rtgh
Headlines

ಮನೆಯ ಮೇಲ್ಛಾವಣಿಗೆ ಸೌರ ಫಲಕ.! ಈ ಯೋಜನೆಗೆ ಈಗ ಪೋಸ್ಟ್ ಆಫೀಸ್‌ನಲ್ಲೂ ನೋಂದಣಿ ಲಭ್ಯ

surya ghar scheme registration
Share

ಹಲೋ ಸ್ನೇಹಿತರೇ, ಮೋದಿ ಸರ್ಕಾರದ ಸೂರ್ಯ ಘರ್‌ ಯೋಜನೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಈಗ ಪೋಸ್ಟ್‌ ಆಫೀಸ್‌ನಲ್ಲಿಯೂ ಕೂಡ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನವನ್ನು ತಿಳಿಯಿರಿ.

surya ghar scheme registration

ಪಿಎಂ ಸೂರ್ಯ ಘರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರದ ಪ್ರತಿಷ್ಟಾಪನೆಯ ದಿನದಂದು ಸೂರ್ಯನ ಪ್ರಕಾಶಮಾನ ಬೆಳಕು ಎಲ್ಲೆಡೆ ಹರಡಬೇಕು ಎಂಬ ಕನಸಿನಿಂದ ಪ್ರತಿ ಮನೆಗೂ ಸೌರ ಫಲಕ ಅಳವಡಿಸುವ ಬಗ್ಗೆ ಘೋಷಣೆ ಮಾಡಲಾಗಿತ್ತು. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್‌ನಲ್ಲಿ ಈ ಯೋಜನೆಗೆ ಅನುಮೋದನೆ ದೊರಕಿತು. ಈ ಯೋಜನೆಗೆ ಪೋಸ್ಟ್ ಆಫೀಸ್‌ನಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

1 ಕೋಟಿ ಮನೆಗಳಿಗೆ 300 ಯೂನಿಟ್ ವರೆಗೆ ಉಚಿತ ವಿದ್ಯುತ್

ಸೌರ ಶಕ್ತಿಯ ಉಪಯೋಗ ಪಡೆಯಬೇಕು ಎಂಬ ನಿಟ್ಟಿನಲ್ಲಿ ಪ್ರಾರಂಭವಾದ ಈ ಯೋಜನೆಯ ತಿಂಗಳಿಗೆ 300 ಯೂನಿಟ್‌ವರೆಗೂ ಉಚಿತ ವಿದ್ಯುತ್‌ನ್ನು 1 ಕೋಟಿ ಮನೆಗಳಿಗೆ ಬೆಳಕು ನೀಡುವುದು ಸರ್ಕಾರದ ಉದ್ದೇಶಿಸಿದೆ. ಯೋಜನೆಯು ಘೋಷಣೆ ಆದ ಸ್ವಲ್ಪ ದಿನಗಳ ಬಳಿಕ ಪೋಸ್ಟ್ office ನಲ್ಲಿ ಕೆಲಸ ಮಾಡುವ ಅಂಚೆ ನೌಕರರು ಯೋಜನೆಯಡಿ ನೋಂದಾಯಿಸಲು ಬಯಸುವ ಕುಟುಂಬವನ್ನು ನೋಂದಾಯಿಸಲು ಪ್ರಾರಂಭಿಸಿದ್ದಾರೆ. ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಲಾಗಿದೆ.

5 ಲಕ್ಷ ಮನೆಗಳಿಗೆ ಸೋಲಾರ್ ಮೇಲ್ಛಾವಣಿ ಅಳವಡಿಸುವ ಗುರಿ:-

ಕರ್ನಾಟಕ ಪೋಸ್ಟಲ್ ಸರ್ಕಲ್‌ನ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್ ಆಗಿರುವ ಎಸ್ ರಾಜೇಂದ್ರ ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಮ್ಮ ನೆಟ್‌ವರ್ಕ್‌ನಲ್ಲಿ ಒಂದೆರಡು ದಿನಗಳ ಹಿಂದೆಯೇ ನೋಂದಣಿಯನ್ನು ಪ್ರಾರಂಭಿಸಲಾಗಿದೆ ಎಂದರು. ಇಲಾಖೆಯು 5 ಲಕ್ಷ ಮನೆಗಳಲ್ಲಿ ಸೋಲಾರ್ ಮೇಲ್ಛಾವಣಿ ಅಳವಡಿಸುವ ಗುರಿ ಹೊಂದಿದೆ ಮತ್ತು ಇಲ್ಲಿಯವರೆಗೆ ಸರಿಸುಮಾರು 20,000 ಮನೆಗಳು ಯೋಜನೆಯ ಫಲಾನುಭವಿಯಾಗಿದ್ದಾರೆ ಆಸಕ್ತರು ಅಂಚೆ ಕಛೇರಿಗಳಲ್ಲಿ ಮತ್ತು ಗ್ರಾಮ ಒನ್, ಬೆಂಗಳೂರು ಓನ್ ಕೇಂದ್ರಗಳಲ್ಲಿ ನೋಂದಾಣಿ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಯೋಜನೆಯ ಸಲುವಾಗಿ ಮನೆ-ಮನೆಗೂ ನಮ್ಮ ಪೋಸ್ಟ್‌ಮೆನ್ ಗಳು ಸಮೀಕ್ಷೆ ನಡೆಸಲಿದ್ದಾರೆ. ಅವರನ್ನು ಕೂಡ ಸಹ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಆನ್ಲೈನ್ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಯೋಜನೆಗೆ ಅರ್ಜಿ ಸಲ್ಲಿಸಲು pmsuryaghar.gov.in ಅಧಿಕೃತ ವೆಬ್ಸೈಟ್ ಭೇಟಿ ಮಾಡಿ. ಮುಖಪುಟದಲ್ಲಿ ಕಾಣುವ ಮೇಲ್ಛಾವಣಿ ಸೋಲಾರ್‌ಗಾಗಿ ಅಪ್ಲೈ ಮಾಡಿ ಎಂಬ ಆಯ್ಕೆ ಕ್ಲಿಕ್ ಮಾಡಿ. ನಿಮ್ಮ ರಾಜ್ಯ, ವಿದ್ಯುತ್ ವಿತರಣಾ ಕಂಪನಿ ಮತ್ತು ವಿದ್ಯುತ್ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ & ಇಮೇಲ್ ವಿಳಾಸವನ್ನು ಅರ್ಜಿ ನಮೂನೆಯಲ್ಲಿ ಹಾಕಿ. 

ಅಗತ್ಯ ದಾಖಲೆಗಳು

  • ಅಧಿಕೃತ ವಿಳಾಸ ಪುರಾವೆ.(address proof)
  • ಗುರುತಿನ ಚೀಟಿ(ಆಧಾರ್ ಕಾರ್ಡ್)(Aadhar card)
  • ಕುಟುಂಬ ಪಡಿತರ ಚೀಟಿ (ರೇಷನ್ ಕಾರ್ಡ್)(ation card)
  • ಬ್ಯಾಂಕ್ ಪಾಸ್ ಬುಕ್(bank pass book)
  • ಮೊಬೈಲ್ ನಂಬರ್( mobile number)
  • ಪಾಸ್‌ಪೋರ್ಟ್ ಅಳತೆಯ ಚಿತ್ರ( Photo)
  • ವಿದ್ಯುತ್ ಬಿಲ್(elelctricty bill)

ಸೌರ ಫಲಕ ಅಳವಡಿಕೆಯಿಂದ ಏನು ಉಪಯೋಗ?

  • ಸೌರ ಫಲಕ ಅಳವಡಿಕೆ ಮಾಡುವುದರಿಂದ ನಿಮ್ಮ ವಿದ್ಯುತ್ ಬಳಕೆ & ತಿಂಗಳಿಂದ ತಿಂಗಳಿಗೆ ಉಳಿತಾಯವಾಗುತ್ತದೆ.
  • ಹಣಕಾಸಿನ ಹೊರೆ ಕಡಿಮೆಯಾಗುತ್ತದೆ.
  • ನಿಮ್ಮ ಮನೆ ಬಳಕೆಗಿಂತ ಹೆಚ್ಚುವರಿ ವಿದ್ಯುತ್‌ ಇದ್ದಲ್ಲಿ ಅದನ್ನು ವಿದ್ಯುತ್ ಮಂಡಳಿಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯವನ್ನು ಗಳಿಸಬಹುದು.

ಇತರೆ ವಿಷಯಗಳು

FDA, SDA ಸರ್ಕಾರಿ ಹುದ್ದೆಗಳ ನೇಮಕ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಫಿಕೇಶನ್ ಬಿಡುಗಡೆ

ಡಿಎ ಹೆಚ್ಚಳ ಘೋಷಣೆ : ಹೋಳಿಗೂ ಮುನ್ನವೇ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ


Share

Leave a Reply

Your email address will not be published. Required fields are marked *