rtgh

ಅಪಘಾತವಾದ್ರೆ ಇನ್ಮುಂದೆ ನ್ಯೂ ರೂಲ್ಸ್! ದೇಶಕ್ಕೆ ಕೇಂದ್ರದ ಹೊಸ ಕೊಡುಗೆ

Golden Hours Treatment
Share

ಹಲೋ ಸ್ನೇಹಿತರೇ, ಇತ್ತೀಚಿನ ದಿನದಲ್ಲಿ ಅಪಘಾತಗಳ ಸಂಖ್ಯೆ ಅಧಿಕವಾಗುತ್ತಿದೆ. ಅಪಘಾತದ ಸಂಖ್ಯೆ ಹೆಚ್ಚಾಗಲು ಕೆಲವೊಮ್ಮೆ ವೈಯಕ್ತಿಕ ಬೇಜವಾಬ್ದಾರಿ ಇದ್ದರೆ ಇನ್ನೂ ಕೆಲವೊಮ್ಮೆ ಅಪಘಾತ ವಲಯಗಳು ಎಂಬ ಸ್ಥಳಗಳಲ್ಲಿ ಅಪಘಾತ ನಡೆದು ಬಿಡುತ್ತದೆ. ಎಷ್ಟೇ ಮುಂಜಾಗ್ರತೆ ವಹಿಸಿದ್ದರೂ ಅಪಘಾತ ಸಂಖ್ಯೆ ತಗ್ಗುತ್ತಿಲ್ಲ ಎಂದು ಹೇಳಬಹುದು.ಅದಕ್ಕಾಗಿ ಅಪಘಾತ ಪ್ರಮಾಣ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಪಘಾತ ತಡೆಹಿಡಿಯಲು ಈಗಾಗಲೇ ಸಾಕಷ್ಟು ಕ್ರಮ ಜಾರಿಗೆ ತರಲು ಮುಂದಾಗಿವೆ.

Golden Hours Treatment

ಅಪಘಾತ ಆದವರಿಗೆ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋದರೆ ಕೋರ್ಟ್ ಕೇಸು, ಪೊಲೀಸ್ ಠಾಣೆ ಎಂದು ಅಲೆಯಬೇಕಾಗುತ್ತದೆ. ಹೀಗಾಗಿ ಅಪಘಾತವು ನಡೆದ ಬಳಿಕ ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಚಿಕಿತ್ಸೆಗೆ ಸೇರಿಸಲು ಜನರು ಹಿಂದೇಟನ್ನು ಹಾಕುತ್ತಿದ್ದು ಅನೇಕ ವ್ಯಕ್ತಿಗಳು ಚಿಕಿತ್ಸೆಯೇ ಸಿಗದೆ ಸಾಯುತ್ತಿದ್ದಾರೆ. ಈ ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲು ಮುಂದಾಗಿ ದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಯಾವುದು ಈ ನೂತನ ಯೋಜನೆ?

ರಸ್ತೆ ಅಪಘಾತಕ್ಕೆ ತುತ್ತಾದವರಿಗೆ ಶೀಘ್ರ ಚಿಕಿತ್ಸೆ ನೀಡಬೇಕು ಎಂಬ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ನೂತನ ಯೋಜನೆ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಕೆಲವು ಸರ್ಕಾರಿ ಮಾಧ್ಯಮ ಮೂಲಗಳು ಮಾಹಿತಿಯನ್ನು ನೀಡುತ್ತಿವೆ. ಈ ಯೋಜನೆಯ ಹೆಸರು ಗೋಲ್ಡನ್ ಅವರ್ ಟ್ರೀಟ್ಮೆಂಟ್ ಎಂದಾಗಿದ್ದು ಅಪಘಾತವು ನಡೆದ ಒಂದು ಘಂಟೆಯ ಒಳಗೆ ಆಸ್ಪತ್ರೆಗೆ ಆ ವ್ಯಕ್ತಿಯನ್ನು ದಾಖಲಿಸಿದ್ರೆ, 7 ದಿನದ ಚಿಕಿತ್ಸಾ ವೆಚ್ಚ ಅಥವಾ 1.5ಲಕ್ಷದ ವರೆಗೆ ಚಿಕಿತ್ಸಾ ಸೌಲಭ್ಯವನ್ನು ಅವರು ಪಡೆದುಕೊಳ್ಳಲಿದ್ದಾರೆ.

‘ಮಾದರಿ ನೀತಿ ಸಂಹಿತೆ’ ಅಂದ್ರೆ ಏನು? ಇದನ್ನ ಮೀರಿದ್ರೆ ಏನಾಗುತ್ತೆ? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

ದೇಶಾದ್ಯಂತ ಜಾರಿ:

ಈ ಒಂದು ಹೊಸ ಯೋಜನೆಯನ್ನು ಸರ್ಕಾರವು ಮೋಟಾರ್ ವಾಹನಗಳ ಕಾಯ್ದೆ 2019 ರಭಾಗವಾಗಿ ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ. ಮೊದಲ ಒಂದು ಗಂಟೆಯು ಚಿಕಿತ್ಸೆ ಬಹಳ ಅಗತ್ಯ ಎಂಬುದನ್ನು ಒತ್ತಿ ಹೇಳುವ ಸಲುವಾಗಿ Golden Hours Treatment ಎಂದು ಹೆಸರಿಡಲಾಗಿದೆ. ಮೊದಲ ಹಂತದಲ್ಲಿ ಹರಿಯಾಣ ಮತ್ತು ಚಂಡೀಗಢದಲ್ಲಿ ಈ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು ಮುಂದಿನ ದಿನದಲ್ಲಿ ದೇಶ ಎಲ್ಲಾ ರಾಜ್ಯಗಳಲ್ಲಿಯು ಇದು ಜಾರಿಗೆ ಬರಲಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.

ಪ್ರಮುಖ ಗುರಿ:

ಅಪಘಾತ ನಡೆದ ಸಂದರ್ಭದಲ್ಲಿ ವ್ಯಕ್ತಿಗೆ ತುರ್ತು ಚಿಕಿತ್ಸೆಯನ್ನು ಶೀಘ್ರವಾಗಿ ನೀಡಿ ಅಪಘಾತದಲ್ಲಿ ಮರಣ ಹೊಂದುವ ಪ್ರಮಾಣ ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಇದರ ಮೂಲಕ ರಸ್ತೆ ಅಪಘಾತ (Road Accident) ದಲ್ಲಿ ಸಾವಿನ ಸಂಖ್ಯೆಯನ್ನು 50% ನಷ್ಟು ಕಡಿಮೆ ಮಾಡಬೇಕು ಎಂಬ ಮಹತ್ವದ ಗುರಿಯನ್ನು ಹೊಂದಿರುವುದನ್ನು ನಾವು ಕಾಣಬಹುದು.

ಇತರೆ ವಿಷಯಗಳು:

ಉಚಿತ ಆಧಾರ್ ಕಾರ್ಡ್‌ ಅಪ್ಡೇಟ್‌ಗೆ ಇನ್ನು 2 ದಿನ ಮಾತ್ರ ಅವಕಾಶ.! ಮಾಡಿಸದವರಿಗೆ ಇಲ್ಲಿದೆ ಡೈರೆಕ್ಟ್‌ ಲಿಂಕ್

ಉಚಿತ ಮನೆ ಯೋಜನೆಯಡಿ ₹1 ಲಕ್ಷ ಸಹಾಯಧನ! ಈ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಸಿ


Share

Leave a Reply

Your email address will not be published. Required fields are marked *