ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರದಿಂದ ನೀಡಲಾದ ಉಚಿತ ಹೊಲಿಗೆ ಯಂತ್ರ ಯೋಜನೆಯ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ, ಬೇಕಾಗುವ ದಾಖಲೆಗಳು & ಅರ್ಜಿ ಸಲ್ಲಿಸುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲು ಉಚಿತ ಹೊಲಿಗೆ ಯಂತ್ರ ಮತ್ತು ಇತರೆ ಯಂತ್ರಗಳನ್ನು ನೀಡಲಾಗುವುದು.
Contents
ಯೋಜನೆ ಮಾಹಿತಿ:
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಸಂಪ್ರದಾಯಿಕ ಕಲೆಗಳಿಗೆ ಉತ್ತೇಜನ ನೀಡಲು ಅರ್ಹ ಕುಶಲಕರ್ಮಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು.
ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ 18 ವರ್ಗದ ಕುಶಲಕರ್ಮಿಗಳಿಗೆ ಈ ಯೋಜನೆಯಡಿ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಮತ್ತು ಬ್ಯಾಂಕ್ ಖಾತರಿ ರಹಿತ ಸಾಲ ಸೌಲಭ್ಯ ದೊರೆಯುತ್ತದೆ. ಅದರಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ಒಂದಾಗಿದೆ.
ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್ ಖರೀದಿ ಮಾಡಲು ಈ ಯೋಜನೆಯಡಿ 15,000 ರೂ. ವರೆಗೆ ಮೌಲ್ಯದ ಇ–ವೋಚರ್ಸ್ ಅಥವಾ ಇ–ರುಪಿ ನೀಡುತ್ತಾರೆ. ಸರ್ಕಾರದ ಪರವಾಗಿ ಈ ಪ್ರೋತ್ಸಾಹಧನದ ವೋಚರ್ಸ್‌ನ್ನು ಬ್ಯಾಂಕ್ ಮೂಲಕ ವಿತರಣೆ ಮಾಡಲಾಗುವುದು.
ಈ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರುವ ಕುಶಲಕರ್ಮಿಗಳಿಗೆ ಜಿಲ್ಲಾ ಮಟ್ಟದ ಸಮಿತಿಯಿಂದ ಕುಶಲಕರ್ಮಿ ಎಂದು ದೃಢೀಕರಿಸಿದ ನಂತರ 5 ರಿಂದ 7 ದಿನಗಳ ತರಬೇತಿ ನೀಡಲಾಗುವುದು.
ಅರ್ಹತೆಗಳು:
- ಅರ್ಜಿ ಸಲ್ಲಿಸುವ ದಿನಾಂಕದಂದು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
- ಅರ್ಜಿದಾರ ತನ್ನ ಸಾಂಪ್ರದಾಯಿಕ ಅಸಂಘಟಿತ ಸ್ವಯಂ ಉದ್ಯೋಗ (Tailor-Darzi) ದಲ್ಲಿ ತೊಡಗಿಕೊಂಡಿರಬೇಕು.
- ಒಂದು ಕುಟುಂಬದ ಒಬ್ಬರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.
- ಅರ್ಜಿ ಸಲ್ಲಿಸುವ ಸಮಯದಲ್ಲಿ ಅರ್ಜಿದಾರ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದಿರಬಾರದು. (e.g. PMEGP, PM SVANidhi, Mudra)
- ಈ ಯೋಜನೆಯು ಸರ್ಕಾರಿ ನೌರಕರಿಗೆ ಮತ್ತು ಅವರ ಕುಟುಂಬದವರಿಗೆ ಸಿಗುವುದಿಲ್ಲ.
ಬೇಕಾಗುವ ದಾಖಲೆಗಳು:
- ಆಧಾರ ಕಾರ್ಡ್
- ರೇಷನ್ ಕಾರ್ಡ್ ಕಡ್ಡಾಯ
- ಮೊಬೈಲ್ ಸಂಖ್ಯೆ
- ಬ್ಯಾಂಕ್ ಖಾತೆ ವಿವರ
ಅರ್ಜಿ ಸಲ್ಲಿಸುವ ವಿಧಾನ:
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬಸುವವರು ಕೇಂದ್ರ ಸರ್ಕಾರದ PM Vishwakarma ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಗ್ರಾಮ ಪಂಚಾಯತಿ, ನಿಮ್ಮ ಹತ್ತಿರದ CSC ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯು ಅರ್ಜಿ ಸಲ್ಲಿಸಬಹುದು.
ಪ್ರಮುಖ ಲಿಂಕ್‌ಗಳು:
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್: pmvishwakarma.gov.in
ಇತರೆ ವಿಷಯಗಳು
ನಿಮ್ಮ ರಾಜ್ಯದಲ್ಲಿ ಕೆನರಾ ಬ್ಯಾಂಕ್ ಉದ್ಯೋಗಾವಕಾಶ.! 3.50 ಲಕ್ಷ ಸಂಬಳ ಈ ಫಾರ್ಮ್ ತುಂಬಿ
ಗೃಹಲಕ್ಷ್ಮಿ ಹಣಕ್ಕೂ ಬಂತು GST ಮತ್ತು Tax ಪಜೀತಿ: ಫ್ರೀ ಹಣ ಪಡೆಯೋ ಮಹಿಳೆಯರಿಗೆ ಶಾಕಿಂಗ್ ಸುದ್ದಿ!!