rtgh
Headlines

SSLC ಉತ್ತರ ಪತ್ರಿಕೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣ: ಈ ದಿನ ಹೊರಬೀಳಲಿದೆ ರಿಸಲ್ಟ್

10th result 2024
Share

ಹಲೋ ಸ್ನೇಹಿತರೇ, CBSE 10 & 12ನೇ ತರಗತಿ  ಪರೀಕ್ಷೆಗಳು ಮಾರ್ಚ್ 13ಕ್ಕೆ ಕೊನೆಗೊಂಡಿದೆ. ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ.  

10th result 2024

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ 10 & 12 ನೇ ತರಗತಿಯ 39 ಲಕ್ಷ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾರೆ. ಇದೀಗ ಈ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸ ಪೂರ್ಣಗೊಂಡಿದೆ. 12ನೇ ತರಗತಿಯ ನಾಲ್ಕು ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಇನ್ನೂ ನಡೆಯುತ್ತಿದೆ. 

ಸಿಬಿಎಸ್‌ಇ 10ನೇ-12ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15ರಿಂದ ಪ್ರಾರಂಭವಾಗಿದ್ದು, 10 ನೇ ತರಗತಿಯ ಪರೀಕ್ಷೆಗಳು ಮಾರ್ಚ್ 13 ರಂದು  ಕೊನೆಗೊಂಡಿದೆ. 12 ನೇ ತರಗತಿಯ ಪರೀಕ್ಷೆಗಳು ಏಪ್ರಿಲ್ 2 ರಂದು ಕೊನೆಯಾಗುತ್ತವೆ.  

ಮೌಲ್ಯಮಾಪನ ಕಾರ್ಯಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ಹೇಳುತ್ತಿರುವ ಪ್ರಕಾರ, 10ನೇ ತರಗತಿಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಬಹಳ ಹಿಂದೆಯೇ ಮುಗಿದಿದ್ದು. ಆದರೆ ಪ್ರಸ್ತುತ 12 ನೇ ತರಗತಿಯ  ಬಿಸಿನೆಸ್ ಸ್ಟಡೀಸ್, ಕಂಪ್ಯೂಟರ್ ಸೈನ್ಸ್, ಅಕೌಂಟೆನ್ಸಿ & ಇನ್ಫರ್ಮೇಷನ್ ಪ್ರಾಕ್ಟೀಸ್ ವಿಷಯಗಳ ಮೌಲ್ಯಮಾಪನ ಕಾರ್ಯವು ನಡೆಯಲಿದೆ. ಈ ವಿಷಯಗಳ ಪರೀಕ್ಷೆಗಳು ಮಾರ್ಚ್ & ಏಪ್ರಿಲ್ ಅಂತ್ಯದಲ್ಲಿ ನಡೆಯಿತು. ಈ ಪೇಪರ್ಗಳ  ಮೌಲ್ಯಮಾಪನ ಕಾರ್ಯವೂ 1 ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮೌಲ್ಯಮಾಪನ ಕಾರ್ಯದೊಂದಿಗೆ ಅಂಕಗಳನ್ನು ಸಹ ಅಪ್ಲೋಡ್ ಮಾಡುವುದರಿಂದ ಮೌಲ್ಯಮಾಪನ ಕಾರ್ಯ ಮುಗಿದ ತಕ್ಷಣ, ಫಲಿತಾಂಶವನ್ನು ಕಂಪೈಲ್ ಮಾಡಲು ಮಂಡಳಿಯು ಸುಮಾರು 15 ದಿನಗಳನ್ನು ತೆಗೆದುಕೊಳ್ಳಲಿದೆ. ಕಳೆದ ವರ್ಷವೂ ಮಂಡಳಿಯು ಮೇ ತಿಂಗಳ ಪ್ರಾರಂಭದಲ್ಲಿ ಒಂದೇ ದಿನ ಎರಡೂ ತರಗತಿಗಳ ಫಲಿತಾಂಶ ಪ್ರಕಟಿಸಲಾಗುವುದು. ಎರಡೂ ತರಗತಿಗಳ ಫಲಿತಾಂಶ ಒಂದೇ ದಿನ ಬಿಡುಗಡೆಯಾಗಲಿದೆಯೇ / ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಮೇ ಮೊದಲ ವಾರದಿಂ 2ನೇ ವಾರದೊಳಗೆ ಯಾವಾಗ ಬೇಕಾದರೂ ಫಲಿತಾಂಶ ಪ್ರಕಟಿಸಲು ಮಂಡಳಿ ಸಿದ್ಧತೆಯನ್ನು ನಡೆಸಿದೆ. ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ CET ಪ್ರವೇಶ ಪರೀಕ್ಷೆಯೂ ಮೇ 15 ರಿಂದ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಮಂಡಳಿಯು ಅದಕ್ಕೂ ಮುನ್ನವೇ ಫಲಿತಾಂಶ ಪ್ರಕಟ ಮಾಡುತ್ತದೆ. ಫಲಿತಾಂಶದ ಕುರಿತು ಮಂಡಳಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತರೆ ವಿಷಯಗಳು

2024-25ನೇ ಶೈಕ್ಷಣಿಕ ಸಾಲಿನ ಪದವಿ ಕಾಲೇಜುಗಳ ಪ್ರವೇಶಾತಿಗೆ ಶೇ.10 ಶುಲ್ಕ ಹೆಚ್ಚಳ

ಭಾರಿ ಏರಿಕೆಯ ನಂತರ ಇಂದಿನಿಂದ ಇಳಿಕೆಯತ್ತಾ ಚಿನ್ನ!!


Share

Leave a Reply

Your email address will not be published. Required fields are marked *