rtgh
Headlines

ರೈಲ್ವೆಯಲ್ಲಿ ಖಾಲಿ ಇರುವ 733 ಹುದ್ದೆಗಳ ನೇಮಕಾತಿ: ಆಸಕ್ತ ಅಭ್ಯರ್ಥಿಗಳು ತಡ ಮಾಡದೇ ಅಪ್ಲೇ ಮಾಡಿ

south east central railway recruitment 2024
Share

ಹಲೋ ಸ್ನೇಹಿತರೇ, ಸೌಥ್ ಈಸ್ಟ್‌ ಸೆಂಟ್ರಲ್‌ ರೈಲ್ವೆಯಲ್ಲಿ ಖಾಲಿ ಇರುವ ಟ್ರೇಡ್‌ ಅಪ್ರೆಂಟಿಸ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಬರೋಬರಿ 733 ಹುದ್ದೆಗಳಿವೆ. ಅರ್ಹತೆ, ಪ್ರಮುಖ ದಿನಾಂಕಗಳು, ಇತರೆ ವಿವರಗಳನ್ನು ತಿಳಿದು ಆಸಕ್ತರು ಅರ್ಜಿ ಸಲ್ಲಿಸಿ. ಅಪ್ಲೇ ಮಾಡುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

south east central railway recruitment 2024

ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರು NATS ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ. ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ಕಾಯ್ದೆ 1961ರ ಅಡಿ, ರಾಯ್‌ಪುರ್‌ ಡಿವಿಷನ್‌ನಲ್ಲಿ ನಿಯೋಜಿಸಲಾಗುತ್ತದೆ.

ಈ ಹುದ್ದೆಗಳಿಗೆ ಅನುಸಾರವಾಗಿ SSLC, ITI ಅನ್ನು ಹುದ್ದೆಗೆ ಸಂಬಂಧ ಪಟ್ಟಂತೆ ಟ್ರೇಡ್‌ನಲ್ಲಿ ಪಾಸ್‌ ಮಾಡಿರಬೇಕು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗೆ ಕನಿಷ್ಠ 15 ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮ ಅನ್ವಯವಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 12-03-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12-04-2024 ರ ರಾತ್ರಿ 23-59 ಗಂಟೆವರೆಗೆ.

ಅರ್ಜಿ ಸಲ್ಲಿಸುವ ವಿಧಾನ

– ಈ ಹುದ್ದೆಗಳಲ್ಲಿ ಆಸಕ್ತಿ ಹೊಂದಿದವರಿಗೆ ವೆಬ್‌ ವಿಳಾಸ https://portal.mhrdnats.gov.in/boat/login/user_login.action ಕ್ಕೆ ಭೇಟಿ ಮಾಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್‌ ವಿಳಾಸ, ಮೊಬೈಲ್‌ ಸಂಖ್ಯೆ , Password ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳ ಆಯ್ಕೆ ಹೇಗೆ? 

ಸೌಥ್ ಈಸ್ಟ್‌ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್‌ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿರುವ ಅಂಕಗಳ ಆಧಾರದಲ್ಲಿ ಮೇಲೆ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ, ಶಾರ್ಟ್‌ ಲಿಸ್ಟ್‌ ಮಾಡಲಾಗುವುದು. ಈ ಅಭ್ಯರ್ಥಿಗಳಿಗೆ ಮೆಡಿಕಲ್ ಟೆಸ್ಟ್‌ ನಡೆಸಿ, ನಂತರದಲ್ಲಿ ಅಂತಿಮವಾಗಿ ಆಯ್ಕೆ ಮಾಡಲಾಗುವುದು. ಅಪ್ರೆಂಟಿಸ್ ಹುದ್ದೆ ಅವಧಿಯಲ್ಲಿ, ಅಪ್ರೆಂಟಿಸ್ ಕಾಯ್ದೆ -1961 ರ ಪ್ರಕಾರ ಮಾಸಿಕ ಸ್ಟೈಫಂಡ್‌ ನೀಡಲಾಗುವುದು.

ಇತರೆ ವಿಷಯಗಳು

ಗೃಹಲಕ್ಷ್ಮಿ 7ನೇ ಕಂತಿನ ಹಣ ಜಮಾ! ಕೂಡಲೇ ಇಲ್ಲಿಂದ DBT ಚೆಕ್‌ ಮಾಡಿ

ಇನ್ನೂ 3 ವಾರ ರಾಜ್ಯದಲ್ಲಿ ಬಿಸಿಲೋ ಬಿಸಿಲು.! ಯುಗಾದಿ ನಂತರ ಮುಂಗಾರು ಪೂರ್ವ ಮಳೆ?


Share

Leave a Reply

Your email address will not be published. Required fields are marked *