ನು ಫ್ರೀಜ್ ಮಾಡುವ ಸಾಧ್ಯತೆ ಇರಲಿದೆ ಮತ್ತು ಖಾತೆದಾರರ ಮೇಲೆ ದಂಡವನ್ನು ಕೂಡಾ ವಿಧಿಸಲಾಗುವುದು.

ಪ್ರಸಕ್ತ ಹಣಕಾಸು ವರ್ಷದಲ್ಲಿ PPF, SSY & NPS ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡಲು ಮಾರ್ಚ್ 31, 2024 ಕೊನೆ ದಿನಾಂಕವಾಗಿದೆ. 2023 ರ ಬಜೆಟ್‌ನಲ್ಲಿ, ಹೊಸ ತೆರಿಗೆ ಪದ್ಧತಿಯನ್ನು ಸರ್ಕಾರವು ಹೆಚ್ಚು ಆಕರ್ಷಕವಾಗಿದೆ. ಏಪ್ರಿಲ್ 1, 2023 ರಿಂದ ಹೊಸ ತೆರಿಗೆ  ಪದ್ಧತಿಯಡಿಯಲ್ಲಿ, ಆದಾಯ ತೆರಿಗೆ ಸ್ಲ್ಯಾಬ್ ಅನ್ನು ಬದಲಾವಣೆ ಮಾಡಲಾಯಿತು. ಒಂದು ಆರ್ಥಿಕ ವರ್ಷದಲ್ಲಿ ಮೂಲ ವಿನಾಯಿತಿ ಮಿತಿಗಳನ್ನು 2.5 ಲಕ್ಷ ದಿಂದ 3 ರೂ. ಲಕ್ಷಕ್ಕೆ ಹೆಚ್ಚಿಗೆ ಮಾಡಲಾಯಿತು. ಇದಲ್ಲದೇ ಹೊಸ ತೆರಿಗೆ ಪದ್ಧತಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡಾ ಲಭ್ಯವಿದೆ. ಇದರ ಅಡಿಯಲ್ಲಿ, 7 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಪಾವತಿಸಬೇಕಿಲ್ಲ.

ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ದಂಡ ತೆರಬೇಕಾದೀತು : 

ಪ್ರಸಕ್ತ ಹಣಕಾಸು ವರ್ಷ 2023-24ಕ್ಕೆ ತೆರಿಗೆಯನ್ನು ಪಾವತಿಸಲು ನೀವು ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿರಬಹುದು. ಹಾಗಿದ್ದರೆ ಕಳೆದ ಆರ್ಥಿಕ ವರ್ಷದವರೆಗೆ ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಪಾವತಿಸುವುದರ ಜೊತೆಗೆ ಸಣ್ಣ ಉಳಿತಾಯ ಯೋಜನೆಗಯಾದ PPF, ಸುಕನ್ಯಾ ಸಮೃದ್ಧಿ ಯೋಜನೆ (SSY) & NPSಗಳಲ್ಲಿ  ಹೂಡಿಕೆ ಮಾಡುತ್ತಿದ್ದರೆ. ಇದೀಗ ಹೊಸ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದ್ರೂ ಸಹ ಈ ಉಳಿತಾಯ ಯೋಜನೆಯಲ್ಲಿನ ಹೂಡಿಕೆಗಳ ಮೇಲಿನ ತೆರಿಗೆ ವಿನಾಯಿತಿಯ ಲಾಭವನ್ನು ಪಡೆಯುಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಖಾತೆಗಳಲ್ಲಿ ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ ದಂಡವನ್ನು ಕಟ್ಟಬೇಕಾಗುತ್ತದೆ.. 

PPF ನಲ್ಲಿ ಠೇವಣಿ ಇಡಲು ಎಷ್ಟು ಹಣ ಬೇಕು? : 

PPF ರೂಲ್ಸ್‌ಗಳು 2019 ರ ಪ್ರಕಾರ ಪ್ರತಿ ಹಣಕಾಸು ವರ್ಷದಲ್ಲಿ PPF ಖಾತೆಯಲ್ಲಿ ಕನಿಷ್ಠ ರೂ. 500 ಠೇವಣಿ ಮಾಡಬೇಕಾಗುತ್ತದೆ. ಕನಿಷ್ಠ ಮೊತ್ತವನ್ನು ಠೇವಣಿ ಮಾಡದಿದ್ದರೆ PPF ಖಾತೆ ನಿಷ್ಕ್ರಿಯವಾಗುತ್ತದೆ. PPF ಖಾತೆಯು ನಿಷ್ಕ್ರಿಯವಾಗಿರುವಾಗ ಸಾಲ & ಹಿಂಪಡೆಯುವ ಪ್ರಯೋಜನಗಳು ಲಭ್ಯವಿರುವುದಿಲ್ಲ. ಖಾತೆ default ಆಗಿದ್ದಲ್ಲಿ ಪ್ರತಿ ವರ್ಷ 50 ರೂ. ಶುಲ್ಕ ವಿಧಿಸಲಾಗುತ್ತದೆ. default ಶುಲ್ಕದ ಹೊರತಾಗಿ, ಠೇವಣಿದಾರರು ಪ್ರತಿ ವರ್ಷ ಕನಿಷ್ಠ ರೂ. 500 ಪಾವತಿಸಬೇಕಾಗುತ್ತದೆ. 

ಸುಕನ್ಯಾ ಸಮೃದ್ಧಿ ಯೋಜನೆ(SSY) : 

ಹೆಣ್ಣು ಮಗುವಿಣ ಹೆಸರಿನಲ್ಲಿ ಹಣ ಉಳಿತಾಯ ಮಾಡಲು ಬಯಸುತ್ತಿರುವವರಿಗೆ ತೆರಿಗೆ ಉಳಿಸುವ ಹೂಡಿಕೆಯ ಆಯ್ಕೆಯಾಗಿದ್ದು. SSY ಯೋಜನೆಯ ರೂಲ್ಸ್‌ಗಳ ಪ್ರಕಾರ, ಖಾತೆದಾರರು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ರೂ. 250 ಉಳಿತಾಯ ಮಾಡಬೇಕಾಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಖಾತೆಯಲ್ಲಿ ಕನಿಷ್ಠ 250 ರೂ. ಠೇವಣಿ ಮಾಡದಿದ್ದರೆ ಸುಕನ್ಯಾ ಖಾತೆಯನ್ನು default ಖಾತೆ ಎಂದು ಪರಿಗಣಿಸಲಾಗುವುದು. ಯೋಜನೆಯ ರೂಲ್ಸ್‌ಗಳ ಪ್ರಕಾರ,  ಯಾವುದೇ default ಖಾತೆಯನ್ನು ಮೆಚ್ಯೂರಿಟಿಯ ಮೊದಲು ಯಾವುದೇ ಸಮಯದಲ್ಲಿ ಮತ್ತೆ ಓಪನ್‌ ಮಾಡಲು ಅನುಮತಿ ನೀಡಲಾಗುತ್ತದೆ. ಖಾತೆಯನ್ನು ಪುನರುಜ್ಜೀವನಗೊಳಿಸಲು default ಮೊತ್ತವಾಗಿ ಪ್ರತಿ ವರ್ಷಕ್ಕೆ ರೂ. 50ಯಂತೆ ಪಾವತಿಸಬೇಕಾಗುತ್ತದೆ. 

NPS  (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ)

ಕೆಲವು ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ section 80CCD(1B) ಅಡಿಯಲ್ಲಿ ಹೆಚ್ಚುವರಿ ರೂ. 50,000 ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಲು NPS ಖಾತೆಯನ್ನು ತೆರೆಯಲಾಗುತ್ತದೆ. ಸೆಕ್ಷನ್ 80C ಅಡಿಯಲ್ಲಿ, ರೂ. 50,000 ಹೂಡಿಕೆಗಳನ್ನು 1.5 ಲಕ್ಷದ ಮಿತಿಗಿಂತ ಹೆಚ್ಚು ಅನುಮತಿಸಲಾಗಿದೆ. NPS ರೂಲ್ಸ್‌ಗಳ ಪ್ರಕಾರ,  ಒಬ್ಬ ವ್ಯಕ್ತಿ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ರೂ.1,000 ಹೂಡಿಕೆ ಮಾಡಬೇಕಾಗುತ್ತದೆ. ಆದರೆ ನಿಮ್ಮ ಖಾತೆಯು close ಆಗಿದ್ದರೆ  500 ರೂ. ಠೇವಣಿ ಮಾಡುವ ಮೂಲಕ ಅದನ್ನು ಪುನಃ ಓಪನ್‌ ಮಾಡಬಹುದು. ಆದರೆ ಇಲ್ಲಿ ನೀವು ಹಣಕಾಸಿನ ವರ್ಷದಲ್ಲಿ ಕನಿಷ್ಠ ರೂ. 1000 ಜಮೆ ಮಾಡಬೇಕಾಗುತ್ತದೆ.

ಇತರೆ ವಿಷಯಗಳು

ಈ ಬ್ಯಾಂಕ್‌ಗಳಲ್ಲಿ ‌ಸಿಗುತ್ತೆ 15 ಲಕ್ಷದ ವರೆಗೆ ಬಡ್ಡಿ ರಹಿತ ಸಾಲ.! ರಾಜ್ಯ ಸರ್ಕಾರದಿಂದ ರೈತರಿಗೆ ಬಿಗ್‌ ಗಿಫ್ಟ್

ಯುವ ರೈತರನ್ನು ಮದುವೆಯಾಗುವ ವಧುವಿಗೆ ಸಿಗಲಿದೆ 5 ಲಕ್ಷ ರೂ.! ವಿವಾಹವಾದ ಮರುದಿನವೇ ಖಾತೆಗೆ ಹಣ


Share

Leave a Reply

Your email address will not be published. Required fields are marked *