rtgh
Headlines

ಅಗ್ನಿಶಾಮಕ ಇಲಾಖೆಯಲ್ಲಿ 975 ಹುದ್ದೆಗಳ ನೇಮಕಾತಿ.! ಆಸಕ್ತರು ಕೂಡಲೇ ಅರ್ಜಿ ಹಾಕಿ

ksfes recruitment 2024
Share

ಹಲೋ ಸ್ನೇಹಿತರೇ, ಕರ್ನಾಟಕ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಗಳಲ್ಲಿ ವಿವಿಧ ಒಟ್ಟು 975 ಖಾಲಿ ಹುದ್ದೆಗಳಿವೆ, ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ksfes recruitment 2024

ಕರ್ನಾಟಕ ಅಗ್ನಿಶಾಮಕ & ತುರ್ತು ಸೇವೆಗಳ ಇಲಾಖೆಯಲ್ಲಿ ವಿವಿಧ 975 ಖಾಲಿ ಹುದ್ದೆಗಳಿವೆ, ಈ ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಈ ಇಲಾಕೆಯ ಮಹಾ ನಿರ್ದೇಶಕರು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೇಮಕಾತಿ ಮಂಜೂರು ಮಾಡುವ ಸಂಬಂಧ ಸುತ್ತೋಲೆಯನ್ನು ಕಳುಹಿಸಲಾಗಿದೆ, ಶೀಘ್ರದಲ್ಲಿಯೇ ಈ ನೇಮಕಾತಿ ಪ್ರಾರಂಭವಾಗಲಿದೆ. 

ಇಲಾಖೆಯಲ್ಲಿ ಅಧಿಕಾರಿ & ಸಿಬ್ಬಂದಿಗಳ ವಯೋನಿವೃತ್ತಿ, ಮರಣ ಹೊಂದಿರುವ & 2020ನೇ ಸಾಲಿನ ನೇಮಕಾತಿಯಲ್ಲಿ ನೇಮಕಾತಿ ಹೊಂದದೇ ಇರುವ ರಿಕ್ತಸ್ಥಾನಗಳು ಮತ್ತು ಇನ್ನಿತರೆ ಕಾರಣದಿಂದ ಖಾಲಿಯಾದ ಹುದ್ದೆಗಳು & ಹೊಸದಾಗಿ ಆರಂಭಗೊಂಡ ಅಗ್ನಿಶಾಮಕ ಠಾಣೆಗಳಿಗೆ ಸೃಜಿಸಲಾದ ಹುದ್ದೆಗಳಿಗೆ ಅಧಿಕಾರಿ & ಸಿಬ್ಬಂದಿಯವರ ಕೊರತೆ ಇರುತ್ತದೆ. ಪ್ರಸ್ತುತ ಇಲಾಖೆಯಲ್ಲಿ 2024ರ ಮಾರ್ಚ ತಿಂಗಳ ಅಂತ್ಯಕ್ಕೆ ವಿವಿಧ ವೃಂದದ ಒಟ್ಟು 975 ನೇರ ನೇಮಕಾತಿ ಹುದ್ದೆಗಳು ಖಾಲಿಯಿದೆ, ಈ ಖಾಲಿ ಹುದ್ದೆಗಳನ್ನು ಭರ್ತಿಮಾಡುವುದು ಅಗತ್ಯವಾಗಿದೆ.

ಖಾಲಿ ಹುದ್ದೆಗಳ ವಿವರ

• ನೇಮಕಾತಿ ಹುದ್ದೆಗಳ ಒಟ್ಟು ಸಂಖ್ಯೆ : 975
• ನೇಮಕಾತಿ ಇಲಾಖೆ : ಕರ್ನಾಟಕ ಅಗ್ನಿಶಾಮಕ & ತುರ್ತುಸೇವೆಗಳ ಇಲಾಖೆ 
• ಉದ್ಯೋಗ ಸ್ಥಳ : ಕರ್ನಾಟಕ

ನೇಮಕಾತಿ ಹುದ್ದೆಗಳ ಸಂಪೂರ್ಣ ವಿವರ : 

• ಅಗ್ನಿಶಾಮಕ ಠಾಣಾಧಿಕಾರಿ – 64 ಹುದ್ದೆಗಳು
• ಅಗ್ನಿಶಾಮಕ ಚಾಲಕ – 153 ಹುದ್ದೆಗಳು
• ಚಾಲಕ ತಂತ್ರಜ್ಞ – 27 ಹುದ್ದೆಗಳು
• ಅಗ್ನಿಶಾಮಕ – 731 ಹುದ್ದೆಗಳು 
 
ಮೇಲ್ಕಂಡ ನೇಮಕಾತಿಗೆ ಸಂಬಂಧಿಸಿದಂತೆ, ಸರ್ಕಾರ ಅಧಿಸೂಚಿಸಿರುವಂತೆ ರಾಜ್ಯ ಅಗ್ನಿಶಾಮಕ & ತುರ್ತು ಸೇವಾ ಇಲಾಖೆಯಲ್ಲಿ ಕೆಳ ಹಂತದ ನೇರ ನೇಮಕಾತಿಯ ಮೇಲ್ದರ್ಜೆ ಹುದ್ದೆಗಳಿಗೆ ನೀಡಲಾದ ಪದೋನ್ನತಿ, ವಯೋನಿವೃತ್ತಿ & ವಿವಿಧ ಕಾರಣಗಳಿಂದ ಸ್ವಯಂಗೂ ಇನ್ನಿತರೆ ಕಾರಣಗಳಿಂದ ಮರಣ ಹೊಂದಿದ, ನೇರ ನೇಮಕಾತಿ ಹುದ್ದೆಗಳು ಖಾಲಿ ಇರುತ್ತದೆ. ರಾಜ್ಯದಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಗಳ ಆರಂಭಿಸಲಾಗಿದ್ದು, ಈ ಠಾಣೆಗಳಿಗೆ ಸೃಜಿಸಲಾದ ಹುದ್ದೆಗಳು ಕೂಡ ಖಾಲಿಯಿದೆ, ಈ ಖಾಲಿಯಿರುವ ಹುದ್ದೆಗಳಿಂದ ಅಗ್ನಿಶಾಮಕ & ರಕ್ಷಣಾ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಇತರೆ ವಿಷಯಗಳು

ಫ್ರೀ ಬಸ್‌ ಏರುತ್ತಿರುವ ಮಹಿಳೆಯರಿಗೆ ಒಂದರ ಮೆಲ್ಲೊಂದು ಸಂಕಷ್ಟ!

ರಾಜ್ಯದಲ್ಲಿ ಭಾರೀ ಮಳೆ ಮರು ಆರಂಭ! ಹವಾಮಾನ ಇಲಾಖೆ ಅಲರ್ಟ್


Share

Leave a Reply

Your email address will not be published. Required fields are marked *