ಹಲೋ ಸ್ನೇಹಿತರೇ, ಸಾಮಾನ್ಯವಾಗಿ ನಗರ ಭಾಗದಲ್ಲಿ ವಾಸಿಸುವ ಯಾವುದೇ ಯುವಕ ಯುವತಿ ಸ್ವಂತ ಉದ್ಯಮ ಮಾಡಲು ಆಸಕ್ತಿ ತೋರಿಸಿದರೆ ಸರ್ಕಾರದಿಂದ ಸಾಲ ಸೌಲಭ್ಯ ಸಿಗುತ್ತದೆ. ಇದು ಎಲ್ಲರಿಗೆ ಗೊತ್ತಿರುವ ವಿಚಾರ, ಆದರೆ ನಿಮಗೆ ಗೊತ್ತಾ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಕೃಷಿ ಚಟುವಟಿಕೆ ಹೊರತಾಗಿ ಕೃಷಿ ಉಪಕಸುಬನ್ನು ಮಾಡಲು ಕೂಡ ಸರ್ಕಾರದಿಂದ ಸಹಾಯಧನ ಸಿಗುತ್ತದೆ.
ಉದಾಹರಣೆಗೆ ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ ಮೊದಲಾದ ಕಸುಬು ಮಾಡುವವರಿಗೆ ಸರ್ಕಾರ ಧನ ಸಹಾಯ ನೀಡುತ್ತಿದೆ. 25 ರಿಂದ 30 ಲಕ್ಷ ರೂಪಾಯಿಗಳವರೆಗೆ ಸಾಲ ಹಾಗೂ ಅದಕ್ಕೆ ಸಬ್ಸಿಡಿ ಪಡೆದುಕೊಳ್ಳುವ ಯೋಜನೆಯ ಬಗ್ಗೆ ನಾವಿಂದು ಈ ಲೇಖನದಲ್ಲಿ ಮಾಹಿತಿ ನೀಡುತ್ತಿದ್ದೇವೆ.
Contents
IIM ಯೋಜನೆ ಅಡಿಯಲ್ಲಿ ಕೋಳಿ ಸಾಕಾಣಿಕೆಗೆ ಸಬ್ಸಿಡಿ:
ಕೋಳಿ ಕುರಿ ಸಾಕಾಣಿಕೆ ಮಾಡುವವರಿಗೆ 25 ರಿಂದ 30 ಲಕ್ಷ ರೂಪಾಯಿಗಳ ವರೆಗೆ ಹಣಕಾಸು ಸೌಲಭ್ಯವನ್ನು ಸರ್ಕಾರ ಒದಗಿಸಿ ಕೊಡಲು ಸರ್ಕಾರ ಮುಂದಾಗಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ಸ್ವಂತ ಜಮೀನು ಅಥವಾ ತೋಟ ಹೊಂದಿರಬೇಕು.
ಸ್ವಂತ ಜಮೀನು ಹೊಂದಿದ್ದರೆ ಅರ್ಜಿ ಸಲ್ಲಿಸಲು ಪಹಣಿ ಪತ್ರ ಸಲ್ಲಿಸಬೇಕು. ಇನ್ನು ಬಾಡಿಗೆ ಜಮೀನು ತೆಗೆದುಕೊಂಡು ಕೃಷಿ ಮಾಡುವವರಾಗಿದ್ದರೆ ಅಗ್ರಿಮೆಂಟ್ ದಾಖಲೆಯನ್ನು ಸಲ್ಲಿಕೆ ಮಾಡಬೇಕು.
ಇದನ್ನೂ ಸಹ ಓದಿ : ಪಿಂಚಣಿ ಪಾವತಿ ಸ್ಟೇಟಸ್: ಪಿಂಚಣಿದಾರರಿಗೆ ಸಿಕ್ತು ಭರ್ಜರಿ ಸಿಹಿ ಸುದ್ದಿ!!
ಯಾವ ಜಾಗದಲ್ಲಿ ಕೋಳಿ ಅಥವಾ ಕುರಿ ಕೃಷಿ ಮಾಡುತ್ತಿರೋ ಆ ಜಾಗದ ಜಿಪಿಎಸ್ ಫೋಟೋ ಸಲ್ಲಿಕೆ ಕಡ್ಡಾಯ. ಇದರ ಜೊತೆಗೆ ಬ್ಯಾಂಕ್ ಸ್ಟೇಟ್ಮೆಂಟ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಗ್ರಾಮೀಣ ಭಾಗದಲ್ಲಿ ಅಥವಾ ನಗರ ಭಾಗದಲ್ಲಿ ಕೋಳಿ ಅಥವಾ ಕುರಿ ಕೃಷಿ ಮಾಡಲು ಬಯಸುವವರು ಸರ್ಕಾರದಿಂದ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೆ, ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಬ್ಯಾಂಕ್ ಗೆ ಹೋಗಿ ಅರ್ಜಿ ಫಾರಂ ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲ ಪಡೆಯಬಹುದು
ಅಥವಾ https://nlm.udyamimitra.in/ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಮತ್ತು ಕೇಳಿರುವ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ. ನೀವು ಈ ಯೋಜನೆಯ ಅಡಿಯಲ್ಲಿ 30 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಹಾಗೂ ನೀವು ಅರ್ಹರಾಗಿದ್ದರೆ ಕೆಲವೇ ದಿನಗಳಲ್ಲಿ ನಿಮ್ಮ ಅರ್ಜಿ ಅಪ್ರೂವ್ ಆಗುತ್ತದೆ ಮತ್ತು ಬ್ಯಾಂಕ್ನಿಂದ ನಿಮ್ಮ ಖಾತೆಗೆ ಸಾಲದ ಮೊತ್ತ ಜಮಾ ಮಾಡಲಾಗುವುದು.
ಇತರೆ ವಿಷಯಗಳು:
ಏಪ್ರಿಲ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೂ ಬಂತಾ ಚೆಕ್ ಮಾಡಿ
ಇಂದಿನಿಂದ 4 ದಿನಗಳವರೆಗೆ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್!
ರಾಜ್ಯದ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್ ಮಾಡಿ