ಹಲೋ ಸ್ನೇಹಿತರೆ, ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರೇ ಎಚ್ಚರವಾಗಿರಿ. ರಾಜ್ಯದಲ್ಲಿ ಚಾಕಲೇಟ್ ಗ್ಯಾಂಗ್ ನಂತರ ಈಗ ಬೆಳಗಾವಿ- ಹುಬ್ಬಳ್ಳಿ ರಸ್ತೆಯಲ್ಲಿ ಜ್ಯೂಸ್ ಗ್ಯಾಂಗ್ ಫುಲ್ ಕಾಟ ಶುರು ಆಗಿದೆ. ಬಸ್‌ನಲ್ಲಿ ಪ್ರಯಾಣಿಸುವಾಗ ಜ್ಯೂಸ್ ಕುಡಿಸಿ ಪ್ರಜ್ಞೆ ತಪ್ಪಿಸಿ ಮೈಮೇಲಿನ ಎಲ್ಲ ಚಿನ್ನಾಭರಣ, ಬ್ಯಾಗ್, ಪರ್ಸ್ ಹಾಗೂ ಹಣ ಕಳ್ಳತನ ಮಾಡಲಾಗುತ್ತಿದೆ.
ಬೆಳಗಾವಿಯಲ್ಲಿ ಜ್ಯೂಸ್ ಗ್ಯಾಂಗ್ ಮಾದರಿಯಲ್ಲಿಯೇ ಕಳೆದ ತಿಂಗಳಲ್ಲಿ ಬೆಳಗಾವಿ-ಗೋವಾ ರೈಲಿನಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮಕ್ಕೆ ಹೊರಟ್ಟಿದ್ದ 8 ಜನ ಪ್ರಯಾಣಿಕರಿಗೆ ಚಾಕೋಲೇಟ್ ತಿನ್ನಿಸಿ ಅವರ ಬಳಿಯಿದ್ದ ಮೊಬೈಲ್, 50,000 ರೂ. ನಗದು ಕದ್ದು ಪರಾರಿಯಾಗಿದ್ದರು. ಆ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ KSRTC ಸಾರಿಗೆ ಬಸ್ ಟಾರ್ಗೆಟ್ ಮಾಡಿರುವ ಜ್ಯೂಸ್ ಗ್ಯಾಂಗ್ ಮತ್ತೆ ಆಕ್ಟೀವ್ ಆಗಿದೆ. ಜ್ಯೂಸ್ ಗ್ಯಾಂಗ್‌ನಿಂದ ದರೋಡೆಗೆ ಒಳಗಾದ ಮೊದಲ ವ್ಯಕ್ತಿ ಸಂಜೀವ ಆಗಿದ್ದಾನೆ. ಇದರಿಂದ ಬಸ್ ಪ್ರಯಾಣಿಕರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ.
ಇದನ್ನು ಓದಿ: ಜೂನ್ 12 ರವರೆಗೆ ವಾಹನ ಚಾಲಕರಿಗೆ ಬಿಗ್ ರಿಲೀಫ್!
ಘಟನೆ ನಡೆದಿದ್ದಾದರೂ ಹೇಗೆ?
ಹುಬ್ಬಳ್ಳಿಗೆ ಹೋಗಿದ್ದ ಸಂಜೀವ ಮತ್ತು ಆತನ ಸ್ನೇಹಿತರಿಬ್ಬರೂ ಬೆಳಗಾವಿಗೆ ಬರಲು ಬಸ್ ಹತ್ತಿದ್ದಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ಸಹ ಪ್ರಯಾಣಿಕ ಸಂಜೀವನನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಸಲುಗೆ ಬೆಳೆಸಿ ಇಬ್ಬರಿಗೂ ಬಾಳೆ ಹಣ್ಣು ಹಾಗೂ ಜ್ಯೂಸ್ ನೀಡಿದ್ದಾನೆ. ಇದನ್ನು ಸೇವಿಸಿದ ಇಬ್ಬರು ಪ್ರಜ್ಞೆ ತಪ್ಪಿದ್ದಾರೆ. ಇಬ್ಬರ ಬಳಿಯಿರುವ ಹಣ ಎಲ್ಲವನ್ನೂ ದೋಚಿ ಪರಾರಿ ಆಗಿದ್ದಾರೆ. ಸಂಜೀವನನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆ ದಾಖಲಿಸಿದ್ದಾರೆ, ಮತ್ತೊಬ್ಬ ಪ್ರಯಾಣಿಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೀಗಾಗಿ ಬಸ್ ಪ್ರಯಾಣಿಕರು ಅಥವಾ ರೈಲಿನಲ್ಲಿ ಅಪರಿಚಿತರಿಂದ ಆಹಾರ ಪದಾರ್ಥ ಸೇವಿಸುವ ಮುನ್ನ ಎಚ್ಚರ ವಹಿಸಬೇಕಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಇಂತಹ ಪ್ರಕರಣಗಳು ಮತ್ತೆ ಕಂಡುಬರುತ್ತಿವೆ, ಸಾರ್ವಜನಿಕರು ಹಾಗೂ ಪ್ರಯಾಣಿಕರು ಅಪರಿಚಿತ ವ್ಯಕ್ತಿಗಳಿಂದ ಆಹಾರ ಸೇವಿಸುವ ಮುನ್ನ ನೂರು ಸಾರಿ ಯೋಚನೆ ಮಾಡಿ ಮುಂದುವರಿಯಬೇಕಿದೆ.
ಇತರೆ ವಿಷಯಗಳು:
ದ್ವಿತೀಯ ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇಲ್ಲಿ ಗಮನಿಸಿ!
5,8,9ನೇ ಕ್ಲಾಸ್ ಅಂತಿಮ ಫಲಿತಾಂಶದ ತೀರ್ಪಿಗೂ ಮುನ್ನ, ಮುಂದಿನ ತರಗತಿಗೆ ಪ್ರವೇಶ