rtgh
Headlines

ರಾಜ್ಯದ ಖಾಸಗಿ ಶಾಲೆಗಳ ʻಶುಲ್ಕʼ ಮತ್ತೆ ಏರಿಕೆ! ಪೋಷಕರಿಗೆ ಬಿಗ್ ಶಾಕ್

School Fee Hike
Share

ಹಲೋ ಸ್ನೇಹಿತರೇ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರಸಕ್ತ 2024-25ರ ಸಾಲಿನಲ್ಲಿ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ಹೆಚ್ಚಿಸಿಕೊಂಡಿವೆ. ಹೌದು 2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20 ರಿಂದ 30 ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ ಮುಂದುವರೆಸಿವೆ. ಜೊತೆಗೆ ಒಂದು ಅಥವಾ ಎರಡು ಕಂತಿನಲ್ಲಿ ಶುಲ್ಕ ಪಾವತಿಗೂ ಶಾಲೆಗಳು ಒತ್ತಾಯಿಸುತ್ತಿವೆ. ಇದು ಪೋಷಕರ ಪಾಲಿಗೆ ನುಂಗಲಾರದ ತುತ್ತಾಗಿದೆ.

School Fee Hike

ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ರಾಜ್ಯ ಪಠ್ಯಕ್ರಮ ಮೂರೂ ಮಾದರಿಯ ಶಾಲೆಗಳಲ್ಲೂ ಈ ಶುಲ್ಕ ಹೆಚ್ಚಳ ಮಾಡಿರುವುದಾಗಿ ಪೋಷಕರು ಹೇಳುತ್ತಿದ್ದಾರೆ. ಮೊದಲು ಕನಿಷ್ಠ ಎರಡರಿಂದ ಗರಿಷ್ಠ ನಾಲ್ಕು, ಕೆಲ ವಿಶೇಷ ಪ್ರಕರಣಗಳಲ್ಲಿ ಇನ್ನು ಹೆಚ್ಚಿನ ಕಂತಿನ ಅವಕಾಶವನ್ನೂ ಶಾಲೆಗಳೂ ನೀಡುತ್ತಿದ್ದವು. ಆದರೆ, ಈ ಬಾರಿ ಹೆಚ್ಚಿನ ಶಾಲೆಗಳು ಒಂದೇ ಕಂತಿನಲ್ಲಿ ತಪ್ಪಿದರೆ ಎರಡು ಕಂತಿನಲ್ಲಿ ಶುಲ್ಕ ಕಟ್ಟಲೇಬೇಕು. ಅದಕ್ಕಿಂತ ಹೆಚ್ಚು ಅವಕಾಶ ನೀಡಲಾಗುವುದಿಲ್ಲ ಎಂಬುದು ಪೋಷಕರ ಅಳಲು ಎನ್ನುತ್ತಿವೆ .

ಬೆಂಗಳೂರಿನ ರಾಜಾಜಿನಗರ, ರಾಜರಾಜೇಶ್ವರಿ ನಗರ, ಗೊರಗುಂಟೆಪಾಳ್ಯ, ಬಾಗಲಗುಂಟೆ ಸೇರಿದಂತೆ ವಿವಿಧೆಡೆ ಇರುವ ಹಲವು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಹಾಗೂ ಪೋಷಕರು ನೀಡಿದ ಮಾಹಿತಿ ಗಮನಿಸಿದಾಗ ಶೇ.20ರಿಂದ 30ರಷ್ಟು ಶುಲ್ಕ ಹೆಚ್ಚಳ ಕಂಡುಬಂದಿದೆ. ಬಜೆಟ್‌ ಶಾಲೆಗಳು ಎಂದು ಹೇಳಿಕೊಳ್ಳುವ ಆಡಳಿತ ಮಂಡಳಿಗಳು ಕನಿಷ್ಠ 25 ರಿಂದ ಗರಿಷ್ಠ 30 ಸಾವಿರ ರುಪಾಯಿ ಇದ್ದ ಶುಲ್ಕವನ್ನು ಕನಿಷ್ಠ 30 ರಿಂದ ಗರಿಷ್ಠ 35 ಸಾವಿರ ರು.ವರೆಗೂ ಏರಿಕೆ ಮಾಡಿವೆ.

ಇದನ್ನೂ ಸಹ ಓದಿ : 5,8 ಮತ್ತು 9ನೇ ಪಬ್ಲಿಕ್‌ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

ಅದೇ ರೀತಿ ಸ್ವಲ್ಪ ಹೆಸರುವಾಸಿಯಾದ ಶಾಲೆಗಳಲ್ಲಿ 40 ರಿಂದ 50 ಸಾವಿರ ರೂ. ವರೆಗೆ ಇದ್ದ ಶುಲ್ಕವನ್ನು ಕನಿಷ್ಠ 50 ರಿಂದ 65 ಸಾವಿರ ರೂ. ವರೆಗೆ ಏರಿಸಿವೆ. ಇನ್ನು ತಮ್ಮ ಶಾಲೆಗಳ ಸೀಟಿಗೆ ಭಾರೀ ಭೇಡಿಕೆ ಎಂದು ತೋರಿಸಿಕೊಳ್ಳುವ ಪ್ರತಿಷ್ಠಿತ ಶಾಲೆಗಳು 70 ರಿಂದ 90 ಸಾವಿರ ರು. ವರೆಗೆ ಇದ್ದ ಶುಲ್ಕವನ್ನು 1 ಲಕ್ಷದಿಂದ 1.2 ಲಕ್ಷ ರೂ. ವರೆಗೂ ಹೆಚ್ಚಿಸಿವೆ. ಇದು ಬೋಧನಾ ಶುಲ್ಕ, ಕ್ರೀಡಾ ಶುಲ್ಕ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ಹಾಗೂ ಪಠ್ಯಪುಸ್ತಕ ಮತ್ತು ಸಮವಸ್ತ್ರಕ್ಕೆ ಸಂಬಂಧಿಸಿದ ಶುಲ್ಕ. ಇದನ್ನು ಹೊರತಾಗಿ ಶಾಲೆಯ ಸಮೀಪ ಮನೆ ಇಲ್ಲದೆ ಸಾರಿಗೆ ವ್ಯವಸ್ಥೆ ಬೇಕಾದ ಮಕ್ಕಳಿಗೆ ಪ್ರತ್ಯೇಕವಾಗಿ 10 ರಿಂದ 20 ಸಾವಿರ ರೂ.ವರೆಗೂ ವ್ಯಾನ್‌ ಶುಲ್ಕ ವಿಧಿಸುತ್ತಿವೆ.

ಈ ಮಧ್ಯೆ, ಒಂದೇ ಕಂತಿನಲ್ಲಿ ಸಾಧ್ಯವಾಗದಿದ್ದರೆ ಎರಡು ಕಂತಿನಲ್ಲಾದರೂ ಪೂರ್ಣ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿರುವುದು ಪ್ರತಿಷ್ಠಿತ ಶಾಲೆಗಳೇ ಹೆಚ್ಚು. ಶುಲ್ಕ ಹೆಚ್ಚಳ ಮತ್ತು ಒಂದೇ ಬಾರಿ ವಸೂಲಿ ಪದ್ಧತಿಯನ್ನು ಪ್ರಶ್ನಿಸಿದರೆ ನಮ್ಮ ಮಕ್ಕಳಿಗೆ ವರ್ಗಾವಣೆ ಪ್ರಮಾಣ ಪತ್ರ ಕೊಡುವುದಾಗಿ ಪ್ರಾಂಶುಪಾಲರ ಮೂಲಕ ಆಡಳಿತ ಮಂಡಳಿಗಳು ಬೆದರಿಕೆ ಹಾಕುತ್ತಿವೆ ಎಂದು ಪೋಷಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಈ ಶುಲ್ಕ ಏರಿಕೆ ಬಿಸಿ ಅತಿ ಹೆಚ್ಚು ಖಾಸಗಿ ಶಾಲೆಗಳಿರುವ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರವಲ್ಲ ರಾಜ್ಯದ ಇತರೆ ಜಿಲ್ಲೆಗಳ ಶಾಲೆಗಳಲ್ಲೂ ಶುಲ್ಕ ಹೆಚ್ಚಳ ಪ್ರತೀ ವರ್ಷದ ಸಾಮಾನ್ಯ ಪದ್ಧತಿಯಾಗಿದೆ.

ಇದರ ನಡುವೆಯೂ ಕೆಲ ಶಾಲೆಗಳ ಮುಖ್ಯಸ್ಥರು ಬಡ ಮಕ್ಕಳಿಗೆ ಅನುಕೂಲ ಮಾಡಬೇಕೆಂಬ ಸಿದ್ಧಾಂತದ ಮೇಲೆ ನಡೆಯುತ್ತಿದ್ದು, ಶಾಲೆಯನ್ನು ಲಾಭದಾಯಕ ಸಂಸ್ಥೆಯಾಗಿ ನೋಡದೆ ಸೇವಾ ಮನೋಭಾವದಿಂದ ನಡೆಸುತ್ತಿರುವವರನ್ನೂ ಅಲ್ಲೊಬ್ಬರು ಇಲ್ಲೊಬ್ಬರನ್ನು ಕಾಣಬಹುದು. ಪ್ರತಿ ವರ್ಷ ಖರ್ಚು ವೆಚ್ಚಗಳು ಹೆಚ್ಚುವುದರಿಂದ ವಾರ್ಷಿಕ ಶೇ.10 ರಿಂದ 15ರಷ್ಟು ಶುಲ್ಕ ಹೆಚ್ಚಿಸಲು ಅವಕಾಶವಿದೆ, ಅದರಂತೆ ಶುಲ್ಕ ಹೆಚ್ಚಿಸುವುದು ತಪ್ಪಲ್ಲ. ಆದರೆ, ಪೋಷಕರಿಗೆ ಹೊರೆಯಾಗುವಂತೆ ಶೇ.20, 30ರಷ್ಟು ಹೆಚ್ಚಿಸುವುದನ್ನು ಒಪ್ಪುವುದಿಲ್ಲ. ಆದರೆ, ಅಂತಹ ನಿರ್ಧಾರ ಖಾಸಗಿ ಶಾಲಾ ಸಂಘಟನೆಗಳದ್ದಲ್ಲ, ಆಯಾ ಆಡಳಿತ ಮಂಡಳಿಗಳದ್ದು.

ಇತರೆ ವಿಷಯಗಳು:

ಇಂದಿನಿಂದ ಮತ್ತೆ ಗುಡುಗು ಸಹಿತ ಮಳೆ! ಮುಂದಿನ ನಾಲ್ಕು ದಿನಗಳ ಕಾಲ ಎಚ್ಚರ

ಗರ್ಭಿಣಿ ಮಹಿಳೆಯರಿಗೆ ಗುಡ್‌ ನ್ಯೂಸ್‌! ಈ ಯೋಜನೆಯಡಿ ಸಿಗಲಿದೆ ಆರ್ಥಿಕ ಸಹಾಯಧನ

ಯುವನಿಧಿ ಯೋಜನೆ ನಂತರ ನಿರುದ್ಯೋಗಿ ಮಹಿಳೆಯರಿಗೆ ಮತ್ತೊಂದು ಗುಡ್‌ ನ್ಯೂಸ್!


Share

Leave a Reply

Your email address will not be published. Required fields are marked *