rtgh
Headlines

ಏಪ್ರಿಲ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ! ನಿಮಗೂ ಬಂತಾ ಚೆಕ್‌ ಮಾಡಿ

anna bhagya status check
Share

ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಏಪ್ರಿಲ್ ತಿಂಗಳ ಹಣ ಬಿಡುಗಡೆ ಆಗಿದ್ದು, ಈಗಲೇ ಸಾಕಷ್ಟು ಜನರ ಖಾತೆಗೆ 680 ರೂ.ಗಳು ಜಮಾ ಆಗಿದೆ. ಒಂದು ವೇಳೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗದೆ ಇದ್ದರೆ ಬ್ಯಾಂಕ್ ಖಾತೆಗೆ ಸಂಬಂಧಪಟ್ಟ ಕೆಲವು ಪ್ರಮುಖ ಕೆಲಸಗಳನ್ನು ಮಾಡಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಖಾತೆಗೆ ತಪ್ಪದೆ ಹಣ ವರ್ಗಾವಣೆ ಆಗುತ್ತದೆ.

anna bhagya status check

ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮೇಲೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರು ಕೇಂದ್ರ ಸರ್ಕಾರ ಕೊಡುವ 5 ಕೆಜಿ ಉಚಿತ ಜೊತೆಗೆ ರಾಜ್ಯ ಸರ್ಕಾರದಿಂದ 5 ಕೆಜಿ ಅಕ್ಕಿ ಬದಲು ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗಿದೆ.

ಸರ್ಕಾರಕ್ಕೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ಒದಗಿಸಲು ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಕಳೆದ ಏಳು ತಿಂಗಳುಗಳಿಂದ ಫಲಾನುಭವಿಗಳ ಖಾತೆಗೆ ಒಂದು ಕೆಜಿಗೆ 34 ರೂಪಾಯಿಗಳಂತೆ 5 ಕೆಜಿ ಗೆ 170ಗಳನ್ನು ನೀಡುತ್ತಿದೆ, ಅಂದ್ರೆ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೋ ಪ್ರತಿ ಸದಸ್ಯರಿಗೆ 170 ರೂ. ಗಳು ಜಮಾ ಆಗುತ್ತದೆ..

ಈಗಾಗಲೇ ಏಪ್ರಿಲ್ ತಿಂಗಳ ಹಣ ಬಿಡುಗಡೆಯಾಗಿದ್ದು ಸಾಕಷ್ಟು ಜನ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ.. ಒಂದು ವೇಳೆ ನಿಮ್ಮ ಖಾತೆಗೆ ಹಣ ಬಾರದೇ ಇದ್ದರೆ, ಈ ಕೆಲಸ ಮಾಡಿಕೊಳ್ಳಿ. ಮೊದಲನೇದಾಗಿ ಸರ್ಕಾರ ತಿಳಿಸಿರುವಂತೆ ಬ್ಯಾಂಕ್ ಶಾಖೆಗೆ ಹೋಗಿ E-KYC ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ. ಬಳಿಕ ಎನ್ ಪಿಸಿಐ ಮ್ಯಾಪಿಂಗ್ ಮಾಡಿಸಿ. ಈ ಎರಡು ಪ್ರಕ್ರಿಯೆಗಳನ್ನು ಮಾಡಿಸಿಕೊಂಡರೆ ತಪ್ಪದೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ.

ಇದನ್ನೂ ಸಹ ಓದಿ : ನೌಕರರ ಮೂಲ ವೇತನಕ್ಕೆ ಸಂಬಂಧಿಸಿದಂತೆ ಹೊಸ ಅಪ್ಡೇಟ್!

ಇನ್ನು ಸರ್ಕಾರ ನೀಡಿರುವ ಮತ್ತೊಂದು ಸೂಚನೆಯ ಪ್ರಕಾರ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೆ ಇದ್ದರೆ ಹಣ ಜಮಾ ಆಗುವುದಿಲ್ಲ ಹಿಗಾಗಿ ಯಾವುದಾದರೂ ಅಂಚೆ ಕಚೇರಿಯಲ್ಲಿ ಹೊಸ ಖಾತೆಯನ್ನು ತೆರೆಯುವುದು ಒಳ್ಳೆಯದು ಅಥವಾ ರಾಷ್ಟ್ರೀಕೃತ ಬ್ಯಾಂಕುಗಳಾದ ಕೆನರಾ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕುಗಳಲ್ಲಿ ಹೊಸ ಖಾತೆ ತೆರೆದರು ಕೂಡ ಮಿಸ್ ಆಗದೆ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆ ಹಣ ಜಮಾ ಆಗುತ್ತದೆ.

DBT ಸ್ಟೇಟಸ್ ಹೀಗೆ ಚೆಕ್‌ ಮಾಡಿ:

ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣ ಗೃಹಿಣಿಯ ಖಾತೆಗೆ ಜಮಾ ಆಗುತ್ತದೆ, ಅಂದರೆ ರೇಷನ್ ಕಾರ್ಡ್ ಗೃಹಿಣಿಯ ಹೆಸರಿನಲ್ಲಿಯೇ ಇರುವುದರಿಂದ ಅವರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು.

ಇದೀಗ ಯುಗಾದಿ ಬಂಪರ್ ಗಿಫ್ಟ್ ನೀಡಿರುವ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ ತಿಂಗಳಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇದು ಸಾಕಷ್ಟು ಜನರ ಖಾತೆಯನ್ನು ತಲುಪಿದೆ. ನಿಮಗೂ ವರ್ಗಾವಣೆ ಆಗಿರಬಹುದು ಅದನ್ನು ತಿಳಿದುಕೊಳ್ಳುವುದು ಹೇಗೆ? ನಿಮ್ಮ ಮೊಬೈಲ್ ನಲ್ಲಿ ಒಂದೇ ಒಂದು ಕ್ಲಿಕ್ ಮೂಲಕ DBT ಸ್ಟೇಟಸ್ ತಿಳಿಯಬಹುದು, ಹೇಗೆ ಎಂಬುದನ್ನು ನೋಡೋಣ.

  • ಮೊದಲಿಗೆ ಆಹಾರ ಇಲಾಖೆಯ https://ahara.kar.nic.in/lpg/ ಈ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ಈಗ ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಅವುಗಳ ಮೇಲೆ ಮೂರು ಪ್ರತ್ಯೇಕ ಲಿಂಕ್ ಕೊಡಲಾಗಿದೆ. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ನೋಡಿ ಅದರ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ ಚೆಕ್ ಯುವರ್ ಡಿಬೆಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಬಳಿಕ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಕ್ಯಾಪ್ಚ ಸಂಖ್ಯೆ ನಮೂದಿಸಿ ಯಾವ ತಿಂಗಳಿನ DBT ಚೆಕ್ ಮಾಡಬೇಕೋ ಆ ತಿಂಗಳನ್ನು ಆಯ್ಕೆ ಮಾಡಿ.
  • ಈಗ ಗೋ ಎಂದು ಕ್ಲಿಕ್ ಮಾಡಿ. ನಂತರ ನಿಮ್ಮ ಬ್ಯಾಂಕ್ ಖಾತೆಯ ವಿವರ ಎಷ್ಟು ಹಣ ಜಮಾ ಆಗಿದೆ ಎಷ್ಟು ಸದಸ್ಯರಿದ್ದಾರೆ ಎಲ್ಲಾ ಮಾಹಿತಿಗಳನ್ನು ಡಿಸ್ಪ್ಲೇ ಮಾಡಲಾಗುವುದು.

ಇತರೆ ವಿಷಯಗಳು:

ಇಂದಿನಿಂದ 4 ದಿನಗಳವರೆಗೆ ರಾಜ್ಯದಲ್ಲಿ ಭಾರೀ ಮಳೆ ಅಲರ್ಟ್!

ರಾಜ್ಯದ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ನಿಮಗೂ ಬಂದಿದ್ಯಾ ಚೆಕ್ ಮಾಡಿ

ಪಿಂಚಣಿ ಪಾವತಿ ಸ್ಟೇಟಸ್: ಪಿಂಚಣಿದಾರರಿಗೆ ಸಿಕ್ತು ಭರ್ಜರಿ ಸಿಹಿ ಸುದ್ದಿ!!


Share

Leave a Reply

Your email address will not be published. Required fields are marked *