rtgh
Headlines

ಈ ಗೊಬ್ಬರದಿಂದ ಅಡಿಕೆ ತೋಟಕ್ಕೆ ಸಿಗಲಿದೆ ಹೆಚ್ಚು ಇಳುವರಿ! ಖರ್ಚಿಲ್ಲದೆ ಹೇಗೆ ತಯಾರಿಸಬಹುದು ಗೊತ್ತಾ?

Best Fertilizers Arecanut trees
Share

ಹಲೋ ಸ್ನೇಹಿತರೆ, ಕೃಷಿ ಭೂಮಿಯಲ್ಲಿ ಫಲವತ್ತತೆ ಹೆಚ್ಚಿಸಲು ಮೊದಲ ಆದ್ಯತೆ ಪ್ರತಿಯೊಬ್ಬರು ಸಹ ನೀಡುತ್ತಾರೆ. ಕೃಷಿಯಲ್ಲಿ ಭೂಮಿ ಫಲವತ್ತಾದರೆ ಇಳುವರಿ ಕೂಡ ಹೆಚ್ಚಾಗಿ ಬರುವ ಕಾರಣಕ್ಕೆ ಅದಕ್ಕೆ ನಾವು ಆದ್ಯತೆ ನೀಡಲೇಬೇಕಾಗುತ್ತದೆ. ರಾಸಾಯನಿಕ ಗೊಬ್ಬರ ಬಿಟ್ಟು ಸಾವಯವ ಗೊಬ್ಬರ ಬಳಕೆ ಮಾಡುವವರಿಗೆ ಹಸಿರೆಲೆ ಗೊಬ್ಬರವನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಬದಲು ನೀವೇ ನಿಮ್ಮ ಮನೆಯಲ್ಲಿ ಈ ಗೊಬ್ಬರ ತಯಾರಿಸಬಹುದು ಇದರಿಂದಾಗಿ ನಿಮಗೆ ಆರ್ಥಿಕ ಪ್ರಯೋಜನ ಸಿಗುವ ಜೊತೆಗೆ ಕೃಷಿ ವೆಚ್ಚ ಕೂಡ ಕಡಿಮೆಯಾಗಲಿದೆ. ಈ ಗೊಬ್ಬರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Best Fertilizers Arecanut trees

ರಸ ಗೊಬ್ಬರದ ಪರಿಕಲ್ಪನೆ ಬಗ್ಗೆ ನೀವು ತಿಳಿದಿರಬಹುದು. ಈ ರಸಗೊಬ್ಬರ ತಯಾರು ಮಾಡುವಾಗ ಮೊದಲ ಎರಡು ಹಂತದಲ್ಲಿ ಬಹಳ ವಾಸನೇ ಎನಿಸಿದರು ಕಾಲ ಕ್ರಮೇಣ ಎಲ್ಲ ವಾಸನೆ ಮುಕ್ತವಾಗಲಿದೆ. ರಸಗೊಬ್ಬರವು ಸಣ್ಣ ತೋಟಗಾರಿಕೆಯಿಂದ ಹಿಡಿದು ದೊಡ್ಡ ತೋಟಗಾರಿಕೆವರೆಗೂ ಬಳಕೆ ಸಹ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಕೈ ತೋಟ, ಹೂವಿನ ತೋಟಕ್ಕೂ ಕೂಡ ಇದರ ಪೋಷಣೆ ಬಹಳ ಪ್ರಯೋಜನವಾಗಲಿದೆ. ಅಡಿಕೆ ತೋಟಕ್ಕಂತೂ ಹಲವಾರು ಜನರು ಇದನ್ನೇ ಬಳಸುತ್ತಾರೆ.

ಹೇಗೆ ಗೊಬ್ಬರ ತಯಾರು ಮಾಡುವುದು?

ಡ್ರಮ್ ಅಥವಾ ಕಂಟೈನರ್ ನಲ್ಲಿ ತೋಟದ ಹಸಿ ಸೊಪ್ಪನ್ನು ಹಾಕಬೇಕು. ನಂತರ ಅದಕ್ಕೆ ನಮ್ಮ ಜಮೀನಿನ ಅಥವಾ ಇತರ ಕಾಡು ಪ್ರದೇಶದ ಸ್ವಲ್ಪ ಪ್ರಮಾಣದಲ್ಲಿ ಮಣ್ಣನ್ನು ಹಾಕಬೇಕು. ಈ ರೀತಿಯಲ್ಲಿ ಮಾಡಿ ತಂಪಾದ ಜಾಗದಲ್ಲಿ ಶೇಖರಣೆ ಮಾಡಬೇಕು. ಅದಕ್ಕೆ ನೀರು ಹಾಗೂ ಹುಳಿ ಮಜ್ಜಿಗೆಯನ್ನು ಸಹ ಹಾಕಬೇಕು. ಹುಳಿ‌ಮಜ್ಜಿಗೆಯಲ್ಲಿ ಲ್ಯಾಕ್ಟೋ ಕಂಪೋಸ್ ಎನ್ನುವ ಬ್ಯಾಕ್ಟೀರಿಯಾ ಇರುವುದರಿಂದ ಅವುಗಳು ಹಸಿರೆಲೆ ಗೊಬ್ಬರವನ್ನು ಮಾಡಲಿವೆ. ಅಗತ್ಯ ಇದ್ದಲ್ಲಿ ಟ್ರೈಕೊಡೊಮಾ ಮತ್ತು ಕ್ರೊಡೊಮಾ ಕಾಲಾ ಪೌಡರ್ ಅನ್ನು ಹಾಕಬಹುದು ಹೀಗೆ ಹಸಿರೆಲೆ ರಸಗೊಬ್ಬರ ತಯಾರು ಮಾಡಬೇಕಾಗುತ್ತದೆ.

ಇದನ್ನು ಓದಿ: ಸರ್ಕಾರಿ ನೌಕರರ ವೇತನದಲ್ಲಿ 12,600 ರೂ.ಹೆಚ್ಚಳ.! ಡಿಎ ಜೊತೆ ಏರಿಕೆಯಾಗಲಿದೆ HRA

ಗೊಬ್ಬರ ತಯಾರಾಗಲು ಎಷ್ಟು ಸಮಯ ಬೇಕು?

ಈ ಹಸಿರೆಲೆ ರಸಗೊಬ್ಬರಕ್ಕೆ ಗೋವಿನ ಸಗಣಿ ಕೂಡ ಹಾಕಬಹುದು ಅದು ಇಲ್ಲದೆಯೂ ಕೂಡ ಗೊಬ್ಬರವಾಗಿ ಪರಿವರ್ತನೆ ಮಾಡಬಹುದು. ಇದು ತಯಾರು ಆಗಲು ಕೇವಲ 1-2 ವಾರ ಬೇಕಾಗಲಿದೆ. ಆಗ ಸೊಪ್ಪೆಲ್ಲ ಕರಗಿ ಹೋಗಲಿದೆ. ನಂತರ ಹಸಿರೆಲೆ ರಸಗೊಬ್ಬರದ ನೀರನ್ನು ವಾರಕ್ಕೊಮ್ಮೆ ಗಿಡದ ಬುಡಕ್ಕೆ ಹಾಕಬಹುದು. ಇದರಲ್ಲಿ ಸಾಕಷ್ಟು ಸೂಕ್ಷ್ಮಾಣು ಜೀವಿಗಳು ಇರಲಿದ್ದು ಮಣ್ಣಿನೊಂದಿಗೆ ಬೆರೆತು ಮಣ್ಣಿನ ಪೋಷಕಾಂಶ ಹೆಚ್ಚಾಗಲಿದೆ ಹಾಗೆಯೇ ಇಳುವರಿ ಕೂಡ ಹೆಚ್ಚಾಗಲಿದೆ.

ಹೆಚ್ಚಾಗಿ ಸಾವಯವ ಗೊಬ್ಬರ ತಯಾರಿಸುವಾಗ ದನದ ಸಗಣಿ ಬಳಕೆ ಮಾಡುತ್ತಾರೆ ಆದರೆ ಇಲ್ಲಿ ಸಗಣಿ ಇಲ್ಲದೆಯೂ ಕೂಡ ಹಸಿರೆಲೆ ಗೊಬ್ಬರ ತಯಾರಿಸಬಹುದು. ದನ, ಆಕಳು ಇಲ್ಲ ಎನ್ನುವವರು ಸುಲಭಕ್ಕೆ ಹಸಿರೆಲೆ ಗೊಬ್ಬರ ತಯಾರಿಸಬಹುದು. ಸಂಗ್ರಹದ ತೊಟ್ಟಿಯ ಖರ್ಚು ಬಿಟ್ಟರೆ ಮತ್ತೆ ಯಾವುದೇ ಖರ್ಚು ಬರುವುದಿಲ್ಲ. ಹಸಿರು ಸೊಪ್ಪನ್ನು ಹಾಗೆಯೇ ಮರದ ಬುಡಕ್ಕೆ ನೇರವಾಗಿ ಹಾಕಿದರೆ ಅದು ಒಣಗಿ ಹೋಗಲಿದೆ. ಅದ್ದರಿಂದ ಹೀಗೆ ರಸಗೊಬ್ಬರ ಮಾಡಬಹುದು

ಇತರೆ ವಿಷಯಗಳು:

ಗೃಹಲಕ್ಷ್ಮಿ 8 & 9ನೇ ಕಂತಿನ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್!

BBMP 11307 ಹುದ್ದೆಗಳಿಗೆ ಅಧಿಸೂಚನೆ ಪ್ರಕಟ!! ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ


Share

Leave a Reply

Your email address will not be published. Required fields are marked *