rtgh

ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ! ಇನ್ನೆರಡು ದಿನ ಮುಂದುವರಿಕೆ

rain update karnataka
Share

ಹಲೋ ಸ್ನೇಹಿತರೇ, ರಾಜ್ಯದ ಉತ್ತರ ಒಳನಾಡಿನ ಕೆಲವೆಡೆ ಮತ್ತು ಕರಾವಳಿ – ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದ್ದು, ಇನ್ನೂ ಎರಡು ದಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಇನ್ನೆರಡು ದಿನ ಮುಂದುವರಿಯಲಿದೆ.

rain update karnataka

ಏ. 20 ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಚಿತ್ರದುರ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಏ 21ರಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಳಗಾವಿಯಲ್ಲಿ ಭಾರಿ ಮಳೆ

ಏ. 18ರ ಬೆಳಗ್ಗೆಯಿಂದ ಏ. 19ರ ಬೆಳಗ್ಗೆವರೆಗೆ ರಾಜ್ಯದ ಹಲವು ಹಲವೆಡೆ ಮಳೆಯಾಗಿದೆ. ಪ್ರಮುಖವಾಗಿ ಬೆಳಗಾವಿ ಜಿಲ್ಲೆ ಅಥಣಿ ಮತ್ತು ನಿಪ್ಪಾಣಿಯಲ್ಲಿ 6 ಸೆಂ.ಮೀ., ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ 4 ಸೆಂ.ಮೀ., ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ, ಬಾಗಲಕೋಟೆ ಜಿಲ್ಲೆಯ ಲೋಕಾಪುರ, ಗದಗ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಸೇಡಬಾಳ, ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆ, ತ್ಯಾಗರ್ತಿ, ಹಾಸನ ಜಿಲ್ಲೆಯ ಬೇಲೂರಿನಲ್ಲಿ ತಲಾ ಮೂರು ಸೆಂ.ಮೀ. ಮಳೆಯಾಗಿದೆ.

ಇದನ್ನೂ ಸಹ ಓದಿ : PF ಅಕೌಂಟ್ ಇದ್ದವರಿಗೆ ಹೊಸ ಸುದ್ದಿ! ನಿಯಮದಲ್ಲಿ ಮಹತ್ತರ ಬದಲಾವಣೆ

ದಾವಣಗೆರೆಗೆ ತಂಪೆರದ ಮಳೆ

ದಾವಣಗೆರೆ ಜಿಲ್ಲೆಯಲ್ಲಿ ಶುಕ್ರವಾರವೂ ಗುಡುಗು, ಸಿಡಿಲು, ಮಿಂಚಿನ ಆರ್ಭಟದ ಜತೆ ಮಳೆ ಮುಂದುವರಿದಿದ್ದು ಹಲವೆಡೆ ಬಿರು ಮಳೆ ಸುರಿದಿದೆ. ದಾವಣಗೆರೆ ನಗರದಲ್ಲೂ ಸಂಜೆ ನಂತರ ಮೋಡ ಮುಸುಕಿದ ವಾತಾವರಣವಿದ್ದು ತುಂತುರು ಮಳೆ ಸುರಿಯಿತು. ದಾವಣಗೆರೆ ನಗರ ಮತ್ತು ಮಾಯಕೊಂಡ ಭಾಗದಲ್ಲಿ ಗುಡುಗು, ಸಿಡಿಲು, ಮಿಂಚಿನ ಆರ್ಭಟ ಜೋರಿತ್ತು, ತುಂತುರು ಮಳೆ ಸುರಿದಿದೆ.

ಶಿವಮೊಗ್ಗದಲ್ಲಿ ಸಿಡಿಲು ಆರ್ಭಟ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯೂ ಶುಕ್ರವಾರ ಸಂಜೆ ಗುಡುಗು, ಸಿಡಿಲು ಆರ್ಭಟದೊಂದಿಗೆ ಸಾಧಾರಣದಿಂದ ಜೋರು ಮಳೆ ಸುರಿಯಿತು. ಶಿವಮೊಗ್ಗ, ಶಿಕಾರಿಪುರ, ಸಾಗರ, ಭದ್ರಾವತಿ ತಾಲೂಕಿನಲ್ಲಿ ಚದುರಿದಂತೆ ಮಳೆ ಸುರಿಯಿತು. ಕೆಲವೆಡೆ ಮಳೆಗಿಂತ ಬಿರುಗಾಳಿ, ಸಿಡಿಲಿನಿಂದ ಹಾನಿಯೇ ಅಧಿಕವಾಗುತ್ತಿದೆ.

ಕೆಲವು ಭಾಗಗಳಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಗುಡುಗು ಹಾಗೂ ಮಳೆ ಶನಿವಾರ ಬೆಳಗಿನವರೆಗೂ ಮುಂದುವರಿದಿದೆ. ಇದರಿಂದ ಮಲೆನಾಡು, ಕರಾವಳಿ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಐದು ತಿಂಗಳ ಬಳಿಕ ಕೊನೆಗೂ ಮಳೆರಾಯನ ದರ್ಶನವಾಗಿದೆ. ನಗರದ ಕೆಲವು ಭಾಗಗಳಲ್ಲಿ ತುಂತುರು ಮಳೆ ಸುರಿದಿದೆ.

ಇತರೆ ವಿಷಯಗಳು:

APL, BPL ರೇಷನ್ ಕಾರ್ಡ್ ಇದ್ದವರಿಗೆ ವಿಶೇಷ ಅಧಿಕಾರ ಕೊಟ್ಟ ಸರ್ಕಾರ!

ರಾಜ್ಯದಲ್ಲಿ ಮುಂದಿನ 5 ದಿನ ಈ ಜಿಲ್ಲೆಗಳಲ್ಲಿ ಮಳೆ! IMD ಮುನ್ಸೂಚನೆ

ವಿವಾಹಿತ ಮಹಿಳೆಯರ ಖಾತೆಗೆ 6,000 ರೂ.! ಕೇಂದ್ರ ಸರ್ಕಾರದ ಮಹತ್ವದ ಯೋಜನೆ


Share

Leave a Reply

Your email address will not be published. Required fields are marked *