rtgh
Headlines

SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ನಿಯಮ ಪಾಲನೆ ಕಡ್ಡಾಯ!! ಶಿಕ್ಷಣ ಮಂಡಳಿಯ ಹೊಸ ರೂಲ್ಸ್

SSLC Exam New Rules
Share

ಬೆಂಗಳೂರು : SSLC ಪರೀಕ್ಷೆಯು ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಯಲಿದ್ದು, ಪರೀಕ್ಷೆಯು ಸುಗಮವಾಗಿ ಮತ್ತು ಪರೀಕ್ಷಾ ಅವ್ಯವಹಾರಗಳ ತಡೆಗಟ್ಟುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಿ 200 ಮೀಟರ್ನಲ್ಲಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ..

SSLC Exam New Rules

ಅದರ ಜೊತೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಇರುವಂತಹ ಜೆರಾಕ್ಸ್ ಅಂಗಡಿಗಳನ್ನು, ಇಂಟರ್ ನೆಟ್ ಕೇಂದ್ರಗಳನ್ನು ಮುಚ್ಚುವಂತೆ ಆದೇಶ ಹೊರಡಿಸಲಾಗಿದೆ.

ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ

1) ವಿದ್ಯಾರ್ಥಿಗಳು, ಸರಳ ಕ್ಯಾಲ್ಕುಲೇಟರ್ಗಳನ್ನು ಮಾತ್ರ ಬಳಸಲು ಅವಕಾಶ ನೀಡಲಾಗಿದೆ.
2) ಸ್ಟ್ರಾಟಿಸ್ಟಿಕ್ಸ್ ವಿಷಯಕ್ಕೆ ಮಾತ್ರ ಸೈಂಟಿಫಿಕ್ ಕ್ಯಾಲ್ಕುಲೇಟರ್ ಅನ್ನು ಬಳಸಲು ಅನುಮತಿ.
3) ಪರೀಕ್ಷೆಯ ಅಂತಿಮವಾದ ಬೆಲ್ ಹೊಡೆಯುವ ಮುನ್ನ ಪರೀಕ್ಷೆ ಕೊಠಡಿಯಿಂದ ತೆರಳುವ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಯನ್ನು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಪಡೆಯಲಾಗುತ್ತದೆ.
4) ಗುರುತಿನ ಚೀಟಿ ಹಾಗೂ ಹಾಲ್ ಟಿಕೆಟ್ ಕಡ್ಡಾಯವಾಗಿ ಇರಬೇಕು
5) ಪರೀಕ್ಷೆಯನ್ನು ಬರೆಯುವ ಎಲ್ಲಾ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ತೋರಿಸಿ KSRTC ಬಸ್ ನಲ್ಲಿ ಪ್ರಯಾಣವನ್ನು ಮಾಡಬಹುದಾಗಿದೆ.
6) ಮೊಬೈಲ್ ಫೋನ್, ಹಾಗೂ ಇತರೆ ಎಲೆಕ್ಟ್ರಿಕಲ್ ಉಪಕರಣಗಳ ಬಳಕೆ ನಿಷೇಧ
7) ಪರೀಕ್ಷಾ ಅವಧಿಗಿಂತ ಮುಂಚೆ ಹೊರಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ನೀಡಲಾಗುವುದಿಲ್ಲ.
ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ನ ವ್ಯಾಪ್ತಿಯಲ್ಲಿ ಯಾವುದೇ ರೀತಿಯ STD, ಝರಾಕ್ಸ್, ಮೊಬೈಲ್ ಪೇಜರ್, ಟೈಪಿಂಗ್ ಮುಂತಾದವುಗಳನ್ನು ನಿಷೇಧಿಸಲಾಗಿದೆ.

ಇದನ್ನೂ ಸಹ ಓದಿ: ಅಪಘಾತವಾದ್ರೆ ಇನ್ಮುಂದೆ ನ್ಯೂ ರೂಲ್ಸ್! ದೇಶಕ್ಕೆ ಕೇಂದ್ರದ ಹೊಸ ಕೊಡುಗೆ

ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಪತ್ರವನ್ನು ಪಡೆದ ಹಾಗೂ ನಿಯೋಜಿತವಾದ ಶಿಕ್ಷಕರನ್ನು, ಜಾಗೃತ ದಳದವರನ್ನು ಹೊರತುಪಡಿಸಿ ಬೇರೆಯಾರಿಗೂ ಪರವಾನಿಗೆ ಇಲ್ಲದೇ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶ ಮಾಡುವುದನ್ನು ನಿಷೇಧಿಸಲಾಗಿದೆ. ನಕಲು ಮಾಡುವಂತಹ ಸಾಮಾಗ್ರಿಗಳನ್ನು ಹಾಗೂ ಹೊರಗಿನಿಂದ ಕಾಪಿಯನ್ನು ಬರೆದು ಪರೀಕ್ಷಾ ಕೇಂದ್ರದಲ್ಲಿ ಪೂರೈಸುವುದನ್ನು ನಿರ್ಬಂಧಿಸಲಾಗಿದೆ.

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶದ ದ್ವಾರಕ್ಕೆ ವಿರುದ್ಧವಾಗಿ ಮುಖ ಮಾಡಿ ಕುಳಿತು ಪರೀಕ್ಷೆಯನ್ನು ಬರೆಯುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆಯನ್ನು ನೀಡಿದೆ. ಈ ದಿಕ್ಕಿನಲ್ಲಿ ಕುಳಿತು ಪರೀಕ್ಷೆಯನ್ನು ಬರೆದರೆ ಅಕ್ರಮವನ್ನು ಎಸಗಿದರೆ ದ್ವಾರದಲ್ಲೇ ಕಾಣುತ್ತದೆ, ಈ ನಿಟ್ಟಿನಲ್ಲಿ ಇಲಾಖೆಯು ಈ ಕ್ರಮವನ್ನು ಕೈಗೊಂಡಿದೆ. ಇನ್ನೂ, ಪರೀಕ್ಷಾ ಕೊಠಡಿಯ ಹಾಗೂ ಆವರಣದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅನ್ನು ಹಾಕಿಸುವಂತೆ ಶಿಕ್ಷಣ ಇಲಾಖೆಯು ಸೂಚನೆಯನ್ನು ನೀಡಿದೆ.

ಇತರೆ ವಿಷಯಗಳು:

ಎಲ್ಲಾ ವ್ಯಾಪಾರಸ್ಥರಿಗೆ ಮೋದಿ ಯೋಜನೆ!! ಸಿಗತ್ತೆ 3 ಲಕ್ಷ ಸಾಲ 15,000 ಆರ್ಥಿಕ ನೆರವು

ಹೊಸ ಆಸ್ತಿ ತೆರಿಗೆ ಪದ್ದತಿ ಆರಂಭ .! ಹೊಲ, ಸ್ವಂತ ಮನೆ ಇದ್ದವರು ತಕ್ಷಣ ಗಮನಹರಿಸಿ


Share

Leave a Reply

Your email address will not be published. Required fields are marked *