ಹಲೋ ಸ್ನೇಹಿತರೇ, ಸ್ಟಾಫ್ ಸೆಲೆಕ್ಷನ್ ಕಮಿಷನ್ ಸಿವಿಲ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್ ವಿಭಾಗಗಳಲ್ಲಿ ಕಿರಿಯ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.
ಕೇಂದ್ರ ಸರ್ಕಾರದ ವಿವಿಧ ಸಂಸ್ಥೆಗಳು, ಸಚಿವಾಲಯ, ಇಲಾಖೆಗಳಲ್ಲಿ ಜೂನಿಯರ್ ಇಂಜಿನಿಯರ್ ( ಸಿವಿಲ್, ಮೆಕ್ಯಾನಿಕಲ್ & ಇಲೆಕ್ಟ್ರಿಕಲ್) ಹುದ್ದೆಗಳ ಭರ್ತಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಇವು ಸರ್ಕಾರಿ ಹುದ್ದೆಗಳಾಗಿದ್ದು, ಆಸಕ್ತರು ಹುದ್ದೆಗಳಿಗೆ ಅರ್ಹತೆ, ಅರ್ಜಿಗೆ ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಯನ್ನು ತಿಳಿದು ಅರ್ಜಿಯನ್ನು ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ : ಸಿಬ್ಬಂದಿ ನೇಮಕಾತಿ ಆಯೋಗ
ಹುದ್ದೆ ಹೆಸರು : ಜೂನಿಯರ್ ಇಂಜಿನಿಯರ್
ಹುದ್ದೆಗಳ ಸಂಖ್ಯೆ : 968
ವಿದ್ಯಾರ್ಹತೆ : ಡಿಪ್ಲೊಮ ಅಥವಾ ಇಂಜಿನಿಯರಿಂಗ್ ಪದವಿ
Contents
ಇಲಾಖಾವಾರು ಹುದ್ದೆಗಳ ವಿವರ
ಕಿರಿಯ ಇಂಜಿನಿಯರ್ – ಗಡಿ ರಸ್ತೆ ಸಂಸ್ಥೆ : 475
ಕಿರಿಯ ಇಂಜಿನಿಯರ್ – ಬ್ರಹ್ಮಪುತ್ರ ಬೋರ್ಡ್, ಜಲಶಕ್ತಿ ಸಚಿವಾಲಯ : 02
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಕಮಿಷನ್ : 120
ಕಿರಿಯ ಇಂಜಿನಿಯರ್ – ಸೆಂಟ್ರಲ್ public work ಡಿಪಾರ್ಟ್‌ಮೆಂಟ್ : 338
ಕಿರಿಯ ಇಂಜಿನಿಯರ್ – ಸೆಂಟ್ರಲ್ ವಾಟರ್ ಪವರ್ ರಿಸರ್ಚ್ ಸ್ಟೇಷನ್ : 05
ಕಿರಿಯ ಇಂಜಿನಿಯರ್ – ನೌಕಾಪಡೆ : 06
ಕಿರಿಯ ಇಂಜಿನಿಯರ್ – ಜಲ ಶಕ್ತಿ ಸಚಿವಾಲಯ : 04
ಕಿರಿಯ ಇಂಜಿನಿಯರ್ – NTRO : 06
ಕಿರಿಯ ಇಂಜಿನಿಯರ್ – ಮಿಲಿಟರಿ ಇಂಜಿನಿಯರ್ ಸರ್ವೀಸ್ : ಬಿಡುಗಡೆ ಮಾಡಬೇಕಿದೆ.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆ ಆರಂಭ ದಿನಾಂಕ : 28-03-2024
ಆನ್‌ಲೈನ್ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 18-04-2024 ರ ರಾತ್ರಿ 11 ಗಂಟೆವರೆಗೆ.
ಆನ್‌ಲೈನ್ ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಕೊನೆಯ ದಿನಾಂಕ : 19-04-2024
Offline ಚಲನ್ ಜೆನೆರೇಟ್‌ಗೆ ಕೊನೆ ದಿನಾಂಕ : 02-09-2022
ಅರ್ಜಿ ತಿದ್ದುಪಡಿ ಮಾಡಲು ವಿಂಡೊ ಓಪನ್ ಆಗಲಿರುವ ದಿನಾಂಕ: 22-04-2024 To 23-04-2024
ಪೇಪರ್- 1 ಕಂಪ್ಯೂಟರ್ ಆಧಾರಿತ ಪರೀಕ್ಷೆಯ ದಿನಾಂಕ : 04-06-2024 To 06-06-2024
ಪೇಪರ್-2 ಪರೀಕ್ಷೆಯ ದಿನಾಂಕ : ಪ್ರಕಟಿಸಬೇಕಾಗಿದೆ
ಅರ್ಜಿ ಶುಲ್ಕ ರೂ.100 . ಮಹಿಳಾ ಅಭ್ಯರ್ಥಿಗಳು, SE, ST, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ವರ್ಗವಾರು ಗರಿಷ್ಠ ವಯಸ್ಸಿನ ಮೀಸಲಾತಿ ನೀಡಲಾಗುವುದು.
ವಯೋಮಿತಿ ಅರ್ಹತೆಗಳು
ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 30 ವರ್ಷ ನಿಗಧಿ ಮಾಡಲಾಗಿದೆ.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, SE / ST ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.
ವಿದ್ಯಾರ್ಹತೆ
- ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಇಂಜಿನಿಯರಿಂಗ ಪಾಸ್.
- 3 ವರ್ಷ ಡಿಪ್ಲೊಮ ಪಾಸ್. ಜತೆಗೆ 2 ವರ್ಷ ಕಾರ್ಯಾನುಭವ.
ಅರ್ಜಿ ಸಲ್ಲಿಕೆ ಹೇಗೆ?
ಸಿಬ್ಬಂದಿ ನೇಮಕಾತಿ ಆಯೋಗದ ಅಧಿಕೃತ ವೆಬ್‌ಸೈಟ್ https://ssc.nic.in ಗೆ ಭೇಟಿ ಮಾಡಿ.
ಮೊದಲಿಗೆ ರಿಜಿಸ್ಟ್ರೇಷನ್ ಪಡೆದು, ನಂತರ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.
ಗಮನಿಸಬೇಕಾದ ಪ್ರಮುಖ ಅಂಶಗಳು
- ಹೊಸದಾಗಿ JE ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಬೇಸಿಕ್ Pay ರೂ.35,400 ಮಾಸಿಕ ನೀಡಲಾಗುವುದು.
- ನಾರ್ಥ್‌ಈಸ್ಟ್ ಇಂಡಿಯಾ & ಜಮ್ಮು ಮತ್ತು ಕಾಶ್ಮೀರ ದಂತಹ ಪ್ರದೇಶಗಳನ್ನು ಹೊರತುಪಡಿಸಿ ಬೇರೆ ಕಡೆಗೆ ನಿಯೋಜನೆ ಹೊಂದಿದ ಅಭ್ಯರ್ಥಿಗಳಿಗೆ SDA, SCA ಭತ್ಯೆಯನ್ನು ನೀಡಲಾಗುವುದಿಲ್ಲ.
- ದೊಡ್ಡ ನಗರಗಳಿಗೆ ಹುದ್ದೆ ನಿಯೋಜನೆಗೊಂಡವರಿಗೆ ಮಾತ್ರ ಹೆಚ್ಚು travel ಅಲೋವೆನ್ಸ್ ನೀಡಲಾಗುವುದು.
- ಹೌಸ್ ರೆಂಟ್ ಅಲೋವೆನ್ಸ್ ಅನ್ನು ಶೇಕಡ.8, 16, 24 ರ ಮಾದರಿಯಲ್ಲಿ ನಗರದ ಆಧಾರಗಳ ಮೇಲೆ ನೀಡಲಾಗುತ್ತದೆ.
SSC JE ಪೋಸ್ಟ್ ಅಭ್ಯರ್ಥಿಗೆ PAY ಲೆವೆಲ್-7 ರ ಪ್ರಕಾರ ನಗರಗಳ ಆಧಾರಿತವಾಗಿ ಒಟ್ಟು ವೇತನ ಈ ಕೆಳಗಿನಂತಿರುತ್ತದೆ.
X-ಸಿಟೀಸ್ – Rs.57,408.
Y-ಸಿಟೀಸ್-Rs.52,776.
Z-ಸಿಟೀಸ್ – Rs.49.944.
ಪೇಸ್ಕೇಲ್ (PAY ಲೆವೆಲ್-7 ರ ಪ್ರಕಾರ ) : Rs.35,400-1,12,400.
ವೇತನ ಶ್ರೇಣಿ
INR 35400 to 112396 / per month
ಇತರೆ ವಿಷಯಗಳು
ಪ್ರಥಮ ಪಿಯುಸಿ ರಿಸಲ್ಟ್! ಚೆಕ್ ಮಾಡೋಕೆ ಇಲ್ಲಿದೆ ಡೈರೆಕ್ಟ್ ಲಿಂಕ್
ಈ ಸಣ್ಣ ಕೆಲಸ ಮಾಡಿದ್ರೆ ಗೃಹಲಕ್ಷ್ಮಿ ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆ!