rtgh
Headlines

ಮನೆಯ ಪ್ರತಿ ಸದಸ್ಯರಿಗೆ 5 ಲಕ್ಷ ಉಚಿತ ನಗದು.! ಈ ಕಾರ್ಡ್‌ ಮಾಡಿಸಿಕೊಳ್ಳಲು ಇಂದೇ ಕೊನೆ ಅವಕಾಶ

yashaswini card karnataka
Share

ಹಲೋ ಸ್ನೇಹಿತರೇ, ಅತೀ ಕಡಿಮೆ ಖರ್ಚಿನಲ್ಲಿ ಆರೋಗ್ಯ ವಿಮೆ ಸೌಲಭ್ಯ ಪಡೆಯಲು ಸಹಕಾರಿ ಸಂಘಗಳ ಮೂಲಕವಾಗಿ ಯಶಸ್ವಿನಿ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ಅವಕಾಶವಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿತಿ.

yashaswini card karnataka

2023-24ನೇ ಸಾಲಿಗೆ ಯಶಸ್ವಿನಿ ಯೋಜನೆಯಲ್ಲಿ ಸದಸ್ಯರಾಗಲು & ಸದಸ್ಯತ್ವ ನವೀಕರಣಗೊಳಿಸಲು ಫೆ. 29 ಕೊನೆ ದಿನಾಂಕವಾಗಿದೆ. ಈಗಾಗಲೇ ಯಶಸ್ವಿನಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡವರು ಆಯಾ ಸಂಘದಲ್ಲಿಯೇ ಹಣ ಸಂದಾಯ ಮಾಡಿಕೊಂಡು, ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಬಹುದಾಗಿದೆ.

ಈ ಯೋಜನೆಯಡಿ ಯಾವೆಲ್ಲಾ ಪ್ರಯೋಜನ ಪಡೆದುಕೊಳ್ಳಬಹುದು?

ಈ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಾವಣೆ ಮಾಡಿಕೊಳ್ಳುವ ಕುಟುಂಬಕ್ಕೆ ಆರೋಗ್ಯ ಸಂಬಂಧಿತ ಸೇವೆಗಳಿಗೆ ನಗದು ರಹಿತ ಸರ್ಕಾರದಿಂದ ಅರ್ಥಿಕ ನೆರವು ನೀಡಲಾಗುವುದು.

1) ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕಿಯ ಚಿಕಿತ್ಸಾ ವೆಚ್ಚದ ಗರಿಷ್ಠ ₹5 ಲಕ್ಷದವರೆಗೆ ನಗದು ರಚಿತ ಅರ್ಥಿಕ ನೆರವು ನೀಡಲಾಗುವುದು. ರಾಜ್ಯದ ಯಾವುದೇ ಯಶಸ್ವಿನಿ network ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.

2) ಯಶಸ್ವಿನಿ ಯೋಜನೆ ಅಡಿಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು ಮತ್ತು ಈ ಯೋಜನೆ ಅಡಿಯಲ್ಲಿ ಇತರೆ ಅನುಸೂಚಿತ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ network ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.

3) ಆಯುಷ್ಮಾನ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಅಳವಡಿಸಿಕೊಂಡಿರುವ 1650 ಖಾಯಿಲೆಗಳಿಗೆ ಚಿಕಿತ್ಸೆಯು ಈ ಯೋಜನೆಯಡಿ ನೀಡಲಾಗುವುದು. 

4) ಯಶಸ್ವಿನಿ ಸದಸ್ಯರು ಜನರಲ್ ವಾರ್ಡಿನಲ್ಲಿ ಸೌಲಭ್ಯ ಪಡೆಯುವುದರಲ್ಲಿ ಅರ್ಹತೆಯನ್ನು ಹೊಂದಿರುತ್ತಾರೆ. ಯಶಸ್ವಿನಿ ಯೋಜನೆ ಅಡಿಯಲ್ಲಿ ನೆಟ್ ವರ್ಕ್ ಆಸ್ಪತ್ರೆಯಲ್ಲಿ ಒದಗಿಸಿರುವ ಚಿಕಿತ್ಸಾ ಪ್ರಯೋಜನದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರ ಚಿಕಿತ್ಸೆಯ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರವಳಿಕೆ ತಾರ ಫೀ, ಕನ್ಸಲ್ಟಂಟ್ ಫೀ, ಬೆಡ್ ಚಾರ್ಜ್. ನರ್ಸ್ ಫೀ ಇತ್ಯಾದಿ ವೆಚ್ಚವನ್ನು ಒಳಗೊಂಡಿರುತ್ತದೆ.

5) ನೆಟ್ ವರ್ಕ್ ಆಸ್ಪತ್ರೆಗಳಲ್ಲಿ ಯಶಸ್ವಿನಿ ಸದಸ್ಯರಿಗೆ ಹೊರ ರೋಗಿ ಚಿಕಿತ್ಸೆಗೆ ಅಂದರೆ (OPD) ಗರಿಷ್ಠ ರೂ. 200/- ಗಳ (3 ತಿಂಗಳ ಅವಧಿಗೆ) ಮಿತಿ ನಿಗಧಿಪಡಿಸಿದ್ದು, ನೆಟ್ ವರ್ಕ್ ಆಸ್ಪತ್ರೆಗಳು ಇದಕ್ಕಿಂತ ಹೆಚ್ಚಿನ ಶುಲ್ಕವನ್ನು ಸದಸ್ಯರಿಗೆ ವಿಧಿಸುವುದಿಲ್ಲ. ಈ ಪೈಕಿ ರೂ. 100/-ಗಳನ್ನು ಯಶಸ್ವಿನಿ ಟ್ರಸ್ಟ್ ನ ವತಿಯಿಂದ ಪಾವತಿಸಲಾಗುವುದು.

ಅರ್ಜಿ ಶುಲ್ಕದ ವಿವರ:

ಸಾಮನ್ಯ ವರ್ಗ: 1) ನಗರವಾಸಿ-₹1000 
(ಕುಟುಂಬದ 4 ಸದಸ್ಯರಿಗೆ ₹1000 ಹೆಚ್ಚುವರಿ ಸದಸ್ಯರಿಗೆ ₹200 ಪಾವತಿ ಮಾಡಲಾಗುವುದು.)

2) ಗ್ರಾಮಾಂತರ-₹500 ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರಿಗೆ ಶುಲ್ಕ ಇರುವುದಿಲ್ಲ.
(4 ಸದಸ್ಯರಿಗೆ ₹500 ಹೆಚ್ಚುವರಿ ಸದಸ್ಯರಿಗೆ ₹100)

ನವೀಕರಣ ಮಾಡಿಕೊಳ್ಳಲು ಅವಕಾಶ:

ಈಗಾಗಲೇ ಕಳೆದ ವರ್ಷ ಈ ಕಾರ್ಡ್ ಅನ್ನು ಮಾಡಿಸಿಕೊಂಡವರು ಮತ್ತೊಮ್ಮೆ ಮೇಲೆ ತಿಳಿಸಿರುವ ಶುಲ್ಕ ಪಾವತಿ ಮಾಡಿ ಮತ್ತೆ ನಿಮ್ಮ ಕಾರ್ಡ್‌ನ್ನು 1 ವರ್ಷಕ್ಕೆ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಫೆಬ್ರವರಿ 2024

ಎಲ್ಲಿ ಅರ್ಜಿ ಸಲ್ಲಿಸಬೇಕು?

ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ (ಸೊಸೈಟಿ) ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಸಲ್ಲಿಸಬೇಕಾದ ದಾಖಲಾತಿಗಳು:

  • ರೇಷನ್ ಕಾರ್ಡ ಪ್ರತಿ
  • ಪ್ರತಿ ಸದಸ್ಯರ ಆಧಾರ್ ಕಾರ್ಡ್
  • ಪ್ರತಿಯೊಬ್ಬರ ಎರಡು ಫೋಟೋ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ RD ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕಾಗುತ್ತದೆ

ಇತರೆ ವಿಷಯಗಳು

₹33,000 ಮೌಲ್ಯದ ಮೇವು ಕತ್ತರಿಸುವ ಯಂತ್ರ ವಿತರಣೆ.! ಈ ಯೋಜನೆಯಡಿ ತಕ್ಷಣ ಅಪ್ಲೇ ಮಾಡಿ

ಇದೀಗ ಅರ್ಹ ಮಹಿಳೆಯರಿಗೆ ಸರ್ಕಾರದಿಂದ ಧನಸಹಾಯ!! ಪ್ರತಿ ತಿಂಗಳು 1,000 ಪಡೆಯಲು ಹೀಗೆ ಮಾಡಿ


Share

Leave a Reply

Your email address will not be published. Required fields are marked *