ಹಲೋ ಸ್ನೇಹಿತರೇ, ಕರ್ನಾಟಕ ಶಾಲೆಗಳ ಪ್ರಾರಂಭ ಮೇ 31 ರಿಂದ ಅಧಿಕೃತವಾಗಿ ಆರಂಭವಾಗುತ್ತಿದೆ. ಅಂದಿನಿಂದ ಮಕ್ಕಳು ಶಾಲೆಗೆ ಬರಬೇಕಿದೆ. ಇಲಾಖೆಯು ಶಾಲೆಗಳಿಗೆ ಈಗಾಗಲೇ ಸಮವಸ್ತ್ರ ತಲುಪಿಸಿದ್ದು, ವಿತರಣೆ ಕಾರ್ಯವು ಪ್ರಾರಂಭವಾಗಿದೆ. ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಕರ್ನಾಟಕದಾದ್ಯಂತ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ. ಸರ್ಕಾರಿ, ಅನುದಾನಿತ ಶಾಲೆಗಳು 29 ರಿಂದ ಪುನಾರಂಭಗೊಳ್ಳುತ್ತಿವೆ. ಈಗಾಗಲೇ ಜಿಲ್ಲೆಗಳಿಗೆ ಶೇಕಡ.70 ರಷ್ಟು ಪಠ್ಯಪುಸ್ತಕ ರವಾನೆ ಮಾಡಿರುವ ಶಿಕ್ಷಣ ಇಲಾಖೆ, ಹಲವು ಚಟುವಟಿಕೆಗಳನ್ನು ನಿಗದಿತ ಅವಧಿಯಲ್ಲಿ ಮಾಡಿ ಮುಗಿಸುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅವುಗಳಲ್ಲಿ ಶಾಲೆಗಳಲ್ಲಿ ಮೊದಲನೇ ದಿನದಿಂದಲೇ ಪಠ್ಯಪುಸ್ತಕಗಳನ್ನು & ಸಮವಸ್ತ್ರಗಳನ್ನು ನೀಡಬೇಕೆಂಬ ಸೂಚನೆಯನ್ನು ನೀಡಿದೆ. ಸೋಮವಾರದ ತನಕ ಶೇ.70 ಪಠ್ಯಪುಸ್ತಕಗಳು ಜಿಲ್ಲಾ ಕೇಂದ್ರಗಳಿಗೆ ತಲುಪಿಸಲಾಗಿದ್ದು, ಇನ್ನುಳಿದ ಪಠ್ಯಪುಸ್ತಕಗಳನ್ನು ಹಂತ ಹಂತವಾಗಿ ತಲುಪಿಸುವ ಕಾರ್ಯ ನಡೆಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯು ತಿಳಿಸಿದೆ.
ಶಾಲೆಗಳನ್ನು ತೆರೆದ ಮೊದಲ 2 ದಿನಗಳ ಒಳಗಾಗಿ ಅಗತ್ಯ ಸ್ವಚ್ಛತಾ ಕಾರ್ಯ ಮುಗಿಸಬೇಕು. ಮೇ 31 ರಂದು ಮಕ್ಕಳಿಗೆ ಸಿಹಿ ನೀಡಿ ‘ಶಾಲಾ ಪ್ರಾರಂಭೋತ್ಸವ’ ನಡೆಸುವಂತೆ ತಿಳಿಸಿದೆ. ತರಗತಿ / ಸಿಬ್ಬಂದಿ ಕೊಠಡಿ, ಶಾಲಾ ಮೈದಾನ, ನೀರಿನ ಟ್ಯಾಂಕ್, ಅಡುಗೆ ಕೋಣೆ, ಆಹಾರ ಧಾನ್ಯಗಳ ಸ್ವಚ್ಛತೆ & ಅಡುಗೆ ಪರಿಕರಗಳನ್ನು ಸ್ವಚ್ಛಗೊಳಿಸುವಂತೆ ತಿಳಿಸಿದ್ದಾರೆ.
ಮೇ 29 ರಂದು ಶಿಕ್ಷಕರು ವರ್ಷದ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಾರ್ಷಿಕ ಕ್ರಿಯಾ ಯೋಜನೆ, ಶಿಕ್ಷಕರು ಪಾಠ ಯೋಜನೆ ತಯಾರಿಸಿಕೊಳ್ಳುವುದು, ಶಾಲಾ, ತರಗತಿ, ಶಿಕ್ಷಕರ ವೇಳಾಪಟ್ಟಿ, ಶಾಲಾಭಿವೃದ್ಧಿ ಯೋಜನೆ, ಶಾಲೆ ಬಿಟ್ಟಿರುವ ಮಕ್ಕಳನ್ನು ಗುರುತಿಸಿ ವಿಶೇಷ ದಾಖಲಾತಿ ಮಾಡಿಕೊಳ್ಳಲು ಜಾಥಾ, ಪ್ರಭಾತ್ ಪೇರಿ, ಮನೆ ಭೇಟಿ ಮುಂತಾದ ಕ್ರಮಗಳನ್ನು ಹಮ್ಮಿಕೊಳ್ಳುವುದು.
ವಿದ್ಯಾರ್ಥಿಗಳಿಗೆ ಸೇತುಬಂಧ
ಜೂನ್ 01 ರಿಂದ 30ರ ವರೆಗೂ ಸೇತುಬಂಧ ಕಾರ್ಯಕ್ರಮ ನಡೆಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಸಮವಸ್ತ್ರದಲ್ಲಿ ಕೆಲವು ಬದಲಾವಣೆ
ಸಮವಸ್ತ್ರದಲ್ಲಿ ಕೆಲವು ಬದಲಾವಣೆಯನ್ನು ಈ ವರ್ಷ ಶಿಕ್ಷಣ ಇಲಾಖೆ ಮಾಡಿದೆ. 8, 9 & 10ನೇ ಕ್ಲಾಸ್ ವಿದ್ಯಾರ್ಥಿನಿಯರಿಗೆ ನೀಡುತ್ತಿದೆ. ಚೂಡಿದಾರ್ ಸಮವಸ್ತ್ರವನ್ನು ಈ ವರ್ಷದಿಂದ 6 & 7 ನೇ ಕ್ಲಾಸ್ ವಿದ್ಯಾರ್ಥಿನಿಯರಿಗೂ ನೀಡಲು ಮುಂದಾದ ಶಿಕ್ಷಣ ಇಲಾಖೆ. ಖುಷಿ ವಿಚಾರವಾಗಿ ಶಾಲಾರಂಭದಲ್ಲಿಯೇ 2 ಜೊತೆ ಸಮವಸ್ತ್ರವನ್ನು 1 – 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಮುಂದಾದ ಇಲಾಖೆ. ಕಳೆದ ವರ್ಷ ಒಂದೇ ಜೊತೆ ಸಮವಸ್ತ್ರ ವಿತರಣೆ ಮಾಡಿತ್ತು. ಆದರೆ, ಈ ಬಾರಿ ಪ್ರಾರಂಭದಲ್ಲಿಯೇ 2 ಜೊತೆಯನ್ನೂ ವಿತರಣೆ ಮಾಡಿದೆ. ತಿಳಿ ನೀಲಿ ಬಣ್ಣದ ಟಾಪ್ & ಕಡು ನೀಲಿ ಬಣ್ಣದ ದುಪ್ಪಟವನ್ನು ವಿತರಣೆ ಮಾಡಲಾಗಿದೆ. ಉಳಿದಂತೆ 1 – 7ನೇ ತರಗತಿ ಬಾಲಕರಿಗೆ ಚಡ್ಡಿ & ಅಂಗಿ, 6ನೇ ತರಗತಿ ಮೇಲ್ಪಟ್ಟವರಿಗೆ ಪ್ಯಾಂಟ್ ಸಮವಸ್ತ್ರ ನೀಡಲಾಗುತ್ತಿದೆ.
ಇತರೆ ವಿಷಯಗಳು
ಜೂನ್ 1 ರಿಂದ ಹೊಸ ನಿಯಮ: ಈ ನಿಯಮಗಳನ್ನು ಬ್ರೇಕ್ ಮಾಡಿದ್ರೆ ದಂಡ ಗ್ಯಾರಂಟಿ!
ರೈತರಿಗೆ ಮಾಸಿಕ ರೂ. 3000 ಪಿಂಚಣಿ ಸೌಲಭ್ಯ! ಈ ಯೋಜನೆ ಮೂಲಕ ಅಪ್ಲೇ ಮಾಡಿ