rtgh
Headlines

2024-25ನೇ ಶೈಕ್ಷಣಿಕ ಸಾಲಿನ ಪದವಿ ಕಾಲೇಜುಗಳ ಪ್ರವೇಶಾತಿಗೆ ಶೇ.10 ಶುಲ್ಕ ಹೆಚ್ಚಳ

college fees hike
Share

ಹಲೋ ಸ್ನೇಹಿತರೇ, ರಾಜ್ಯದ ಖಾಸಗಿ ಡಿಗ್ರಿ ಕಾಲೇಜುಗಳಲ್ಲಿ ಶೇಕಡ.10 ರಷ್ಟು ಶುಲ್ಕ ಏರಿಕೆಯನ್ನು ಈ ವರ್ಷ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಪಾವತಿ ಮಾಡಬೇಕಾಗುತ್ತದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

college fees hike

12nd puc ನಂತರ ಬಹುಸಂಖ್ಯಾತ ವಿದ್ಯಾರ್ಥಿಗಳ ಉತ್ತರ ಪದವಿ ಪ್ರವೇಶ. ವಿವಿಧ ಮಾನವಿಕ ವಿಷಯಗಳು, ಬ್ಯುಸಿನೆಸ್‌ ಸ್ಟಡೀಸ್‌, ವಿಜ್ಞಾನ ವಿಷಯದಲ್ಲಿ ಪದವಿ ಪ್ರವೇಶ ಪಡೆಯುವ ಕುರಿತು ಹೇಳುತ್ತಾರೆ. ಅಂದಹಾಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಗೆ ಸೇರಲು ಆದ್ಯತೆ ನೀಡಲಾಗುವುದು. ಆದರೆ ಹತ್ತಿರದ ನಗರ, ಪಟ್ಟಣದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಮೂಲಸೌಕರ್ಯಗಳು ಇಲ್ಲದಿದ್ದರೆ, ನೆಚ್ಚಿನ ವಿಷಯ ಅಥವಾ ಕಾಂಬಿನೇಷನ್‌ ಕೋರ್ಸ್‌ ಇಲ್ಲದಿದ್ದರೆ ಇವರು ಸಹ ಮುಂದೆ ಆಯ್ಕೆ ಮಾಡುವುದು ಖಾಸಗಿ ಕಾಲೇಜುಗಳ ಪ್ರವೇಶಾತಿಯನ್ನು.

ಹಲವು ಕಾರಣಗಳಿಂದ ಖಾಸಗಿ ಕಾಲೇಜುಗಳಲ್ಲಿ ಡಿಗ್ರಿ ಪ್ರವೇಶಕ್ಕೆ ಮುಂದಾಗುವ ಡಿಗ್ರಿ ಕೋರ್ಸ್‌ ಪ್ರವೇಶ ಮಾಡುವ ಮಕ್ಕಳ ಪೋಷಕರಿಗೆ ಈಗ ಬೇಸರದ ಸಂಗತಿ ಹೊರಬಿದ್ದಿದೆ. ಕಾರಣ 2024-25ನೇ ಶೈಕ್ಷಣಿಕ ಸಾಲಿಗೆ ಖಾಸಗಿ ಪದವಿ ಕಾಲೇಜುಗಳಲ್ಲಿ ಶೇಕಡ.10 ರಷ್ಟು ಶುಲ್ಕ ಏರಿಕೆ ಮಾಡಲಾಗಿದೆ. ಆದರೆ ಖಾಸಗಿ ಕಾಲೇಜುಗಳು ಶುಲ್ಕ ನಿಗದಿಯು ಆಯಾ ವಿವಿಗಳಿಗೆ ಬಿಟ್ಟಿದ್ದು. ಈ ಹಿನ್ನೆಲೆಯಲ್ಲಿ ಯಾವ್ಯಾವ ಖಾಸಗಿ ಕಾಲೇಜುಗಳು ಎಷ್ಟು ಶುಲ್ಕ ನಿಗದಿ ಮಾಡುತ್ತದೆ?

ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಸ್‌ಡಬ್ಲ್ಯೂ & ಚಿತ್ರಕಲಾ ಕೋರ್ಸ್‌ಗಳ ಪ್ರವೇಶಕ್ಕೆ ಈ ಶುಲ್ಕ ಏರಿಕೆಯ ಬಿಸಿ ತಟ್ಟಲಿದೆ.

ಸರ್ಕಾರಿ & ಅನುದಾನಿತ ಪದವಿ ಕಾಲೇಜುಗಳ ಶುಲ್ಕ ಪರಿಷ್ಕರಣೆ ಮಾಡಿರುವ ಕಾಲೇಜು ಶಿಕ್ಷಣ ಇಲಾಖೆಯು ಕಳೆದ ವರ್ಷದ ಶುಲ್ಕವನ್ನೇ 2024-25ನೇ ಸಾಲಿಗೆ ನಿಗದಿ ಮಾಡಲಾಗಿದೆ.

ಅನುದಾನಿತ ಚಿತ್ರಕಲಾ ಕಾಲೇಜುಗಳಿಗೆ ಸಂಬಂಧಿಸಿದಂತೆ ಪರೀಕ್ಷಾ ಶುಲ್ಕವು 1000 ರೂ.ಗಳಿಗೆ ಮತ್ತು ಪ್ರವೇಶ ಶುಲ್ಕಗಳನ್ನು ಈಗಿರುವ ಶುಲ್ಕ 200 ರೂ. ಬದಲಾಗಿ 500 ರೂ.ಗಳಿಗೆ ಏರಿಸಿ ಆಯಾ ಕಾಲೇಜುಗಳು ಸರ್ಕಾರಕ್ಕೆ ಸಂದಾಯ ಮಾಡಬೇಕಾಗುತ್ತದೆ. ವಿದ್ಯಾರ್ಥಿನಿಯರಿಗೆ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕದಿಂದ ವಿನಾಯಿತಿ ನೀಡಲಾಗುವುದು.

ಯಾವುದಕ್ಕೆಲ್ಲ ಶುಲ್ಕ ನಿಗದಿ?

  • ಪ್ರವೇಶ ಶುಲ್ಕ
  • ಅರ್ಜಿ ಶುಲ್ಕ
  • ಪ್ರಯೋಗಾಲಯದ ಶುಲ್ಕ
  • ವರ್ಗಾವಣೆ ಪತ್ರ
  • ವೈದ್ಯಕೀಯ ತಪಾಸಣೆ
  • ವಿದ್ಯಾಭ್ಯಾಸ ಪ್ರಮಾಣ ಪತ್ರಕ್ಕೆ ಶುಲ್ಕ
  • ವಾಚನಾಲಯ ಶುಲ್ಕ
  • ಗ್ರಂಥಾಲಯ ಶುಲ್ಕ.
  • ಕ್ರೀಡಾ ಶುಲ್ಕ
  • ಕಾಲೇಜು ಮ್ಯಾಗಜಿನ್ ಶುಲ್ಕ
  • ಸಾಂಸ್ಕೃತಿಕ ಚಟುವಟಿಕೆಗಳ ಶುಲ್ಕ
  • ಪರಿಚಯ, ಗುರುತಿನ ಚೀಟಿ, ವಿದ್ಯಾರ್ಥಿಗಳ ಕ್ಷೇಮಾಭಿದ್ಧಿ ನಿಧಿ.

ಕಳೆದ ಶೈಕ್ಷಣಿಕ ಸಾಲಿನವರೆಗೂ ವಿಶ್ವವಿದ್ಯಾಲಯಗಳ ಹಂತದಲ್ಲಿಯೇ ಶುಲ್ಕ ಏರಿಕೆಯಾಗುತ್ತಿತ್ತು. ಆದರೆ ಸರ್ಕಾರವು ಏಕರೂಪದ ಶುಲ್ಕ, ಶೈಕ್ಷಣಿಕ & ಪರೀಕ್ಷಾ ವೇಳಾಪಟ್ಟಿ, ಫಲಿತಾಂಶ ಪ್ರಕಟಿಸುವ ರೂಲ್ಸ್ ಜಾರಿಗೊಳಿಸುವುದಾಗಿ ತಿಳಿಸಿದೆ. ಇದರ ಪ್ರಕಾರ ಪ್ರತಿ ವರ್ಷ ಶೇಕಡ.10 ರವರೆಗೂ ಶುಲ್ಕ ಹೆಚ್ಚಳ ಮಾಡಲು ಪ್ರೊ.ಲಿಂಗರಾಜು ಗಾಂಧಿ ನೇತೃತ್ವದ ಉಪ ಸಮಿತಿಯು ಸರ್ಕಾರಕ್ಕೆ ವರದಿಯನ್ನು ನೀಡಿದೆ. ಅದರಂತೆ ಪ್ರತಿವರ್ಷ ಶೇಕಡ.10 ಏರಿಕೆಗೆ ಅವಕಾಶ ಮಾಡಿಕೊಡಲಾಗಿದೆ.

ಖಾಸಗಿ ಪದವಿ ಕಾಲೇಜುಗಳ ಶುಲ್ಕ ಏರಿಕೆಗೆ ಉನ್ನತ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರವೇ ಅನುಮತಿ ನೀಡಲಾಗಿದೆ ಎಂದು ಬೆಂಗಳೂರು ವಿವಿ ಪ್ರೊ.ಲಿಂಗರಾಜು ಗಾಂಧಿ ರವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಗಮನಕ್ಕೆ

2024-25ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಉನ್ನತ ಶಿಕ್ಷಣ ಇಲಾಖೆಯು ಇನ್ನು ಪ್ರಕಟಗೊಳಿಸಿಲ್ಲ.

ಇತರೆ ವಿಷಯಗಳು

ರದ್ದಾದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಈ ಲಿಸ್ಟ್‌ನಲ್ಲಿದ್ರೆ ನಿಮಗಿಲ್ಲ ಗ್ಯಾರೆಂಟಿ ಹಣ

ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಆಹ್ವಾನ! ಸ್ವ ಉದ್ಯೋಗಕ್ಕೆ ಈ ಬ್ಯಾಂಕ್‌ ನೀಡುತ್ತೆ ಸಹಾಯಧನ


Share

Leave a Reply

Your email address will not be published. Required fields are marked *