rtgh
Headlines

ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ! ಸ್ವ ಉದ್ಯೋಗಕ್ಕೆ ಈ ಬ್ಯಾಂಕ್‌ ನೀಡುತ್ತೆ ಸಹಾಯಧನ

free tailoring training
Share

ಹಲೋ ಸ್ನೇಹಿತರೇ, ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಉಚಿತವಾಗಿ ಹೊಲಿಗೆ ತರಬೇತಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ನೀವು ಕೂಡ ಆಸಕ್ತಿ ಹೊಂದಿದ್ದರೆ ತರಬೇತಿ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

free tailoring training

Contents

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅಪ್ಲೇ ಮಾಡುವವರಿಗೆ ಕನಿಷ್ಟ ವಯಸ್ಸು 18 ರಿಂದ ಗರಿಷ್ಟ 45 ವರ್ಷದ ಒಳಗಿರಬೇಕು.
  • ಕನ್ನಡ ಬಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು. 
  • ಅರ್ಜಿದಾರ ಅಭ್ಯರ್ಥಿಯು ಸಂಸ್ಥೆಯಿಂದ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.
  • ಗ್ರಾಮೀಣ ಭಾಗದಲ್ಲಿ ವಾಸಿರುವ BPL ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ನೀಡಲಾಗುವುದು ಎಂದು ತರಬೇತಿ ನೀಡುವ ಸಂಸ್ಥೆಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
  • ಈ ತರಬೇತಿಯು ಪುರುಷರಿಗೆ ಆಯೋಜಿಸಲಾಗಿದ್ದು ಮಹಿಳೆ ಅಭ್ಯರ್ಥಿಗಳು ಒಮ್ಮೆ ಈ ಲೇಖನದಲ್ಲಿ ಕೆಳಗೆ ನೀಡಿರುವ ಮೊಬೈಲ್ ನಂಬರ್‌ಗೆ ಕರೆ ಮಾಡಿ ನಿಮಗೆ ಯಾವ ದಿನ ತರಬೇತಿ ಎನ್ನುವ ಮಾಹಿತಿಯನ್ನು ತಿಳಿಯಬಹುದು.

ತರಬೇತಿ ಊಟ ವಸತಿಯೊಂದಿಗೆ ಸಂಪೂರ್ಣ ಉಚಿತ

ಈ ತರಬೇತಿಯು ಒಟ್ಟು 30 ದಿನ ನಡೆಯಲಿದ್ದು ತರಬೇತಿಗೆ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ  ಉಚಿತ ವಸತಿ & ಊಟದ ವ್ಯವಸ್ಥೆ ಇರುತ್ತದೆ & ತರಬೇತಿಯು ಯಾವುದೇ ಶುಲ್ಕ ಇಲ್ಲದೆ ಸಂಪೂರ್ಣ ಉಚಿತವಾಗಿರುತ್ತದೆ.

ಬ್ಯಾಂಕ್ ಮೂಲಕ ಸಾಲ ಸೌಲಭ್ಯ:

ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 30 ದಿನದ ಕಾಲ ತರಬೇತಿಯಲ್ಲಿ ಟೇಲರಿಂಗ್ ಕಳಿಸುವುದರ ಜೊತೆಗೆ ಈ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಬ್ಯಾಂಕ್ ಮೂಲಕ ಯಾವೆಲ್ಲಾ ಯೋಜನೆಯಡಿ ಸಬ್ಸಿಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಧಾನ:

ಇಲ್ಲಿ ನೀಡಲಾದ ಈ ನಂಬರ್‌ಗಳಿಗೆ ಕರೆ ಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ತರಬೇತಿಗೆ ಭಾಗವಹಿಸಿ 7483987824, 9480078829.

ತರಬೇತಿ ನಡೆಯುವ ದಿನಾಂಕ:

30 ದಿನದ ಉಚಿತ ಹೊಲಿಗೆ ತರಬೇತಿಯು ದಿನಾಂಕ: 26-04-2024 ರಿಂದ ಪ್ರಾರಂಭವಾಗಿ 25-05-2024 ಕ್ಕೆ ಕೊನೆಗೊಳ್ಳಲಿದೆ.

ತರಬೇತಿ ಸ್ಥಳ:

ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ,ರಾಘವೇಂದ್ರ ಕಾಲೋನಿ, ವಿಜಯಪುರ.

ಇತರೆ ವಿಷಯಗಳು

ಸರ್ಕಾರದಿಂದ ಉಚಿತ ಸೈಕಲ್‌ ಭಾಗ್ಯ! ಈ ಕಾರ್ಡ್‌ ಇದ್ದವರು ಬೇಗ ಅಪ್ಲೇ ಮಾಡಿ

ದಿಢೀರನೆ SSLC ಫಲಿತಾಂಶದ ದಿನಾಂಕ ಬಿಡುಗಡೆ!!


Share

Leave a Reply

Your email address will not be published. Required fields are marked *