rtgh
Headlines

9-12ನೇ ತರಗತಿ ಪರೀಕ್ಷಾ ವಿಧಾನದಲ್ಲಿ ದೊಡ್ಡ ಬದಲಾವಣೆ? CBSE ಪಠ್ಯ ಓದುತ್ತಿರುವ ವಿದ್ಯಾರ್ಥಿಗಳ ಗಮನಕ್ಕೆ

cbse board exam
Share

ಹಲೋ ಸ್ನೇಹಿತರೇ, CBSE ಪಠ್ಯದ 9 ರಿಂದ 12ನೇ ತರಗತಿ ಪರೀಕ್ಷೆಯ ವಿಧಾನದಲ್ಲಿ ಮಹತ್ವದ ಬದಲಾವಣೆ, ಸರ್ಕಾರವೇ ನೀಡುವು ಮಾಹಿತಿ ಏನದು ಬದಲಾವಣೆ ಎಂಬುದನ್ನು ನಮ್ಮ ಲೇಖನವನ್ನು ಓದಿ ತಿಳಿಯಿರಿ.

cbse board exam

ಸಾಂಪ್ರದಾಯಿಕ ಪರೀಕ್ಷೆ ವಿಧಾನದ ಬದಲಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸಲು CBSE ಮುಂದಾಗಿದೆ. ಈ ಪರೀಕ್ಷೆ ವಿಧಾನದ ಕುರಿತಾಗಿ ಪೈಲಟ್‌ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯು 9 – 12ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಮಹತ್ವದ ಮತ್ತು ಸಿಹಿ ಸುದ್ದಿಯೊಂದು ನೀಡಲಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಮಾಡಲು ಚಿಂತನೆಯನ್ನು ನಡೆಸಲಾಗಿದೆ. 9 -12ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ ಪರೀಕ್ಷೆ (OBE) ನಡೆಸುವುದರ ಬಗ್ಗೆ ಮಂಡಳಿ ಪರಿಶೀಲಿಸುತ್ತಿದೆ.

ಕೆಲವು ಆಯ್ದ ಶಾಲೆಯಲ್ಲಿ ಮಾತ್ರ ಮೊದಲು 9 & 10ನೇ ತರಗತಿಗಳಿಗೆ ಗಣಿತ, ಇಂಗ್ಲಿಷ್ & ವಿಜ್ಞಾನ ವಿಷಯಗಳನ್ನು, 11 & 12ನೇ ತರಗತಿಗಳಿಗೆ ಜೀವಶಾಸ್ತ್ರ ವಿಷಯಗಳಲ್ಲಿ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ಅಂದರೆ (Open Book Exam) ವ್ಯವಸ್ಥೆಯನ್ನು ಜಾರಿಗೆ ತರಲು CBSE ಯೋಚಿಸಿದೆ.

9 – 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸುವ ತೆರೆದ ಪುಸ್ತಕ ಪರೀಕ್ಷೆ ಪೂರ್ಣಗೊಳಿಸಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಕಾಲಾವಕಾಶವನ್ನು ಅಂದಾಜು ಮಾಡುವುದು ಹಾಗೂ ಸಂಬಂಧಪಟ್ಟವರಿಂದ ಹಿಮ್ಮಾಹಿತಿ ಸಂಗ್ರಹಿಸುವುದು ಇದರ ಪ್ರಮುಖ ಗುರಿಯಾಗಿದೆ. ಆದರೆ ಬೋರ್ಡ್‌ ಪರೀಕ್ಷೆಗಳಿಗೆ ಇದು ಅನ್ವಯವಾಗುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.

ಚಿಂತಕರ ವಲಯದಲ್ಲಿ ಚರ್ಚೆ 

ತೆರೆದ ಪುಸ್ತಕ ಪರೀಕ್ಷೆಯನ್ನು ನಡೆಸುವುದು ತುಂಬಾ ಸುಲಭದ ವಿಧಾನವಲ್ಲ. ಕಾರಣ ಸಾಂಪ್ರದಾಯಿಕ ಪರೀಕ್ಷಾ ವಿಧಾನದಲ್ಲಿ ವಿದ್ಯಾರ್ಥಿಗಳು ಕೇವಲ ಕಂಠಪಾಠ ಮಾಡಿಕೊಂಡು, ನೆನಪಿಟ್ಟುಕೊಳ್ಳುವಂಥ ಪ್ರಕ್ರಿಯೆ ಬದಲಾಗಿ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಗ್ರಹಿಕಾಶಕ್ತಿಯನ್ನು, ವಿಶ್ಲೇಷಣೆ & ಪರಿಕಲ್ಪನೆಗಳ ಅನ್ವಯಿಸುವಕತೆಯನ್ನು ಪ್ರದರ್ಶನ ಮಾಡಬೇಕಾಗುತ್ತದೆ. ಇದರಲ್ಲಿ ಉನ್ನತ ಮಟ್ಟದ ಯೋಚನಾ skill, ತಾರ್ಕಿಕ ವಿಶ್ಲೇಷಣೆ & ಸಮಸ್ಯೆ ಬಗೆಹರಿಸುವ ಸಾಮರ್ಥ್ಯವನ್ನು ಅಂದಾಜು ಮಾಡುವ ಮೇಲೆ ಗಮನವನ್ನು ಕೃಡಿಕರಿಸಲಾಗುತ್ತದೆ. ಆದ್ದರಿಂದ 2 ವಿಧಾನದಲ್ಲಿ ಸಾಕಷ್ಟು ವಿಭಿನ್ನತೆಯಿದೆ ಎಂದು ಚರ್ಚೆ ನಡೆಸಲಾಗುತ್ತಿದೆ. ಈ ಮಧ್ಯೆ ತೆರೆದ ಪುಸ್ತಕ ಪರೀಕ್ಷೆ ಪೈಲಟ್ ಯೋಜನೆಯನ್ನು ಜೂನ್‌ ತಿಂಗಳ ಒಳಗೆ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರೌಢಶಿಕ್ಷಣ ಮಂಡಳಿ ಚಿಂತನೆಯನ್ನು ನಡೆಸಿದೆ.

ಇತರೆ ವಿಷಯಗಳು

LPG ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ.! ನಾಳೆಯಿಂದಲೇ ಕೇಂದ್ರದಿಂದ ಹೊಸ ದರ ನಿಗದಿ

ಅಕ್ಕಿ ಬೆಲೆ ಮತ್ತಷ್ಟು ಏರಿಕೆ.! ಇನ್ಮುಂದೆ ರೇಷನ್‌ ಕಾರ್ಡ್‌ದಾರರಿಗೆ ‌ಪಡಿತರ ಬಂದ್ ಸರ್ಕಾರವೇ ಕೈಗೊಂಡ ನಿರ್ಧಾರ


Share

Leave a Reply

Your email address will not be published. Required fields are marked *