rtgh
Headlines

ಹೊಸ ಆರ್ಥಿಕ ವರ್ಷ ಆರಂಭ: ಇಂದಿನಿಂದ ಈ ಎಲ್ಲಾ ನಿಯಮಗಳಲ್ಲಿ ದೊಡ್ಡ ಬದಲಾವಣೆ

New Financial year Rules Change
Share

ಹಲೋ ಸ್ನೇಹಿತರೇ, ಇಂದಿನಿಂದ ಎಂದರೆ 01 ಏಪ್ರಿಲ್ 2024ರಿಂದ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

New Financial year Rules Change

ಮೊದಲ ದಿನದ ಗ್ಯಾಸ್ ದರದಲ್ಲಿ ದೊಡ್ಡ ಪರಿಹಾರ ಕಂಡುಬಂದಿದೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್‌ಗಳ ದರವನ್ನು ಕಡಿಮೆ ಮಾಡಲಾಗಿದ್ದು, ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಷ್ಟೇ ಅಲ್ಲದೆ, ಇನ್ನೂ ಕೆಲವು ಪ್ರಮುಖ ನಿಯಮಗಳು ಕೂಡ ಬದಲಾಣೆಯಾಗಲಿದೆ. 

01 ಏಪ್ರಿಲ್ 2024ರಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದ್ದು, ವಿತ್ತೀಯ ವರ್ಷ ಆರಂಭದ ಮೊದಲ ದಿನವೇ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ದೊರೆತಿದೆ. ಗ್ಯಾಸ್ ಸಿಲಿಂಡರ್ ದರ ಕಡಿಮೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಇಂದಿನಿಂದ ಇನ್ನೂ ಕೆಲವು ಪ್ರಮುಖ ನಿಮಯಗಳು ಬದಲಾವಣೆಯಾಗಲಿದೆ ನಿಮ್ಮ ಜೇಬಿನ ಮೇಲೆ ಇದರ ನೇರ ಪ್ರಭಾವ ಬೀಳಲಿದೆ.  

ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ ಪ್ರಮುಖ ನಗರಗಳಾದ ದೆಹಲಿಯಲ್ಲಿ 1764.50 ರೂ., ಕೋಲ್ಕತ್ತಾದಲ್ಲಿ 1,879 ರೂ. ,  ಮುಂಬೈನಲ್ಲಿ 1717.50 ರೂ. & ಚೆನ್ನೈನಲ್ಲಿ 1930.00ರೂ. ಗಳಿಗೆ ಲಭ್ಯವಾಗಲಿದೆ. ನಿಯಮಗಳ ಪ್ರಕಾರ, 01 ಏಪ್ರಿಲ್ 2024ರಿಂದ ವಿಮಾ ನಿಯಂತ್ರಕ IRDAI ವಿಮಾ ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ವಿತರಿಸಲು ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ, ಏಪ್ರಿಲ್ 01ರಿಂದ ಪಾಲಿಸಿದಾರರ ಪಾಲಿಸಿ ಸರೆಂಡರ್ ಮೇಲಿನ ಸರೆಂಡರ್ ಮೌಲ್ಯವು ಪಾಲಿಸಿಗಳನ್ನು ಸರೆಂಡರ್ ಮಾಡಿದ ವರ್ಷಗಳ ಸಂಖ್ಯೆಯನ್ನು ಅವಲಂಬಿಸಿದೆ. 

01 ಏಪ್ರಿಲ್ 2024ರಿಂದ ಕಾರ್ ಖರೀದಿ ದುಬಾರಿಯಾಗಲಿದೆ. ಅದರಲ್ಲೂ, ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ & ಉತ್ಪಾದನೆ (FAME-II) ಅಡಿಯಲ್ಲಿ ಲಭ್ಯವಿರುವ ಸಹಾಯಧನವನ್ನು ಸರ್ಕಾರ ನಿಲ್ಲಿಸಿರುವ ಕಾರಣ ಎಲೆಕ್ಟ್ರಿಕ್ ವಾಹನಗಳ ಖರೀದಿ ಇಂದಿನಿಂದ ದುಬಾರಿಯಾಗಲಿದೆ. 

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗೆ (NPS) ಹೆಚ್ಚಿನ ಭದ್ರತೆಯನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಏಪ್ರಿಲ್ 1, 2024 ರಿಂದ PFRDA ವರ್ಧಿತ ವ್ಯವಸ್ಥೆಯು Password ಆಧಾರಿತ CRA ಸಿಸ್ಟಮ್ ಪ್ರವೇಶಕ್ಕಾಗಿ 2 ಅಂಶಗಳ ಆಧಾರ್ ಆಧಾರಿತ ದೃಢೀಕರಣವನ್ನು ಜಾರಿಗೆ ತರಲಿದೆ.  ಆಧಾರಿತ ಲಾಗಿನ್ ದೃಢೀಕರಣವನ್ನು ಪ್ರಸ್ತುತ ಬಳಕೆದಾರ ID & Password ಆಧಾರಿತ ಲಾಗಿನ್ ಪ್ರಕ್ರಿಯೆಯೊಂದಿಗೆ ಸಂಯೋಜನೆ ಮಾಡಲಾಗಿದೆ. 

01 ಏಪ್ರಿಲ್ 2024ರಿಂದ  ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಇಂದಿನಿಂದ ನೀವು ಬ್ಯಾಂಕ್‌ನೊಂದಿಗೆ ನಿಮ್ಮ ಕಾರಿನ ಫಾಸ್ಟ್‌ಟ್ಯಾಗ್‌ನ Kyc ನವೀಕರಿಸುವುದು ಕಡ್ಡಾಯಗೊಳಿಸಲಾಗಿದೆ. 

ಇಂದಿನಿಂದ  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (EPFO) ದೊಡ್ಡ ಬದಲಾವಣೆ ಕಂಡು ಬರುತ್ತದೆ. ಹೊಸ ಆರ್ಥಿಕ ವರ್ಷದಲ್ಲಿ, ಉದ್ಯೋಗಿಯು ಕೆಲಸ ಬದಲಾಯಿಸಿದರೆ ಅವರ PF ಖಾತೆ ಸ್ವಯಂಚಾಲಿತವಾಗಿ ಹೊಸ ಉದ್ಯೋಗದಾತರಿಗೆ ವರ್ಗಾಯಿಸಲಾಗುವುದು. ಆದಾಗ್ಯೂ, ಚಂದಾದಾರರ ಕೋರಿಕೆಯ ಮೇರೆಗೆ ಮಾತ್ರವೇ ಈ ವರ್ಗಾವಣೆಯಾಗಲಿದೆ 

ಇತರೆ ವಿಷಯಗಳು

968 ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಅರ್ಜಿ ಹಾಕಿದ್ರೆ ತಿಂಗಳಿ ರೂ.1,12,400 ವೇತನ

ಅನ್ನದಾತರಿಗೆ ಕೇಂದ್ರದಿಂದ ಬಂಪರ್ ಸುದ್ದಿ.! ಈ ಯೋಜನೆಯಿಂದ ಸಿಗಲಿದೆ 90% ವರೆಗೂ ಸಬ್ಸಿಡಿ


Share

Leave a Reply

Your email address will not be published. Required fields are marked *