ಹಲೋ ಸ್ನೇಹಿತರೇ, NVS ಬೋಧಕೇತರ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕಾಲಾವಕಾಶ ಮುಂದೂಡಿಕೆ. ಸಹಾಯಕರು, ಸ್ಟಾಫ್ ನರ್ಸ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಒಟ್ಟು 1377 ನಾನ್ ಟೀಚಿಂಗ್ ಹುದ್ದೆಗಳಿಗೆ ಆಸಕ್ತರು ಈಗ ಮೇ 14 ರವರೆಗೆ ಅರ್ಜಿ ಸಲ್ಲಿಸಬಹುದು. ಅರ್ಹರಿಗೆ ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ನವೋದಯ ವಿದ್ಯಾಲಯ ಸಮಿತಿಯು ಮಹಿಳಾ ಸ್ಟಾಫ್ ನರ್ಸ್, ಅಸಿಸ್ಟಂಟ್ ಸೆಕ್ಷನ್ ಆಫೀಸರ್, ಆಡಿಟ್ ಅಸಿಸ್ಟಂಟ್, ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್, ಲೀಗಲ್ ಅಸಿಸ್ಟಂಟ್, ಸ್ಟೆನೋಗ್ರಾಫರ್, ಕಂಪ್ಯೂಟರ್ ಆಪರೇಟರ್, ಕ್ಯಾಟರಿಂಗ್ ಸೂಪರ್‌ವೈಸರ್, ಜೂನಿಯರ್ ಇಲೆಕ್ಟ್ರೀಷಿಯನ್, ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್, ಇಲೆಕ್ಟ್ರೀಷಿಯನ್ ಕಂ ಪ್ಲಂಬರ್, ಲ್ಯಾಬ್, ಅಟೆಂಡಂಟ್, ಮೆಸ್ ಹೆಲ್ಪರ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ ಆನ್‌ಲೈನ್ ಅರ್ಜಿಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಯಾವುದೇ ಹುದ್ದೆಗಳಲ್ಲಿ ಆಸಕ್ತಿ ಇರುವವರು ಈಗ ಮೇ 14 ರವರೆಗೆ ಅರ್ಜಿ ಸಲ್ಲಿಸಬಹುದು.
NVS ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 14-05-2024
ಎನ್‌ವಿಎಸ್‌ನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಲವು ಅಭ್ಯರ್ಥಿಗಳು ತಾಂತ್ರಿಕ ಸಮಸ್ಯೆ ಎದುರಿಸಿದ್ದು, ಅರ್ಜಿ ಸಲ್ಲಿಸಲು ಕಾಲಾವಕಾಶ ವಿಸ್ತರಣೆ ಮನವಿ ಮಾಡಿದ ಕಾರಣ, ಈಗ ಮತ್ತೆ ಅರ್ಜಿ ಅವಧಿ ವಿಸ್ತರಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ಹೊಂದಿರುವವರು ಮತ್ತೆ ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (ಜೆಎಸ್‌ಎ) : 360
ಇಲೆಕ್ಟ್ರೀಷಿಯನ್ ಕಮ್ ಪ್ಲಂಬರ್ : 128
ಲ್ಯಾಬ್ ಅಟೆಂಡಂಟ್ : 161
ಮೆಸ್ ಹೆಲ್ಪರ್ : 442
ಸ್ಟಾಫ್ ನರ್ಸ್ : 121
ಅಸಿಸ್ಟಂಟ್ ಸೆಕ್ಷನ್ ಆಫೀಸರ್ (ಎಎಸ್‌ಒ) : 05
ಆಡಿಟ್ ಅಸಿಸ್ಟಂಟ್ : 12
ಜೂನಿಯರ್ ಟ್ರಾನ್ಸ್‌ಲೇಷನ್ ಆಫೀಸರ್ : 04
ಲೀಗಲ್ ಅಸಿಸ್ಟಂಟ್ : 01
ಸ್ಟೆನೋಗ್ರಾಫರ್ : 23
ಕಂಪ್ಯೂಟರ್ ಆಪರೇಟರ್ : 02
ಕ್ಯಾಟರಿಂಗ್ ಸೂಪರ್‌ವೈಸರ್ : 78
ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (HQ / RO Cadre) : 21
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) : 19
ಸ್ಟಾಫ್ ನರ್ಸ್ ಹುದ್ದೆಗಳಿಗೆ ಅಪ್ಲಿಕೇಶನ್ ಶುಲ್ಕ ರೂ.1500.
ಸ್ಟಾಫ್ ನರ್ಸ್ ಹುದ್ದೆಗಳಿಗೆ ಅರ್ಜಿ ಹಾಕುವ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಶುಲ್ಕ ರೂ.500.
ಇತರೆ ಹುದ್ದೆಗಳಿಗೆ ಅರ್ಜಿ ಹಾಕುವ ಸಾಮಾನ್ಯ/ ಒಬಿಸಿ ಕೆಟಗರಿಯವರಿಗೆ ಅಪ್ಲಿಕೇಶನ್ ಶುಲ್ಕ ರೂ.1000.
ಇತರೆ ಕೆಟಗರಿಯವರಿಗೆ ಅಪ್ಲಿಕೇಶನ್ ಶುಲ್ಕ ರೂ.500.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸುವ ವಿಧಾನ
ನವೋದಯ ವಿದ್ಯಾಲಯ ಸಮಿತಿಯ ಬೋಧಕೇತರ ಹುದ್ದೆಗಳಿಗೆ ಅರ್ಜಿಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯ ಪೋರ್ಟಲ್ ಮೂಲಕವೇ ಸಲ್ಲಿಸಬೇಕು. ಆಸಕ್ತರು ಅರ್ಜಿ ಹಾಕಲು ವೆಬ್ ವಿಳಾಸ https://nvs.ntaonline.in/login-page ಕ್ಕೆ ಭೇಟಿ ನೀಡಿ ರಿಜಿಸ್ಟ್ರೇಷನ್ ಪಡೆದು, ಅರ್ಜಿ ಸಲ್ಲಿಸಿ.
ನವೋದಯ ವಿದ್ಯಾಲಯ ಸಮಿತಿಯು ದೇಶದಾದ್ಯಂತ 650 ಕ್ಕೂ ಹೆಚ್ಚು ರೀಜನಲ್ ಆಫೀಸ್‌ಗಳನ್ನು ಹೊಂದಿದ್ದು, ಇಲ್ಲಿ ಅಭ್ಯರ್ಥಿಗಳನ್ನು ನಿಯೋಜನೆ ಮಾಡಲಾಗುತ್ತದೆ.
ಇತರೆ ವಿಷಯಗಳು
ಅನ್ನದಾತರಿಗೆ ಗುಡ್ ನ್ಯೂಸ್! ರಾಜ್ಯ ಸರ್ಕಾರದಿಂದ ರೈತ ಕುಟುಂಬಗಳಿಗೆ ತಲಾ ₹3,000 ಪರಿಹಾರ
ಪಿಎಂ ಕಿಸಾನ್ 17ನೇ ಕಂತಿನ ಹಣ ನಾಳೆ 12:30 ಕ್ಕೆ ಖಾತೆಗೆ ಜಮಾ!