ಬೆಂಗಳೂರು: 2023-24ನೇ ಸಾಲಿನ SSLC ಪರೀಕ್ಷಾ ಫಲಿತಾಂಶವು ಪ್ರಕಟವಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕರ್ನಾಟಕದ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಸುದ್ದಿಗೋಷ್ಠಿಯಲ್ಲಿ SSLC ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್ ಸೈಟ್ ನಲ್ಲಿಯೂ ಫಲಿತಾಂಶ ವೀಕ್ಷಿಸಬಹುದು.
SSLC ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಶೇ.94ರಷ್ಟು ಫಲಿತಾಂಶವು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯು 2ನೇ ಸ್ಥಾನ ಪಡೆದಿದೆ, ಶೇ.92.12ರಷ್ಟು ಫಲಿತಾಂಶವು ಬಂದಿದೆ, ಶಿವಮೊಗ್ಗ ಜಿಲ್ಲೆಯು 3ನೇ ಸ್ಥಾದಲ್ಲಿದ್ದು, ಶೇ.88.67ರಷ್ಟು ಫಲಿತಾಂಶವು ಬಂದಿದೆ ಹಾಗೂ ಯಾದಗಿರಿ ಜಿಲ್ಲೆಯು ಕೊನೆಯ ಸ್ಥಾನವನ್ನು ಪಡೆದಿದೆ. ಯಾದಗಿರಿವು ಶೇ.50.59ರಷ್ಟು ಫಲಿತಾಂಶ ಬಂದಿದೆ.
ಇದನ್ನೂ ಸಹ ಓದಿ: ಕೆಲವೇ ಕ್ಷಣಗಳಲ್ಲಿ SSLC ಫಲಿತಾಂಶ ರಿಲೀಸ್; ಚೆಕ್ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್
SSLC ಪರೀಕ್ಷೆಯಲ್ಲಿ ಬಾಗಲಕೋಟೆಯು ಮುಧೋಳ ವಿದ್ಯಾರ್ಥಿನಿ ಅಂಕಿತಾ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿನಿಯಾದ ಅಂಕಿತಾ SSLC ಯಲ್ಲಿ 625ಕ್ಕೆ 625 ಅಂಕವನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಟಾಪಾರ್ಸ್ ಲಿಸ್ಟ್ ಹೀಗಿದೆ:
ಅಂಕಿತಾ ಬಾಗಲಕೋಟೆ | 625/625 |
ಮೇದಾ ಪಿ ಶೆಟ್ಟಿ ಬೆಂಗಳೂರು | 624/625 |
ಹರ್ಷಿತಾ ಡಿಎಂ ಮಧುಗಿರಿ | 624/625 |
ಚಿನ್ಮಯ್ ದಕ್ಷಿಣ ಕನ್ನಡ | 624/625 |
ಸಿದ್ದಾಂತ್ ಚಿಕ್ಕೋಡಿ | 624/625 |
ದರ್ಶನ್, ಚಿನ್ಮಯ್, ಶ್ರೀರಾ ಶಿರಸಿ | 624/625 |
ಇತರೆ ವಿಷಯಗಳು:
ಬೆಳೆ ವಿಮೆ ಹಣ ಸಿಗದ ರೈತರಿಗೆ ಪ್ರತಿ ಎಕರೆಗೆ 16,000 ರೂ! ಫಲಾನುಭವಿಗಳ ಪಟ್ಟಿ ನೋಡಿ
ಇಂದು SSLC ಫಲಿತಾಂಶ ಪ್ರಕಟ! ಸರ್ವರ್ ಸಮಸ್ಯೆಯಿಲ್ಲದೆ ಇಲ್ಲಿಂದ ಪರಿಶೀಲಿಸಿ