rtgh
Headlines

ಕನ್ನಡ ಮಾಧ್ಯಮಕ್ಕೆ ಅಡ್ಮಿಷನ್‌ ಪಡೆಯುವ ವಿದ್ಯಾರ್ಥಿಗಳಿಗೆ ರೂ.10,000 ಪ್ರೋತ್ಸಾಹಧನ

kannada medium school admission
Share

ಹಲೋ ಸ್ನೇಹಿತರೇ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲಿರುವ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌. ಅಡ್ಮಿಷನ್‌ ಪಡೆದ ತಕ್ಷಣ ರೂ.10,000 ಪ್ರೋತ್ಸಾಹಧನವನ್ನು ನೀಡಲು ಶಿಕ್ಷಣ ಸಂಸ್ಥೆ ಮುಂದಾಗಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ನೋಡಿ.

kannada medium school admission

ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ತರಗತಿಳಿಗೆ ಪ್ರವೇಶವನ್ನು ಪಡೆಯುವ ಸಂದರ್ಭವಿದು. ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದುವ ಅವಕಾಶವು ಇದೆ. ಹಾಗೆಯೇ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಅವಕಾಶವು ಇದೆ. ಇದು ಅವರವರ ಸಾಮರ್ಥ್ಯಕ್ಕೆ, ಆಸಕ್ತಿಗೆ, ಪೋಷಕರ ಆಧ್ಯತೆಗೆ ಬಿಟ್ಟಿದ್ದು. ಅಂದಹಾಗೆ ಈ ಸಾಲಿನ ಪ್ರವೇಶಾತಿಗೆ ಸಂಬಂಧ ಇಲ್ಲೊಂದು ಗುಡ್‌ ನ್ಯೂಸ್‌ ಇದೆ. ಕನ್ನಡ ಮಾಧ್ಯಮದಲ್ಲಿ ಓದಲು ಪ್ರವೇಶ ಪಡೆಯುವವರಿಗೆ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.

ಹೌದು, ಮಾಗಡಿ ರಸ್ತೆ ಟೋಲ್‌ಗೇಟ್‌ ಬಳಿ ವಿದ್ಯಾರಣ್ಯ ನಗರದಲ್ಲಿರುವ ಶ್ರೀ ಮಂಜುನಾಥ ವಿದ್ಯಾಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯಲು ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಭರ್ಜರಿ ಸುವರ್ಣಾವಕಾಶ ಕಲ್ಪಿಸಲಾಗಿದೆ. 2024-25ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ, ಅಡ್ಮಿಷನ್‌ ಪಡೆದ ತಕ್ಷಣ ರೂ.10,000 ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದು ವಿದ್ಯಾಲಯ ಹೇಳಿದೆ.

ಈ ಮಾಧ್ಯಮದಲ್ಲಿ ದಾಖಲಾತಿ ಪಡೆಯುವವರು 10ನೇ ತರಗತಿವರೆಗೆ ಇದೇ ಶಾಲೆಯಲ್ಲಿ ಶಿಕ್ಷಣ ಮುಂದುವರೆಸಬೇಕು. ಸಂಸ್ಥೆಯ ಅಧ್ಯಕ್ಷ & ಪ್ರಾಂಶುಪಾಲ ನಾಗರಾಜು ಸಾರಥ್ಯದಲ್ಲಿ 56 ವರ್ಷಗಳಿಂದ ಪೂರ್ವ ಪ್ರಾಥಮಿಕದಿಂದ 10ನೇ ತರಗತಿವರೆಗೂ ಶಿಕ್ಷಣ ನೀಡಲಾಗುವುದು.

ಹಿಂದುಳಿದ ವರ್ಗಗಳ ಮಕ್ಕಳಿಗೆ ಶುಲ್ಕವಿಲ್ಲದೆ ಶಿಕ್ಷಣ & ಇಂಗ್ಲಿಷ್ ಮಾಧ್ಯಮದ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಸಕಲ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಶ್ರೀ ಮಂಜುನಾಥ ವಿದ್ಯಾಲಯದಲ್ಲಿ ನುರಿತ ಅನುಭವಿ ಶಿಕ್ಷಕರಿದ್ದಾರೆ. ಮಕ್ಕಳ ಆರೋಗ್ಯ ಪೋಷಣೆಗೆ ಸಂಬಂಧಿಸಿದ ಆಟ & ವ್ಯಾಯಾಮ, ಯೋಗ ಶಿಕ್ಷಣ ನೀಡಲಾಗುತ್ತದೆ. ಸಂಸ್ಥೆಯಲ್ಲಿ NCC ಸೌಲಭ್ಯ ಸಹ ಇರುತ್ತದೆ. ಶಾಲೆಯ ಸಮೀಪ ಸರ್ಕಾರಿ ಹಾಸ್ಟೆಲ್ ಸೌಲಭ್ಯವಿದೆ. ಸರ್ಕಾರಿ ಶುಲ್ಕವನ್ನು ಆಡಳಿತ ಮಂಡಳಿ ಭರಿಸುತ್ತದೆ. ಮಕ್ಕಳಿಗೆ ಉಚಿತ ಪಠ್ಯಪುಸ್ತಕ & ಬಸ್ ಪಾಸ್ ವ್ಯವಸ್ಥೆ ಇದೆ. ಉಚಿತ ಸಮವಸ್ತ್ರ, ಉಪಾಹಾರವು ಲಭ್ಯವಿದೆ. ಸರ್ಕಾರದ ಅನುದಾನದಿಂದ ಇಸ್ಕಾನ್‌ ಸಂಸ್ಥೆಯು ಹಾಲು, ಊಟ, ಮೊಟ್ಟೆ, ಬಾಳೆಹಣ್ಣು ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಇತರೆ ವಿಷಯಗಳು

ರೈತರಿಗೆ ಸಿಹಿಸುದ್ದಿ: ಜೂ.1 ರಿಂದಲೇ ‘ಮುಂಗಾರು ಮಳೆ’ ಆರಂಭ!

ಈ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯಲಿದೆ ಮಳೆ! ಎಚ್ಚರದಿಂದಿರಲು ಸೂಚನೆ


Share

Leave a Reply

Your email address will not be published. Required fields are marked *