ಹಲೋ ಸ್ನೇಹಿತರೇ, ಸರ್ಕಾರ ಸಿರಿಧಾನ್ಯ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತ ಸಿರಿ ಯೋಜನೆ ಜಾರಿಗೆ ತಂದಿತ್ತು. ಇದರಡಿಯಲ್ಲಿ ಧಾನ್ಯ ಬೆಳೆಯುವುದಕ್ಕೆ ಬೇಕಾಗಿರುವ ಬೀಜಗಳು & ರಸಗೊಬ್ಬರ ಪೂರೈಕೆಗಾಗಿ ಸರ್ಕಾರ 10,000 ರೂ. ನೀಡುತ್ತದೆ. ಈ ಹಣವು ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತದೆ. ಸಿರಿಧಾನ್ಯ ಬೆಳೆ ಕುರಿತು ರೈತರಲ್ಲಿ ಅರಿವು ಮೂಡಿಸಲು ಹಂತ ಹಂತವಾಗಿ ಟ್ರೈನಿಂಗ್ ಕೂಡ ನೀಡಲಾಗುತ್ತದೆ.
Contents
ರೈತ ಸಿರಿ ಯೋಜನೆ:
ರಾಜ್ಯ ಸರ್ಕಾರವು ರಾಜ್ಯದಲ್ಲಿ ಸಿರಿಧಾನ್ಯ ಪ್ರದೇಶ ವಿಸ್ತರಣೆ ಹಾಗೂ ಉತ್ಪಾದನೆ ಹೆಚ್ಚಳ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು, ರೈತರಿಗೆ ಕೃಷಿ ಸಾಮಗ್ರಿ ಖರೀದಿ ಮಾಡಲು ಆರ್ಥಿಕ ಬೆಂಬಲವನ್ನು ರೈತ ಸಿರಿ ಯೋಜನೆಯ ಮೂಲಕ ನೀಡಲಾಗುತ್ತದೆ.
ಅಂದರೆ ಕೃಷಿಗೆ ಬೇಕಾದಂತಹ ಬೀಜ ಹಾಗೂ ಗೊಬ್ಬರಗಳನ್ನು ಕೊಂಡುಕೊಳ್ಳುವ ನಿಟ್ಟಿನಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 10,000 ಹಣವನ್ನು ರೈತ ಸಿರಿ ಯೋಜನೆ ಮೂಲಕ ರಾಜ್ಯ ಸರ್ಕಾರ ಜಮಾ ಮಾಡುತ್ತದೆ. ಗರಿಷ್ಠ ಎರಡು ಹೆಕ್ಟರ್ ಗೆ ಮಾತ್ರ ಪ್ರತಿ ಫಲಾನುಭವಿ ರೈತರಿಗೆ ಸೀಮಿತವಾಗುವಂತೆ ಪ್ರೋತ್ಸಾಹ ಧನವನ್ನು ವಿತರಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಆರ್ಥಿಕ ಸಹಾಯ ಮಾಡುತ್ತಿದೆ.
ರೈತ ಸಿರಿ ಯೋಜನೆಯ ಉದ್ದೇಶ:
- ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು
- ಕೃಷಿ ಕ್ಷೇತ್ರವನ್ನು ಉತ್ತೇಜಿಸಲು
- ರಾಜ್ಯದ ರೈತರಿಗೆ ಆರ್ಥಿಕ ನೆರವು ನೀಡುವುದು
- ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂ
- ರಾಜ್ಯದ ಒಣಭೂಮಿಯಲ್ಲಿ ನೀರನ್ನು ಪುನಃಸ್ಥಾಪಿಸಲು ಕೃಷಿ ಹೊಂಡಗಳನ್ನು ನಿರ್ಮಿಸುವುದು
ಇದನ್ನೂ ಸಹ ಓದಿ : ಮೇ.31 ರಿಂದ ಕೆಲವು ಬದಲಾವಣೆ ಜೊತೆ ಶಾಲೆ ಆರಂಭ.! 6, 7ನೇ ಕ್ಲಾಸ್ ವಿದ್ಯಾರ್ಥಿನಿಯರಿಗೂ ಚೂಡಿದಾರ್
ಅರ್ಹತೆ:
- ಅರ್ಜಿದಾರರು ಕರ್ನಾಟಕದ ಖಾಯಂ ನಾಗರಿಕರಾಗಿರಬೇಕು
- ಅರ್ಜಿದಾರರು ವೃತ್ತಿಯಲ್ಲಿ ರೈತರಾಗಿರಬೇಕು
- ರೈತ ಪ್ರಾಥಮಿಕವಾಗಿ ರಾಗಿ ಉತ್ಪಾದಕನಾಗಿರಬೇಕು
- ಈ ಯೋಜನೆಗೆ ಅರ್ಹತೆ ಪಡೆಯಲು ಕನಿಷ್ಠ ಒಂದು ಹೆಕ್ಟೇರ್ ಕೃಷಿ ಆಸ್ತಿ ಅಗತ್ಯವಿದೆ
ಕರ್ನಾಟಕ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯವಿದೆ:
- ಆಧಾರ್ ಕಾರ್ಡ್ ಅಥವಾ ಗುರುತಿನ ಪುರಾವೆ
- ಅರ್ಜಿದಾರರ ಭೂಮಿಗೆ ಸಂಬಂಧಿಸಿದ ದಾಖಲೆಗಳು
- ಶಾಶ್ವತ ನಿವಾಸಿ ಪ್ರಮಾಣಪತ್ರ
- ವಿಳಾಸ ಪುರಾವೆ
- ಪಡಿತರ ಚೀಟಿ
- ಬ್ಯಾಂಕ್ ಖಾತೆ ವಿವರಗಳು
- ಮೊಬೈಲ್ ನಂಬರ್
- ಭೂ ದಾಖಲೆ ವಿವರಗಳು
- ಪಾಸ್ಪೋರ್ಟ್ ಗಾತ್ರದ ಫೋಟೋಗಳು
ಇತರೆ ವಿಷಯಗಳು:
ದೇಶಾದ್ಯಂತ ಹೊಸ ಬದಲಾವಣೆ! ಈ ಎಲ್ಲಾ ಹೊಸ ನಿಯಮಗಳು ಅನ್ವಯ
ವಿದ್ಯಾರ್ಥಿಗಳ ಅಡ್ಮೀಶನ್ ಗೆ ಹೊಸ ರೂಲ್ಸ್!
ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕಾ? ಸರ್ಕಾರದಿಂದ ಸಿಕ್ತು ಬಿಗ್ ಅಪ್ಡೇಟ್