rtgh
Headlines

ಹೊಸ ಪಡಿತರ ಚೀಟಿ ನಿರೀಕ್ಷೆಯಲ್ಲಿದ್ದವರಿಗೆ ಶಾಕ್!

Ration card
Share

ಬೆಂಗಳೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆಯು ತೆರವಾದ ನಂತರವು ಹೊಸ ಪಡಿತರ ಚೀಟಿಯು ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ವಿಷಯ ಒಂದು ಇಲ್ಲಿದೆ.

Ration card

ಹೊಸದಾಗಿ APL ಮತ್ತು BPL ಕಾರ್ಡುಗಳನ್ನು ನಿಗದಿಗಿಂತಲು ಹೆಚ್ಚುವರಿಯಾಗಿ ಮಂಜೂರು ಮಾಡಬಾರದು. 3 ತಿಂಗಳಿನಿಂದ ರೇಷನ್ ಪಡೆದ ಕಾರ್ಡ್ ಅನ್ನು ರದ್ದು ಮಾಡಬೇಕು. ಬಾಕಿ ಉಳಿದಿರುವ ಅರ್ಜಿಯನ್ನು ಏಕಕಾಲದಲ್ಲಿ ವಿಲೇವಾರಿಯನ್ನು ಮಾಡಬಾರದು ಎಂದು ಸರ್ಕಾರ ನಿರ್ಬಂಧನೆಯನ್ನು ಹೇರಿ ಕಟ್ಟುನಿಟ್ಟಿನ ಜಾರಿಗೆ ಆಹಾರ ಇಲಾಖೆಗೆ ಆದೇಶವನ್ನು ನೀಡಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಪ್ರಕಾರ ನಿಗದಿಗಿಂತಲು ಹೆಚ್ಚುವರಿಯಾಗಿ ಸುಮಾರು 13 ಲಕ್ಷ BPL ಕಾರ್ಡ್ ಗಳನ್ನು ನೀಡಲಾಗಿದೆ. ಹೆಚ್ಚುವರಿ ರೇಷನ್ ಕಾರ್ಡುಗಳಿಂದ ಪ್ರತಿವರ್ಷವು ಸರ್ಕಾರಕ್ಕೆ 100 ಕೋಟಿ ಹೊರೆಯಾಗುತ್ತಿದೆ. ಇದಕ್ಕಾಗಿ ಹೊಸ BPL ಮತ್ತು APL ಕಾರ್ಡ್ ಗಳ ಮಂಜೂರಾತಿಗೆ ನಿರ್ಬಂಧನೆಯನ್ನು ಹೇರಲಾಗಿದೆ.

ಇದನ್ನೂ ಸಹ ಓದಿ: ರಾಜ್ಯದ ಖಾಸಗಿ ಶಾಲೆಗಳ ʻಶುಲ್ಕʼ ಮತ್ತೆ ಏರಿಕೆ! ಪೋಷಕರಿಗೆ ಬಿಗ್ ಶಾಕ್

ನಿಗದಿಗಿಂತ ಹೆಚ್ಚುವರಿಯಾದ ಕಾರ್ಡುಗಳನ್ನು ಮಂಜೂರು ಮಾಡಬಾರದು, 3 ತಿಂಗಳಿನಿಂದ ಪಡಿತರವನ್ನು ಪಡೆದ ಕಾರ್ಡ್ ಗಳನ್ನು ರದ್ದುಪಡಿಸಬೇಕು. ಒಂದೇ ಬಾರಿಗೆ ಬಾಕಿ ಉಳಿದಿರುವ ಅರ್ಜಿಗಳ ವಿಲೇವಾರಿಯನ್ನು ಮಾಡಬಾರದು. ಆರ್ಥಿಕವಾಗಿ ಸಬಲರು ಪಡೆದ ರೇಷನ್ ಕಾರ್ಡ್ ಗಳನ್ನು ತಕ್ಷಣ ರದ್ದುಪಡಿಸಬೇಕು. ರದ್ದಾದ ಕಾರ್ಡ್ ನ ಆಧಾರದ ಮೇಲೆ ಹಂತ ಹಂತವಾಗಿ ಅರ್ಜಿಯ ವಿಲೇವಾರಿಯನ್ನು ಮಾಡಬೇಕು ಎಂದು ಹೇಳಲಾಗಿದೆ.

ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ BPL ಕಾರ್ಡ್ಗಳನ್ನು ನೀಡಲಾಗುತ್ತದೆ. ಹೊಸದಾಗಿ ಅರ್ಜಿಯನ್ನು ಸಲ್ಲಿಸುವವರಿಗೆ ಗುರುತಿನ ಚೀಟಿಗಾಗಿ ಮಾತ್ರವೇ ಅಥವಾ ಪಡಿತರಕ್ಕಾಗಿಯೇ ಎನ್ನುವುದನ್ನು ಪ್ರತ್ಯೇಕವಾಗಿ ನಮೂದಿಸಿ ರೇಷನ್‌ ಕಾರ್ಡ್‌ ಅನ್ನು ಮಂಜೂರು ಮಾಡಲಾಗುತ್ತದೆ. ಕೇವಲ ಗುರುತಿನ ಚೀಟಿಗಾಗಿ ಕಾರ್ಡ್ ಅನ್ನು ಪಡೆಯುವವರಿಗೆ ರೇಷನ್ ಸಿಗುವುದಿಲ್ಲ ಎಂದು ಹೇಳಲಾಗಿದೆ.

ರೈತರಿಗೆ ಸಿಹಿಸುದ್ದಿ: ಜೂ.1 ರಿಂದಲೇ ‘ಮುಂಗಾರು ಮಳೆ’ ಆರಂಭ!

ಈ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯಲಿದೆ ಮಳೆ! ಎಚ್ಚರದಿಂದಿರಲು ಸೂಚನೆ


Share

Leave a Reply

Your email address will not be published. Required fields are marked *