rtgh
Headlines

ವಿವಾಹಿತ ಮಹಿಳೆಯರ ಖಾತೆಗೆ 6,000 ರೂ.! ಕೇಂದ್ರ ಸರ್ಕಾರದ ಮಹತ್ವದ ಯೋಜನೆ

pradhan mantri matru vandana yojana
Share

ಹಲೋ ಸ್ನೇಹಿತರೇ, ಸರ್ಕಾರವು ವಿವಾಹಿತ ಮಹಿಳೆಗೆ ವಿಶೇಷ ಯೋಜನೆಯನ್ನು ನಡೆಸುತ್ತಿದೆ. ಈ ಯೋಜನೆ ಮೂಲಕ ಮಹಿಳೆಯ ಖಾತೆಗೆ 6,000 ರೂ. ವರ್ಗಾಯಿಸುತ್ತದೆ. ಈ ಯಾವುದು ಈ ಯೋಜನೆ ಪ್ರಯೋಜನವನ್ನು ಪಡೆಯುವುದು ಹೇಗೆ?

pradhan mantri matru vandana yojana

ಮೋದಿ ಸರ್ಕಾರವು ರೈತರು, ವಿದ್ಯಾರ್ಥಿಗಳು & ಮಹಿಳೆಯರಿಗಾಗಿ ವಿವಿಧ ಯೋಜನೆಗಳನ್ನು ನಡೆಸುತ್ತಿದೆ. ಪಿಎಂ ಕಿಸಾನ್ ಯೋಜನಯಡಿಯಲ್ಲಿ ಸರ್ಕಾರವು ಪ್ರತಿ ವರ್ಷ ರೈತರಿಗೆ 6000 ರೂ. ಆರ್ಥಿಕ ನೆರವು ನೀಡಲಿದೆ. ಅದೇ ರೀತಿ ಸರ್ಕಾರವು ವಿವಾಹಿತ ಮಹಿಳೆಯರಿಗಾಗಿಯೂ ವಿಶೇಷ ಯೋಜನೆ ನಡೆಸುತ್ತಿದೆ. ದೇಶದ ಮಹಿಳೆಯರಿಗಾಗಿ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಈ ಯೋಜನೆಯಲ್ಲಿ, ಸರ್ಕಾರ ಇದುವರೆಗೂ 3.32 ಕೋಟಿ ಮಹಿಳೆಯರಿಗೆ ಪ್ರಯೋಜನವನ್ನು ನೀಡಿದೆ. ಈ ಮೂಲಕ 14,888 ಕೋಟಿ ರೂ.ಗಳನ್ನು ವಿತರಿಸಿದೆ. 

ನಾವಿಲ್ಲಿ ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಕುರಿತು ಮಾತನಾಡುತ್ತಿದ್ದೇವೆ.ಈ ಯೋಜನೆಯ ಪ್ರಯೋಜನಗಳು ವಿವಾಹಿತ ಮಹಿಳೆಯರಿಗೆ ಮಾತ್ರ ಸಿಗಲಿದೆ. ಈ ಯೋಜನೆಯಡಿ ಗರ್ಭಿಣಿಯರಿಗೆ 6000 ರೂ.ನೆರವು ನೀಡಲಾಗುವುದು. ಮೋದಿ ಸರ್ಕಾರವು ಗರ್ಭಿಣಿಯರಿಗೆ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯಲ್ಲಿ ಗರ್ಭಿಣಿಯರಿಗೆ ಸರ್ಕಾರದಿಂದ ಧನಸಹಾಯ ನೀಡಲಾಗುತ್ತದೆ ಮತ್ತು ದೇಶಾದ್ಯಂತ ಜನಿಸಿದ ಮಕ್ಕಳಿಗೆ ಅಪೌಷ್ಟಿಕತೆ & ಯಾವುದೇ ರೀತಿಯ ಕಾಯಿಲೆ ಬಾರದಂತೆ ತಡೆಯಲು ಹಣವನ್ನು ನೀಡಲಾಗುವುದು.

ಯೋಜನೆಯ ವೈಶಿಷ್ಟ್ಯಗಳೇನು ?: 

  • ಗರ್ಭಿಣಿಯರಿಗೆ ಕನಿಷ್ಠ 19 ವರ್ಷ ವಯೋಮಿತಿ.
  • ಈ ಯೋಜನೆಯಲ್ಲಿ ನೀವು ಆಫ್‌ಲೈನ್‌ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ
  • ಸರ್ಕಾರವು ಈ ಯೋಜನೆಯ ಮೊತ್ತವನ್ನು 3 ಕಂತುಗಳಲ್ಲಿ ನೀಡಲಾಗುವುದು.
  • ಯೋಜನೆಯನ್ನು ಜನವರಿ 1, 2017 ರಂದು ಆರಂಭಿಸಲಾಯಿತು.

ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ : 

ಅಧಿಕೃತ ವೆಬ್‌ಸೈಟ್ ವಿಳಾಸ https://wcd.nic.in/schemes/pradhan-mantri-matru-vandana-yojana. ಈ ‌ಲಿಂಕ್‌ನಲ್ಲಿ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ತಿಳಿಯಬಹುದು. ಯೋಜನೆಗೆ ಅರ್ಜಿ ಸಲ್ಲಿಸುವಲ್ಲಿ ಮಹಿಳೆಯರು ಯಾವುದೇ ಸಮಸ್ಯೆ ಎದುರಾದರೇ, ಸಹಾಯವಾಣಿ ಸಂಖ್ಯೆ 7998799804ಗೆ ಕರೆ ಮಾಡಬಹುದು.

ಯೋಜನೆಯ ಹಣ ಪಡೆಯುವುದು ಹೇಗೆ? : 

ಫಲಾನುಭವಿ ಮಹಿಳೆ 3 ಕಂತುಗಳಲ್ಲಿ ಯೋಜನೆಯ ಹಣವನ್ನು ಪಡೆಯಬಹುದು. ಮೊದಲ ಕಂತು 1000 ರೂ., 1ನೇ ಕಂತು 2000 ರೂ.& 3ನೇ ಕಂತು 2000ರೂ. ಈ ಹಣವನ್ನು ನೇರವಾಗಿ ಗರ್ಭಿಣಿಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು. ಮತ್ತೊಂದೆಡೆ, ಜನನದ ಸಮಯದಲ್ಲಿ ಸರ್ಕಾರವು ಆಸ್ಪತ್ರೆಗೆ 1000 ರೂ.ಪಾವತಿ ಮಾಡುತ್ತದೆ. ಈ ಯೋಜನೆಯ ಪ್ರಯೋಜನವನ್ನು ಬದುಕುಳಿದ ಮೊದಲ ಮಗುವಿಗೆ ಮಾತ್ರ ನೀಡಲಾಗುವುದು.  5000 ರೂ.ನ್ನು ಗರ್ಭಿಣಿ ಚಿಕಿತ್ಸೆ & ಔಷಧಿಗಳ ವೆಚ್ಚ ನಿರ್ವಹಿಸಲು ಸಹಾಯ ಮಾಡಲಾಗುವುದು.

ಇತರೆ ವಿಷಯಗಳು

ರೈತ ಪಿಂಚಣಿ: ಪ್ರತಿ ತಿಂಗಳು 3,000 ನೀಡಲು ಹೊಸ ಘೋಷಣೆ!!

ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಭರ್ಜರಿ ನೇಮಕಾತಿ !! ನಿಮ್ಮ ಊರಲ್ಲೇ ಸಿಗತ್ತೆ ಉದ್ಯೋಗ


Share

Leave a Reply

Your email address will not be published. Required fields are marked *