ಹಲೋ ಸ್ನೇಹಿತರೇ, ಕೇಂದ್ರೀಯ ವಿದ್ಯಾಲಯ ಸಂಘಟನ್ (KVS) 2024-25ನೇ ಸಾಲಿನ ಪ್ರವೇಶಾತಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. 1ನೇ ತರಗತಿಗೆ ಏಪ್ರಿಲ್ 1 ರಿಂದ ಪ್ರವೇಶ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸಲು ವೆಬ್ ವಿಳಾಸ, ಮತ್ತು ಇತರೆ ವಿಷಯಗಳನ್ನು ಲೇಖನದಲ್ಲಿ ತಿಳಿಯಿರಿ.
ಕೇಂದ್ರೀಯ ವಿದ್ಯಾಲಯ ಸಂಘಟನ್ 1ನೇ ತರಗತಿ ಇಂದ 11ನೇ ತರಗತಿ ಪ್ರವೇಶಾತಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 1ನೇ ತರಗತಿಗೆ ಏಪ್ರಿಲ್ 1 ರಿಂದ 15 ಸಂಜೆ 05 ಗಂಟೆವರೆಗೆ ಅಡ್ಮಿಷನ್ ರಿಜಿಸ್ಟ್ರೇಷನ್ ಪಡೆದುಕೊಳ್ಳಬಹುದು. ನಂತರದಲ್ಲಿ 10ನೇ ತರಗತಿ ಫಲಿತಾಂಶ ಬಿಡುಗಡೆಯಾದ 10 ದಿನಗಳವರೆಗೆ KVS ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಅವಕಾಶ ನೀಡಲಾಗುವುದು.
KVSನಲ್ಲಿ 1ನೇ ತರಗತಿಗೆ ಅಡ್ಮಿಷನ್ ಪಡೆಯಲು ಮಾರ್ಚ್ 31, 2024 ಕ್ಕೆ ಸರಿಯಾಗಿ ಮಕ್ಕಳಿಗೆ ಕನಿಷ್ಠ 6 ವರ್ಷ ಪೂರೈಸಿರಬೇಕು. ಅಲ್ಲದೇ ಕ್ಲಾಸ್ 2 ಮತ್ತು ಇತರೆ ತರಗತಿಗಳಿಗೂ ಸಹ ಏಪ್ರಿಲ್ 1 ರ ನಂತರವೇ Offline ರಿಜಿಸ್ಟ್ರೇಷನ್ ನಡೆಯಲಿದೆ.
ದೇಶದಾದ್ಯಂತದ 1254 ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಪ್ರವೇಶ ಪಡೆಯಲು ಹೊಸ ಅಡ್ಮಿಷನ್ ಪೋರ್ಟಲ್ ಬಿಡುಗಡೆ ಮಾಡಲಾಗಿದೆ.
ಬಾಲವಾಟಿಕ ಲೆವೆಲ್ 1, 2, 3 ಅಡ್ಮಿಷನ್ ಪ್ರೋಸೆಸ್ ಸಹ ಏಪ್ರಿಲ್ 1 ರ ನಂತರವೇ ಪ್ರಾರಂಭಿಸಲಾಗುತ್ತದೆ. ಈ ತರಗತಿಗಳಿಗೆ ಸಹ ವಯಸ್ಸಿನ ಅರ್ಹತೆ ತಿಳಿದಿರುವುದು ಮುಖ್ಯವಾಗಿದೆ. ಮಕ್ಕಳಿಗೆ 3-6 ವರ್ಷಗಳ ಬಾಲವಾಟಿಕ ಪ್ರವೇಶಾತಿ ನಿಗದಿ ಮಾಡಲಾಗಿದೆ.
KVS ರಿಜಿಸ್ಟ್ರೇಷನ್‌ಗೆ ಮೀಸಲಾತಿಯು ಇದ್ದು SC ವರ್ಗದ ಮಕ್ಕಳಿಗೆ ಶೇಕಡ.15, ST ವರ್ಗದ ಮಕ್ಕಳಿಗೆ ಶೇಕಡ.7.5, OBC ವರ್ಗದ ಮಕ್ಕಳಿಗೆ ಶೇಕಡ.27 ರಷ್ಟು ಮೀಸಲಾತಿ ನಿಗದಿ ಮಾಡಲಾಗಿದೆ.
ಮೊದಲ ಪಟ್ಟಿಯಲ್ಲಿ ಅರ್ಹತೆ ಪಡೆದವರ ಮತ್ತು ಕಾಯ್ದಿರಿಸಲಾದ ಪಟ್ಟಿಯನ್ನು ಏಪ್ರಿಲ್ 19 ರಂದು ಬಿಡುಗಡೆ ಮಾಡಲಾಗುವುದು. ಇತರೆ ಲಿಸ್ಟ್‌ನ್ನು ಏಪ್ರಿಲ್ 29, ಮೇ 8 ರಂದು ಬಿಡುಗಡೆ ಮಾಡಲಾಗುವುದು. ಕ್ಲಾಸ್ 1 ಅಡ್ಮಿಷನ್ ಸಂಬಂಧ 2ನೇ ನೋಟಿಫಿಕೇಶನ್ ಮೇ 7 ರಂದು ಬಿಡುಗಡೆ ಮಾಡಲಾಗುವುದು. ಮೇ 8 ರಿಂದ 15 ರವರೆಗೂ ಅರ್ಜಿಗೆ ಅವಕಾಶ ನೀಡಲಾಗುವುದು. ಕ್ಲಾಸ್ 2 ಅಡ್ಮಿಷನ್ ಏಪ್ರಿಲ್ 1 ರಿಂದ 10 ರವರೆಗೂ ಅವಕಾಶ ನೀಡಲಾಗುತ್ತದೆ. 11ನೇ ತರಗತಿಗೆ ಹೊರತುಪಡಿಸಿ, ಇತರೆ ತರಗತಿಗಳಿಗೆ ಜೂನ್ 29 ರವರೆಗೂ ಪ್ರವೇಶಾತಿ ಮುಂದುವರೆಯುತ್ತದೆ.
1 ನೇ ತರಗತಿಗೆ ಅಡ್ಮಿಷನ್ ಪಡೆಯಲು ವೆಬ್ ವಿಳಾಸ: kvsangathan.nic, kvsonlineadmission.kvs.gov.in.
ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಜನ್ಮ ದಿನಾಂಕದ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಮತ್ತು ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ, ವಿದ್ಯಾರ್ಥಿಯ ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳು, ಮಕ್ಕಳ ಪೋಷಕರ ಸರ್ವೀಸ್ ಸರ್ಟಿಫಿಕೇಟ್‌ಗಳು. ಬೇಕಾಗುತ್ತದೆ.
ಇತರೆ ವಿಷಯಗಳು
ಉದ್ಯೋಗ ಖಾತ್ರಿ ಕಾರ್ಮಿಕರ ವೇತನ 10% ಹೆಚ್ಚಳ! ಏಪ್ರಿಲ್ 1 ರಿಂದ ಜಾರಿಗೆ
ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ! SSLC ಪಾಸ್ ಆದ್ರೆ ಸಾಕು 52 ಸಾವಿರ ಸಂಬಳ!