ಹಲೋ ಸ್ನೇಹತರೇ, ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಪ್ರತಿ ತಿಂಗಳು 5,000 ರೂ. ಪಡೆಯಬಹುದಾದ ಒಂದು ಯೋಜನೆ ನೀವು ಕೂಡ ಅಪ್ಲೇ ಮಾಡಿ. ಈ ಯೋಜನೆಯನ್ನು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
2015ರ ಕೇಂದ್ರ ಬಜೆಟ್‌ನಲ್ಲಿ ಪ್ರಧಾನಿ ಮೋದಿಯವರು ಅಟಲ್ ಪಿಂಚಣಿ ಯೋಜನೆಯನ್ನು ಘೋಷಣೆ ಮಾಡಿದ್ದು. ವೃದ್ಧಾಪ್ಯದಲ್ಲಿರುವ ಪುರುಷರು & ಮಹಿಳೆಯರಿಗೆ ಆರ್ಥಿಕ ಸಬಲೀಕರಣ ಒದಗಿಸಲು ಈ ಯೋಜನೆ ಆರಂಭಿಸಲಾಗಿದೆ. ಇದು ವೃದ್ಧಾಪ್ಯ ವೇತನಕ್ಕಾಗಿ ಕೇಂದ್ರ ಸರ್ಕಾರದ ಖಚಿತ ಯೋಜನೆಯಾಗಿದೆ. ಇದರಲ್ಲಿ ನೀವು nominal ಪ್ರೀಮಿಯಂ ಪಾವತಿ ಮಾಡಬೇಕು. ಅಸಂಘಟಿತ ವಲಯದ ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಯನ್ನು ಜಾರಿ ತರಲಾಗಿದೆ. ಅಂದಹಾಗೆ 2015-16ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಆರಂಭಿಸಿತ್ತು.
ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನಿಂದ ತಿಂಗಳಿಗೆ 1,000/2,000/3,000/4,000 ಮತ್ತು 5,000 ರೂ. ಮೊತ್ತದ ಖಚಿತ ಪಿಂಚಣಿ ಪಡೆದುಕೊಳ್ಳುತ್ತಾರೆ. ಯಾವುದೇ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ಗರಿಷ್ಠ 40 ವರ್ಷ. ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯಡಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು / ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿರಬೇಕು.
ಪ್ರತಿ ತಿಂಗಳು ಕನಿಷ್ಠ 1,000 – 5,000 ರೂ. ಪಿಂಚಣಿ ಪಡೆಯಲು ನೀವು ನಿಯಮಿತವಾಗಿ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು 5,000 ರೂ. ಪಿಂಚಣಿ ಸಿಗಲಿದೆ. ನೀವು ಜನ್-ಧನ್ ಯೋಜನೆ ಖಾತೆ ಹೊಂದಿರುವ ಬ್ಯಾಂಕ್‌ಗೆ ಹೋಗಿ ಅಪ್ಲೇ ಮಾಡಬಹುದು. ನೀವು ಯಾವುದೇ ಭಾರತೀಯ ಅಂಚೆ ಕಚೇರಿಗೆ ಹೋಗಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಗಂಡ & ಹೆಂಡತಿ ಇಬ್ಬರೂ ಈ ಯೋಜನೆಯ ಲಾಭ ಪಡೆಯಬಹುದು.
ಈ ಮೂಲಕ ಪ್ರತಿ ಮನೆಗೆ ಗರಿಷ್ಠ 10 ಸಾವಿರ ರೂ. ಪಿಂಚಣಿ ಸಿಗಲಿದೆ. ಸಂಗಾತಿಗಳಲ್ಲಿ ಒಬ್ಬರು ಸಾವನ್ನಪ್ಪಿದರೆ, ಇನ್ನೊಬ್ಬರು ಪಿಂಚಣಿಯ ಲಾಭ ಪಡೆಯುತ್ತಾರೆ. ಇಬ್ಬರೂ ಮೃತಪಟ್ಟರೆ ಸಂಪೂರ್ಣ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ. ಈ ಪಿಂಚಣಿ ಯೋಜನೆಯ ಲಾಭ ಪಡೆಯುವವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ & ಪಡಿತರ ಚೀಟಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ತಡಮಾಡದೆ ಈ ಪಿಂಚಣಿ ಯೋಜನೆಯ ಪ್ರಯೋಜನ ಪಡೆಯಲು ಖಾತೆ ಹೊಂದಿರುವ ಬ್ಯಾಂಕ್‌ಗೆ ಭೇಟಿ ನೀಡಿ ಹಣ ಹೂಡಿಕೆ ಮಾಡಲು ಶುರು ಮಾಡಿಕೊಳ್ಳಿ.
ಇತರೆ ವಿಷಯಗಳು
ಪಿಎಂ ಕಿಸಾನ್ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್! ಈ ದಿನ ಖಾತೆಗೆ ಹಣ ಜಮಾ
ಮನೆಯಲ್ಲೇ ಕುಳಿತು ಹೊಸ ರೇಷನ್ ಕಾರ್ಡ್ ಮಾಡಿಸಲು ಹೀಗೆ ಅರ್ಜಿ ಸಲ್ಲಿಸಿ!