rtgh
Headlines

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಬಿಡುಗಡೆ.! ಇಲ್ಲಿ ತಿಳಿಯಿರಿ ಆನ್‌ಲೈನ್‌ ಅಪ್ಲೇ ಮಾಡುವ ವಿಧಾನ

2nd puc supplementary exam time table 2024
Share

ಹಲೋ ಸ್ನೇಹಿತರೇ, ಕರ್ನಾಟಕ 2nd PUC ಪರೀಕ್ಷೆ 1 ರಲ್ಲಿ ಅನುತ್ತೀರ್ಣರಾದವರು / ಯಾವುದೇ ವಿಷಯದಲ್ಲಿ ಅಂಕಗಳನ್ನು ಉತ್ತಮಪಡಿಸಿಕೊಳ್ಳಲು / ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಆನ್‌ಲೈನ್‌ ಮೂಲಕ ರಿಜಿಸ್ಟ್ರೇಷನ್‌ ಮಾಡಲು ಸರಳ ವಿಧಾನವನ್ನು ಈ ಲೇಖನದಲ್ಲಿ ತಿಳಿಯಿರಿ.

2nd puc supplementary exam time table 2024

ಕರ್ನಾಟಕ ಶಾಲಾ ಶಿಕ್ಷಣ & ಮೌಲ್ಯನಿರ್ಣಯ ಮಂಡಲಿಯು 2024ನೇ ಸಾಲಿನಲ್ಲಿ ನಡೆಯಲಿರುವ 2nd PUC ಪೂರಕ ಪರೀಕ್ಷೆಗೆ ಆಹ್ವಾನಿಸಿ ಪ್ರಕಟಣೆ ಹೊರಡಿಸಿದೆ. ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮಗೊಳಿಸಿಕೊಳ್ಳುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಲಿಂಕ್ ಕೂಡ ಬಿಡುಗಡೆ ಮಾಡಲಾಗಿದೆ.

2nd PUC ಪರೀಕ್ಷೆ 2 ದಿನಾಂಕಗಳು: ಏಪ್ರಿಲ್ 29 ರಿಂದ ಮೇ 16, 2024 ರವರೆಗೆ.
ಆನ್‌ಲೈನ್‌ ಮೂಲಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿ ಹಾಕಲು ಕೊನೆಯ ದಿನಾಂಕ : ಏಪ್ರಿಲ್ 16, 2024

ಅರ್ಜಿ ಸಲ್ಲಿಸುವ ವಿಧಾನ

  • KSEAB ವೆಬ್‌ ವಿಳಾಸ ಕ್ಕೆ ಭೇಟಿ ನೀಡಿ https://kseab.karnataka.gov.in/
  • ತೆರೆದ ಮುಖಪುಟದಲ್ಲಿ ‘ಮತ್ತಷ್ಟು ಓದಿ’ ಎಂಬುದನ್ನು ಕ್ಲಿಕ್ ಮಾಡಿ.
  • ಇತ್ತೀಚೆಗೆ ಬಿಡುಗಡೆಯಾದ ಪ್ರಕಟಣೆಗಳು, ಲಿಂಕ್‌ಗಳು ಪ್ರದರ್ಶಿತವಾಗುತ್ತವೆ.
  • ‘2024ನೇ ಸಾಲಿನಲ್ಲಿ ನಡೆಯಲಿರುವ 2nd PUC ಪೂರಕ ಪರೀಕ್ಷೆ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು ಫಲಿತಾಂಶ ಉತ್ತಮಪಡಿಸಿಕೊಳ್ಳುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ’ ಎನ್ನುವುದರ ಲಿಂಕ್ ಕ್ಲಿಕ್ ಮಾಡಿ.
  • ಹೊಸ ವೆಬ್‌ಪೇಜ್‌ ಓಪನ್‌ ಆಗುತ್ತದೆ. ಇಲ್ಲಿ 2 ಕಡೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಅರ್ಜಿ ಹಾಕಲು ಆಯ್ಕೆಗಳನ್ನು ನೀಡಲಾಗುವುದು.
  • ವಿದ್ಯಾರ್ಥಿಗಳು Apply Here ಮೇಲೆ ಕ್ಲಿಕ್ ಮಾಡಿ.
  • ‘Application form for online registration examination-2’ ಮೇಲೆ ಲಿಂಕ್ ಕ್ಲಿಕ್ ಮಾಡಿ.
  • ಮತ್ತೊಂದು ಹೊಸ ವೆಬ್‌ಪೇಜ್‌ ಓಪನ್‌ ಆಗುತ್ತದೆ.
  • ನಂತರ ನಿಮ್ಮ ಪ್ರಸ್ತುತ 2nd PUC ರಿಜಿಸ್ಟರ್ ನಂಬರ್‌ನ್ನು ನಮೂದಿಸಿ ಎಂಬಲ್ಲಿ ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ.
  • ನಂತರ ದಿನಾಂಕ, ತಿಂಗಳು, ವರ್ಷವನ್ನು ಆಯ್ಕೆ ಮಾಡಿ.
  • View’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಹೆಸರು ಸಹಿತ ಹಲವು ಮಾಹಿತಿಗಳು ಕಾಣಸಿಗುತ್ತದೆ.
  • ನಂತರ ನೀವು ಯಾವುದೇ ವಿಷಯದ ಸಲುವಾಗಿ ಅರ್ಜಿ ಸಲ್ಲಿಸಬಹುದು.
  • ರಿಜಿಸ್ಟ್ರೇಷನ್‌ ಪಡೆದ ನಂತರ ಹಿಂದಿನ ಮೆನು ವೆಬ್‌ಪುಟಕ್ಕೆ ಬನ್ನಿ.
  • ‘Make Payment’ ಮೇಲೆ ಕ್ಲಿಕ್ ಮಾಡಿ ಶುಲ್ಕ ಪಾವತಿ ಮಾಡಿ.

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

ದಂಡರಹಿತ ಪುನರಾವರ್ತಿತ ಮತ್ತು ಫಲಿತಾಂಶ ಉನ್ನತೀಕರಣಕ್ಕಾಗಿ ಅಪ್ಲೇ ಮಾಡಲು ವಿದ್ಯಾರ್ಥಿಗಳ ಅರ್ಜಿಗಳು : 18-04-2024
ದಂಡಸಹಿತ ಪುನರಾವರ್ತಿತ ಮತ್ತು ಫಲಿತಾಂಶ ಉನ್ನತೀಕರಣಕ್ಕಾಗಿ ಅಪ್ಲೇ ಮಾಡಲು ವಿದ್ಯಾರ್ಥಿಗಳ ಅರ್ಜಿಗಳು : 24-04-2024

ಪರೀಕ್ಷಾ ಶುಲ್ಕ ವಿವರ

1 ವಿಷಯಕ್ಕೆ ರೂ.140.
2 ವಿಷಯಕ್ಕೆ ರೂ.270.
3 ಹೆಚ್ಚಿನ ವಿಷಯಗಳಿಗೆ ರೂ.400.
ಫಲಿತಾಂಶ ಚೆನ್ನಾಗಿ ಪಡೆಯಲು ಪ್ರಥಮ ಬಾರಿಗೆ 1 ವಿಷಯಕ್ಕೆ ರೂ.175.

ಅಂತಿಮ ವೇಳಪಟ್ಟಿ

ಪರೀಕ್ಷೆ ವಿಷಯಗಳುಪರೀಕ್ಷೆ ದಿನಾಂಕ
ಕನ್ನಡ, ಅರೇಬಿಕ್29-04-2024
ಇಂಗ್ಲಿಷ್02-05-2024
ಇತಿಹಾಸ / ಭೌತಶಾಸ್ತ್ರ30-04-2024
ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ03-05-2024
ಭೂಗೋಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಗೃಹವಿಜ್ಞಾನ, ಮೂಲಗಣಿತ04-05-2024
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಗಣಿತ, ಶಿಕ್ಷಣಶಾಸ್ತ್ರ09-05-2024
ಸಮಾಜಶಾಸ್ತ್ರ, ಭೂಗರ್ಭಶಾಸ್ತ್ರ, ಜೀವಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ11-05-2024
ಅರ್ಥಶಾಸ್ತ್ರ13-05-2024
ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ14-05-2024
ಹಿಂದಿ15-05-2024
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೆಬಿಕ್, ಫ್ರೆಂಚ್16-05-2024
ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ಬ್ಯೂಟಿ ಅಂಡ್ವೆಲ್‌ನೆಸ್‌ , ಆಟೋಮೊಬೈಲ್, ರೀಟೈಲ್16-05-2024

ಇತರೆ ವಿಷಯಗಳು

2nd PUC ಪಾಸಾದವರಿಗೆ ₹20,000 ಪ್ರೋತ್ಸಾಹಧನ.! ಅಪ್ಲೇ ಮಾಡಲು ಆರಂಭಿಕ ದಿನಾಂಕ?

ಸರ್ಕಾರಿ ನೌಕರರ ವೇತನದಲ್ಲಿ 12,600 ರೂ.ಹೆಚ್ಚಳ.! ಡಿಎ ಜೊತೆ ಏರಿಕೆಯಾಗಲಿದೆ HRA


Share

Leave a Reply

Your email address will not be published. Required fields are marked *