ಹಲೋ ಸ್ನೇಹಿತರೇ, ದೇಶದ ಅತ್ಯುನ್ನತ ವಿಮಾ ಕಂಪನಿ ಆಗಿರುವಂತಹ ಭಾರತೀಯ ಜೀವ ವಿಮಾ ನಿಗಮವು ಖಾಲಿ ಇರುವಂತಹ 7,000 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ದೇಶದ ಅತ್ಯುನ್ನತ ವಿಮಾ ಕಂಪನಿ ಆಗಿರುವ ಭಾರತೀಯ ಜೀವ ವಿಮಾ ನಿಗಮವು ಖಾಲಿ ಇರುವಂತಹ 7,000 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಿದೆ.
ಈ ನೇಮಕಾತಿ ಹೇಗೆ ನಡೆಯಲಿದೆ, ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ಆಯ್ಕೆಯಾದವರಿಗೆ ಸಿಗುವ ಸಂಬಳ, ನೇಮಕಾತಿ ಪ್ರಕ್ರಿಯೆ?
ನೇಮಕಾತಿ ವಿವರ
• ಖಾಲಿ ಹುದ್ದೆಗಳ ಸಂಖ್ಯೆ – 7000 ಹುದ್ದೆಗಳು
• ನೇಮಕಾತಿ ಸಂಸ್ಥೆ – ಭಾರತೀಯ ಜೀವ ವಿಮಾ ನಿಗಮ
• ಹುದ್ದೆಗಳ ಹೆಸರು – ಅಸಿಸ್ಟೆಂಟ್
• ಉದ್ಯೋಗ ಸ್ಥಳ – ಭಾರತ
ಅರ್ಹತೆಗಳು
ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವಂತ LIC Assistant ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸೇರಿದಂತೆ ಯಾವುದಾದರೂ 1 ವಿಷಯದಲ್ಲಿ ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವಯೋಮಿತಿ:
ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮೇಲ್ಪಟ್ಟಿರಬೇಕು & ಗರಿಷ್ಠ 30 ವರ್ಷದ ಒಳಗಿರಬೇಕು. LIC ಇಂಡಿಯಾದ ನೇಮಕಾತಿ ನಿಯಮದ ಪ್ರಕಾರ ವಿವಿಧ ವರ್ಗಗಳ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹63,840/ – ₹78,230/- ರವರೆಗೆ ಮಾಸಿಕ ವೇತನವು ಸಿಗುತ್ತದೆ.
ಆಯ್ಕೆ ಪ್ರಕ್ರಿಯೆ – ನೇಮಕಾತಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಮೊದಲು ಪ್ರಿಲಿಮಿನರಿ ಪರೀಕ್ಷೆ ನಂತರ ಮುಖ್ಯ & ಪೂರ್ವ ನೇಮಕಾತಿ ವೈದ್ಯಕೀಯ ಪರೀಕ್ಷೆಯನ್ನು ನಡೆಯುವುದರ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ನೇಮಕಾತಿ ಪ್ರಾರಂಭವಾಗಬಹುದಾದ ದಿನಾಂಕ – ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಲಿ ಇರುವ 7000 LIC ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಜೂನ್ ಮೊದಲ ವಾರದಲ್ಲಿ ಹೊರಬೀಳುವ ಸಾಧ್ಯತೆ ಇದೆ ಎಂದು ವಿವಿಧ ಅಧಿಕಾರಿ ಮೂಲಗಳ ತಿಳಿಸಿವೆ.
ಇತರೆ ವಿಷಯಗಳು
ದ್ವಿತೀಯ ಪಿಯುಸಿ ಪರೀಕ್ಷೆ 3ನೇ ವೇಳಾಪಟ್ಟಿ ಬಿಡುಗಡೆ! ಈ ದಿನಾಂಕದಂದು ನಡೆಯಲಿದೆ ಪರೀಕ್ಷೆ
60 ವರ್ಷಗಳ ಪೂರೈಸುವ ಮೊದಲೇ ಸಿಗಲಿದೆ ಪಿಂಚಣಿ! ಸರ್ಕಾರದ ನ್ಯೂ ರೂಲ್ಸ್