ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರಿ ಉದ್ಯೋಗ ಪಡೆಯುವ ಆಸಕ್ತಿ ಇದಿಯೇ, ವಿಶೇಷವಾಗಿ ನೌಕಾಪಡೆಯಲ್ಲಿ ಜಾಬ್ ಪಡೆದುಕೊಳ್ಳಬೇಕೇ? ಹಾಗಿದ್ರೆ ಇಲ್ಲಿದೆ ಸುವರ್ಣಾವಕಾಶ. ನೌಕಾಪಡೆಯ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಭಾರತೀಯ ನೌಕಾಪಡೆಯು ತನ್ನ ಮಾಹಿತಿ ತಂತ್ರಜ್ಞಾನ ವಿಭಾಗದ SSC ಎಕ್ಸಿಕ್ಯೂಟಿವ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.
ನೇಮಕಾತಿ ಪ್ರಾಧಿಕಾರ ಹೆಸರು: ಭಾರತೀಯ ನೌಕಾಪಡೆ
ಹುದ್ದೆಯ ಹೆಸರು : ಎಸ್‌ಎಸ್‌ಸಿ ಎಕ್ಸಿಕ್ಯೂಟಿವ್ (ಮಾಹಿತಿ ತಂತ್ರಜ್ಞಾನ)
ಒಟ್ಟು ಹುದ್ದೆಗಳ ಸಂಖ್ಯೆ : 15
ವಿದ್ಯಾರ್ಹತೆ : ಬಿಇ / ಎಂ.ಎಸ್ಸಿ / ಬಿ.ಟೆಕ್ / ಬಿಸಿಎ / ಎಂ.ಟೆಕ್ / ಎಂಸಿಎ ಅನ್ನು ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಪಾಸ್ ಆಗಿರಬೇಕು.
ವಯಸ್ಸಿನ ಅರ್ಹತೆಗಳು : ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುತ್ತಿರುವವರು ದಿನಾಂಕ 02-07-1999 & 01-01-2005 ರ ನಡುವೆ ಜನಿಸಿರಬೇಕಾಗುತ್ತದೆ.
Apply Online
ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ, ಮೊದಲು ರಿಜಿಸ್ಟ್ರೇಷನ್ ಪಡೆದುಕೊಳ್ಳಿ.
ವೇತನ ಶ್ರೇಣಿ, ಭತ್ಯೆಗಳು, ಸೌಲಭ್ಯಗಳ ಕುರಿತು ತಿಳಿಯಲು ಕ್ಲಿಕ್ ಮಾಡಿ
Contents
ಪ್ರಮುಖ ದಿನಾಂಕಗಳು
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ : 23-02-2024
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12-03-2024
ಆಯ್ಕೆ ಪ್ರಕ್ರಿಯೆಗಳು:
ಸಹಿಷ್ಣುತೆ ಪರೀಕ್ಷೆ , ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ, ಮೆಡಿಕಲ್ ಟೆಸ್ಟ್ ನಡೆಸುವ ಮೂಲಕ ಆಯ್ಕೆಯನ್ನು ಮಾಡಲಾಗುವುದು. ಶಾರ್ಟ್ ಲಿಸ್ಟ್ ಆದವರಿಗೆ ತರಬೇತಿಯ ಅವಧಿ, ಪ್ರೊಬೇಷನ್ ಅವಧಿ, ನಂತರ ಪರ್ಮನೆಂಟ್ ಕಮಿಷನ್‌ಗೆ ಆಯ್ಕೆಯನ್ನು ಮಾಡುವ ಅವಕಾಶ ಇರಲಿದೆ.
ಅಪ್ಲಿಕೇಶನ್ ಸಲ್ಲಿಸುವುದು ಹೇಗೆ?
– ಭಾರತೀಯ ನೌಕಾಪಡೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. joinindiannavy.gov.in
– ನಂತರ ಆದ ಪೇಜ್‌ನಲ್ಲಿ ‘Executive Post’ Tab ಆಯ್ಕೆ ಮಾಡಿ.
– ಹೊಸ ವೆಬ್‌ಪೇಜ್ ಓಪನ್ ಆದ ಬಳಿಕ. ‘New User’ ಎಂಬಲ್ಲಿ ಕ್ಲಿಕ್ ಮಾಡಿ ರಿಜಿಸ್ಟ್ರರ್ ಪಡೆದುಕೊಳ್ಳಿ.
– ನಂತರ ಯೂಸರ್ ನೇಮ್, ಪಾಸ್‌ವರ್ಡ್ ನೀಡಿ ಲಾಗಿನ್ ಪಡೆಯುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆ ಮುಗಿಸಿಕೊಳ್ಳಿ.
– ಅಗತ್ಯ ದಾಖಲೆಯನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಪೂರ್ಣಗೊಳಿಸಿ.
– ಮುಂದಿನ ರೆಫರೆನ್ಸ್‌ಗಾಗಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಬಹುದಾಗಿದೆ.
ಇತರೆ ಅರ್ಹತೆಗಳು
– ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮದುವೆಯಾಗಿರಬಾರದು.
– ಇಂಜಿನಿಯರಿಂಗ್ ಡಿಗ್ರಿ ಯಲ್ಲಿ ಶೇಕಡ.60 ಅಂಕಗಳೊಂದಿಗೆ ಪಾಸ್ ಆಗಿ ಹಾಗೂ ಅಂತಿಮ BE ಪದವಿ ಓದುತ್ತಿರುವ ಅಭ್ಯರ್ಥಿಗಳು ಸಹ ಇದಕ್ಕೆ ಅರ್ಜಿ ಸಲ್ಲಿಸಬಹುದು.
– ಎಂಎಸ್ಸಿ / ಎಂ.ಟೆಕ್ / ಎಂಸಿಎ ಪದವಿ ಪಡೆದವರು ಹುದ್ದೆಗಳಿಗೆ ಅನುಸಾರವಾಗಿ ಅರ್ಜಿಯನ್ನು ಹಾಕಬಹುದಾಗಿದೆ.
ಇತರೆ ವಿಷಯಗಳು
ರಾಷ್ಟ್ರೀಯ ಜಾನುವಾರು ಮಿಷನ್: ಕೋಳಿ,ಕುರಿ ಹಂದಿ ಘಟಕ ಸ್ಥಾಪನೆಗೆ ಶೇ 50% ಸಹಾಯಧನ.! ಅರ್ಹರು ಅಪ್ಲೇ ಮಾಡಿ
ಮನೆಯ ಮೇಲ್ಛಾವಣಿಗೆ ಸೌರ ಫಲಕ.! ಈ ಯೋಜನೆಗೆ ಈಗ ಪೋಸ್ಟ್ ಆಫೀಸ್‌ನಲ್ಲೂ ನೋಂದಣಿ ಲಭ್ಯ