rtgh
Headlines

ರೈತರಿಗೆ ಗುಡ್ ನ್ಯೂಸ್: ಬೆಳೆ ನಷ್ಟ ಪರಿಹಾರ ಹಣ ಖಾತೆಗೆ ಜಮಾ!!

Bara Parihara Karnataka
Share

ದಾವಣಗೆರೆ: ಮುಂಗಾರು ಹಂಗಾಮಿನಲ್ಲಿ ಕಳೆದ ವರ್ಷ 2023 ರಲ್ಲಿ ತೀವ್ರ ಮಳೆ ಕೊರತೆಯಿಂದಾಗಿ ಬೆಳೆ ನಷ್ಟವಾದ 82928 ರೈತರಿಗೆ ಮೊದಲನೇ ಕಂತಿನಲ್ಲಿ ಗರಿಷ್ಠ 2000 ರೂ. ವರೆಗೆ ಹಾಗೂ ಈಗ, ಬಾಕಿ ಇರುವ ರೈತರಿಗೆ ಒಟ್ಟು 60,23,46,380 ರೂ. ಗಳನ್ನು ನೇರವಾಗಿ ರೈತರ ಖಾತೆಗೆ ನೇರವಾಗಿ ಪಾವತಿಸಲಾಗಿದೆ.

Bara Parihara Karnataka

2023 ರ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 1,50,621.7 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯ ಹಾನಿ ಸಂಭವಿಸಿದೆ ಎಂದು ಸರ್ಕಾರಕ್ಕೆ ವರದಿಯನ್ನು ನೀಡಲಾಗಿತ್ತು. SDRF ಹಾಗೂ NDRF  ಮಾರ್ಗಸೂಚಿನ್ವಯ ಅರ್ಹರ ರೈತರಿಗೆ ಗರಿಷ್ಠ 2000 ರೂ. ವರೆಗೆ 82,928 ರೈತರಿಗೆ 15,88,15,380 ರೂ.ಗಳನ್ನು ಮೊದಲನೇ ಕಂತಾಗಿ ಪಾವತಿಸಲಾಗಿತ್ತು.

ಮೇ.2 ರ ಸರ್ಕಾರದ ಆದೇಶದಂತೆ ಮಾರ್ಗಸೂಚಿನ್ವಯ ಪರಿಹಾರವನ್ನು ನೀಡಲು ಬಾಕಿ ಇರುವ ಮೊತ್ತವನ್ನು ಈಗ ಜಿಲ್ಲೆಯ 69,575 ರೈತರಿಗೆ 44,35,31,000 ರೂ. ಗಳನ್ನು ನೇರವಾಗಿ ರೈತರ ಖಾತೆಗೆ ಪಾವತಿ ಮಾಡಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೆ ರೂ.60,23,46,381 ಗಳನ್ನು ಬೆಳೆ ಹಾನಿಯ ಪರಿಹಾರವಾಗಿ ನೀಡಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ ಎಂ.ವಿ. ಹೇಲಿದ್ದಾರೆ.

ಇದನ್ನೂ ಸಹ ಓದಿ: ರಾಜ್ಯದ ರೈತರ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಚೆಕ್‌ ಮಾಡಿ

ಯಾವುದೇ ರೈತರಿಗೆ ಬೆಳೆ ಪರಿಹಾರದ ಕುರಿತಂತೆ ಮಾಹಿತಿಯನ್ನು ಮತ್ತು ಮಾರ್ಗಸೂಚಿ ಬಗ್ಗೆ ವಿವರವನ್ನು ನೀಡಲು ಎಲ್ಲಾ ತಾಲ್ಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಮಾಹಿತಿಗಾಗಿ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಕರೆಯನ್ನು ಮಾಡಬಹುದಾಗಿದೆ.

ಸಹಾಯವಾಣಿ ಸಂಖ್ಯೆಗಳು: 

ಚನ್ನಗಿರಿ ತಾ. ಮೊ.ಸಂ:7892481962, ದಾವಣಗೆರೆ, ಮೊ.ಸಂ:9731254380, ಹೊನ್ನಾಳಿ ತಾ. ಮೊ.ಸಂ:9686136015, ಜಗಳೂರು ತಾ. ಮೊ.ಸಂ:8431977870, ನ್ಯಾಮತಿ ತಾ. ಮೊ.ಸಂ:8073951245, ಹರಿಹರ ತಾ.ಮೊ.ಸಂ:8618868370 ಸಂಪರ್ಕಿಸಬಹುದು.

ಗ್ಯಾಸ್ ಸಿಲಿಂಡರ್ ಮಾಲೀಕರಿಗೆ ಬಿಗ್ ರಿಲೀಫ್..! ಸಿಲಿಂಡರ್ ಬೆಲೆ ಕಡಿಮೆ

ವಿವಾಹಿತರಿಗೆ ಗುಡ್‌ ನ್ಯೂಸ್!‌ ಮದುವೆ ಪ್ರಮಾಣಪತ್ರ ಮನೆಯಲ್ಲಿಯೇ ಪಡೆಯಿರಿ


Share

Leave a Reply

Your email address will not be published. Required fields are marked *