rtgh
Headlines

ರೈಲ್ವೆ ರಕ್ಷಣಾ ಸಿಬ್ಬಂದಿ ನೇಮಕ: 4660 ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅಪ್ಲೇ ಮಾಡಲು SSLC ಪಾಸಾಗಿದ್ರೆ ಸಾಕು

RRB RPF SI, Constable Jobs
Share

ಹಲೋ ಸ್ನೇಹಿತರೇ, ಭಾರತೀಯ ರೈಲ್ವೆ ನೇಮಕಾತಿ ಮಂಡಳಿ ದೇಶದಾದ್ಯಂತ ರೈಲ್ವೆ ವಲಯದಲ್ಲಿ ಖಾಲಿ ಇರುವ ಸಬ್‌ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ ಹುದ್ದೆಗಳ ಪೈಕಿ ಒಟ್ಟು 4660 ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹತೆ, ವೇತನ, ಪ್ರಮುಖ ದಿನಾಂಕಗಳು ಎಲ್ಲವನ್ನು ತಿಳಿಯಲು ನಮ್ಮ ಲೇಖನವನ್ನು ತಿಳಿಯಿರಿ.

RRB RPF SI, Constable Jobs

ಭಾರತೀಯ ರೈಲ್ವೆಯು ಈಗ ಈ ವರ್ಷದ ಮತ್ತೊಂದು ನೇಮಕಾತಿ notification ಬಿಡುಗಡೆ ಮಾಡಿದೆ. ಇದು ಈ ವರ್ಷದ 3ನೇ ಉದ್ಯೋಗದ ಅಧಿಸೂಚನೆಯಾಗಿದೆ. ಈಗ ರೈಲ್ವೆಯ ರಕ್ಷಣಾ ಸಿಬ್ಬಂದಿ ಪಡೆಯ ರೈಲ್ವೆ ಸಬ್‌ಇನ್ಸ್‌ಪೆಕ್ಟರ್, ರೈಲ್ವೆ ಕಾನ್ಸ್‌ಟೇಬಲ್‌ ಭರ್ತಿಗೆ notification ಬಿಡುಗಡೆ ಮಾಡಿದೆ. RRB, RPF, SI, ಕಾನ್ಸ್‌ಟೇಬಲ್‌ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಭಾರತೀಯ ರೈಲ್ವೆ

ಹುದ್ದೆಗಳ ಹೆಸರು : RRB ಸಬ್‌ ಇನ್ಸ್‌ಪೆಕ್ಟರ್, RPF ಕಾನ್ಸ್‌ಟೇಬಲ್‌
ಹುದ್ದೆಗಳ ಒಟ್ಟು ಸಂಖ್ಯೆ : 4,660
ಶಾರ್ಟ್‌ notification ಬಿಡುಗಡೆಯ ದಿನಾಂಕ: 26-02-2024

ರೈಲ್ವೆ ಉದ್ಯೋಗ : ಆರ್‌ಪಿಎಫ್‌ ಹುದ್ದೆಗಳ ವಿವರ

ರೈಲ್ವೆ ಸಬ್‌ ಇನ್ಸ್‌ಪೆಕ್ಟರ್ ಹುದ್ದೆಗಳ ಸಂಖ್ಯೆ452
ರೈಲ್ವೆ ಕಾನ್ಸ್‌ಟೇಬಲ್‌ ಹುದ್ದೆಗಳ ಸಂಖ್ಯೆ4,208

ವೇತನ ಶ್ರೇಣಿ

ಸಬ್‌ಇನ್ಸ್‌ಪೆಕ್ಟರ್ ಹುದ್ದೆಗೆ: ಆರಂಭದ ವೇತನ ₹.35,400.
ಕಾನ್ಸ್‌ಟೇಬಲ್‌ ಹುದ್ದೆಗೆ: ಆರಂಭದ ವೇತನ ₹21,700.

ಶೈಕ್ಷಣಿಕ ಹಾಗೂ ವಯಸ್ಸಿನ ಅರ್ಹತೆಗಳು

ಸಬ್‌ಇನ್ಸ್‌ಪೆಕ್ಟರ್: ಅಂಗೀಕೃತ ವಿಶ್ವವಿದ್ಯಾಲದಲ್ಲಿ ಯಾವುದೇ ಪದವಿ pass ಮಾಡಿಲೇಬೇಕು. ದಿನಾಂಕ 01-07-2024 ಕ್ಕೆ 20-28 ವರ್ಷವಾಗಿರಬೇಕು.
ಕಾನ್ಸ್‌ಟೇಬಲ್‌: ಅಂಗೀಕೃತ ಶಿಕ್ಷಣ ಸಂಸ್ಥೆಗಳಿಂದ SSLC / ತತ್ಸಮಾನ ಪರೀಕ್ಷೆ pass ಮಾಡಿರಬೇಕು. ದಿನಾಂಕ 01-07-2024 ಕ್ಕೆ 18-28 ವರ್ಷವಾಗಿರಬೇಕು.

SI ಹುದ್ದೆಗೆ 7ನೇ ವೇತನ ಆಯೋಗದ pay level 6 ರ ಪ್ರಕಾರ, ಕಾನ್ಸ್‌ಟೇಬಲ್‌ ಹುದ್ದೆಗೆ 7ನೇ ವೇತನ ಆಯೋಗದ pay level 3 ರ ಪ್ರಕಾರ ವೇತನ ಶ್ರೇಣಿ ನಿಗದಿ ಮಾಡಲಾಗುವುದು ಮೇಲೆ ತಿಳಿಸಿದ ಆರಂಭಿಕ ವೇತನದ ಜತೆಗೆ, ಇತರೆ ಭತ್ಯೆಗಳು, ಸೌಲಭ್ಯಗಳು ಸಿಗುತ್ತದೆ. ಸರ್ಕಾರಿ ರೂಲ್ಸ್‌ಗಳ ಪ್ರಕಾರ ವಯಸ್ಸಿನ ಸಡಿಲಿಕೆಯು ವರ್ಗಾವಾರು ಅನ್ವಯವಾಗುತ್ತದೆ.

ಪ್ರಮುಖ ದಿನಾಂಕಗಳು
Online ಅಪ್ಲಿಕೇಶನ್‌ ಆರಂಭಿಕ ದಿನಾಂಕ : 15-04-2024
Online ಅಪ್ಲಿಕೇಶನ್‌ ಸಲ್ಲಿಸಲು ಕೊನೆಯ ದಿನಾಂಕ : 14-05-2024

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ಶುಲ್ಕ ರೂ.500.
SE, ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ರೂ.250.

ಈ ಮೇಲಿನ ಹುದ್ದೆಗಳಿಗೆ ಅಪ್ಲೇ ಲಿಂಕ್‌ನ್ನು 2024ರ ಏಪ್ರಿಲ್ 15ಅಂದೇ ಆಯಾ ರೈಲ್ವೆ ವಲಯಗಳ ಪ್ರಾದೇಶಿಕ Website ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಕರ್ನಾಟಕ ರಾಜ್ಯದ ಆಸಕ್ತ ಅಭ್ಯರ್ಥಿಗಳು ತಮ್ಮ ಪ್ರಾದೇಶಿಕ Website www.rrbbnc.gov.in ವಿಳಾಸಕ್ಕೆ ಭೇಟಿ ನೀಡಿ ಅಪ್ಲೇ ಮಾಡಿ.

ಉದ್ಯೋಗ ವಿವರ

INR 21700 to 35400 /Month

ಹುದ್ದೆಯ ಹೆಸರುರೈಲ್ವೆ ಸಬ್‌ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್
ವಿವರಭಾರತೀಯ ರೈಲ್ವೆ ರಕ್ಷಣಾ ಸಿಬ್ಬಂದಿ ಪಡೆ
ಪ್ರಕಟಣೆ ದಿನಾಂಕ26-02-2024
ಕೊನೆ ದಿನಾಂಕ14-04-2024
ಉದ್ಯೋಗ ವಿಧಪೂರ್ಣಾವಧಿ
ಉದ್ಯೋಗದ ಕ್ಷೇತ್ರರೈಲ್ವೆ ಉದ್ಯೋಗ

ಉದ್ಯೋಗ ಸ್ಥಳ

ಸ್ಥಳದೇಶದ ಎಲ್ಲ ರೈಲ್ವೆ ವಲಯಗಳು
ವಿಳಾಸ ದೇಶದ ಎಲ್ಲ ರೈಲ್ವೆ ವಲಯಗಳು
ಪ್ರದೇಶಕರ್ನಾಟಕ
ಅಂಚೆ ಸಂಖ್ಯೆ560023
ದೇಶIND

ಇತರೆ ವಿಷಯಗಳು

9-12ನೇ ತರಗತಿ ಪರೀಕ್ಷಾ ವಿಧಾನದಲ್ಲಿ ದೊಡ್ಡ ಬದಲಾವಣೆ? CBSE ಪಠ್ಯ ಓದುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ

2500 BMTC ಕಂಡಕ್ಟರ್ ಹುದ್ದೆಗೆ ಅಧಿಸೂಚನೆ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ & ಅರ್ಜಿ ಸಲ್ಲಿಸುವ ಡೈರೆಕ್ಟ್‌ ಲಿಂಕ್


Share

Leave a Reply

Your email address will not be published. Required fields are marked *