rtgh
Headlines

KSRTC ಯಲ್ಲಿ ಉಚಿತವಾಗಿ ಪ್ರಯಾಣಿಸಲು ಇನ್ನೊಂದು ಹೊಸ ರೂಲ್ಸ್!

Shakti Scheme Updates
Share

ಹಲೋ ಸ್ನೇಹಿತರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ರಾಜ್ಯದಲ್ಲಿನ ಕೆಎಸ್ಆರ್‌ಟಿಸಿ ನಿಗಮದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡುವುದಕ್ಕೆ ಒಂದು ಯೋಜನೆಯನ್ನು ಜಾರಿಗೆ ತಂದಿತ್ತು. ಈ ಯೋಜನೆಯನ್ನು ಜಾರಿಗೆ ತಂದ ನಂತರ ಮಹಿಳೆಯರು ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ರಾಜ್ಯದೊಳಗೆ ಮಾತ್ರ ಉಚಿತವಾಗಿ ಓಡಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಈ ಯೋಜನೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಕೊನೆವರೆಗೂ ಓದಿ.

Shakti Scheme Updates

ಆರಂಭದಲ್ಲಿ ಜಾರಿಗೆ ಬಂದಾಗ ಸಾಕಷ್ಟು ಗೊಂದಲಗಳು ಹಾಗೂ ಬಸ್ಸುಗಳಲ್ಲಿ ನೂಕುನುಗ್ಗಲಗಳು ಹಾಗೂ ಜಗಳ ಆಗುತ್ತಿದ್ದ ಸನ್ನಿವೇಶಗಳು ಕಂಡುಬರುತ್ತಿದ್ದವು ಆದರೆ ಇತ್ತೀಚಿನ ದಿನಗಳಲ್ಲಿ ಶಕ್ತಿ ಯೋಜನೆಯನ್ನು ಪ್ರತಿಯೊಬ್ಬರೂ ಕೂಡ ಉತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತಿರುವ ಕಾರಣದಿಂದ ಪುರುಷರಿಗೆ 50% ಸೀಟಿಂಗ್ ವ್ಯವಸ್ಥೆಯನ್ನು ನೀಡುವಂತಹ ಕೆಲಸ ಕೂಡ ಸರ್ಕಾರ ಮಾಡಿದೆ.

ಕೇವಲ ಆಧಾರ್ ಕಾರ್ಡ್ ತೋರಿಸಿದರೆ ಬಸ್ಸ್‌ ಹತ್ತಿಸುವುದಿಲ್ಲ:

ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಬಸ್ ಪ್ರಯಾಣವನ್ನು ಪಡೆದುಕೊಳ್ಳುಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಕಾಗ್ತಿತ್ತು. ಆದರೆ ಈಗ ನಿಯಮ ಬದಲಾಗಿ ಕೇವಲ ಆಧಾರ್ ಕಾರ್ಡ್ ಮಾತ್ರ ಸಾಕಾಗುವುದಿಲ್ಲ ಯಾಕಂದ್ರೆ ಆಧಾರ್ ಕಾರ್ಡ್ ನಲ್ಲಿ ಕರ್ನಾಟಕದ ನಿವಾಸಿ ಎಂದು ಅಧಿಕೃತ ಮಾಹಿತಿ ಇದ್ರೆ ಮಾತ್ರ ಅಂಥವರಿಗೆ ಉಚಿತ ಬಸ್ ಪ್ರಯಾಣವನ್ನು ನೀಡಲಾಗುತ್ತದೆ. ಸಾಕಷ್ಟು ಜನರು ಬೇರೆ ರಾಜ್ಯದಿಂದ ಇಲ್ಲಿ ಬಂದು ವಾಸಿರುತ್ತಾರೆ ಅಂತವರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುವುದಿಲ್ಲ.

ಇದನ್ನು ಓದಿ: PM ಕಿಸಾನ್‌ ಕಂತಿಗೆ ಬಂತು ಹೊಸ ನಿಯಮ! ಹಣ ಬೇಕಾದ್ರೆ ಹೀಗೆ ಮಾಡಿ

ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುವುದು ಕಡ್ಡಾಯ:

ಶಕ್ತಿ ಯೋಜನೆಗೆ ಬಳಸಿಕೊಳ್ಳುವಂತಹ ಸ್ಮಾರ್ಟ್ ಕಾರ್ಡ್ ಪಡೆಯಲು ಹತ್ತಿರ ಇರುವಂತಹ ಸೇವಾ ಕೇಂದ್ರಗಳಿಗೆ ಹೋಗುವ ಮೂಲಕ ಮಾಡಿಸಿಕೊಳ್ಳಬಹುದಾಗಿದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ನೀಡುವ ಮೂಲಕ ನೀವು ಸ್ಮಾರ್ಟ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಈ ಸ್ಮಾರ್ಟ್ ಕಾರ್ಡ್ ಅನ್ನು ಮೆಟ್ರೋ ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಮೊದಲು ಪ್ಲಾನಿಂಗ್ ನಡೆಸಿತ್ತು ಆದರೆ ಅದು ಸಾಕಷ್ಟು ಆರ್ಥಿಕ ಹೊರೆಯನ್ನು ತಂದು ಕೊಡುತ್ತೆ ಎಂಬುದಾಗಿ ತಿಳಿದಿದ್ದು ಅದರ ಪ್ಲಾನಿಂಗ್ ಅನ್ನು ಸದ್ಯ ಕೈ ಬಿಡಲಾಗಿದೆ.

ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಬಳಸಿಕೊಂಡು ಸ್ಮಾರ್ಟ್ ಕಾರ್ಡ್ ಅನ್ನು ಪ್ರಿಂಟ್ ಔಟ್ ಅನ್ನು ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ. ಇದನ್ನೇ ಬಳಸಿಕೊಳ್ಳುವ ಮೂಲಕ ನೀವು ಶಕ್ತಿ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ.

ಒಂದು ವೇಳೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಡೀಟೇಲ್ಸ್ ನಕಲಿ ಇದ್ರೆ ಅಥವಾ ಕರ್ನಾಟಕ ರಾಜ್ಯದಿಂದ ನೀವು ಹೊರಗಡೆ ಇರುವವರಾಗಿದ್ದರೆ ಶಕ್ತಿ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಯಾವುದೇ ರೀತಿಯ ಅವಕಾಶ ಇರೋದಿಲ್ಲ ಹಾಗೂ ಇದನ್ನು ಮೀರಿ ನೀವು ಈ ಲಾಭವನ್ನು ಪಡೆದುಕೊಂಡರೆ ಕಾನೂನಾತ್ಮಕ ಶಿಕ್ಷೆಗೆ ಅನುಭವಿಸುವ ಸಾಧ್ಯತೆ ಕೂಡ ಇದೆ.

ಇತರೆ ವಿಷಯಗಳು:

32.12 ಲಕ್ಷ ರೈತರ ಖಾತೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ.! ರಾಜ್ಯ ಸರ್ಕಾರದಿಂದ ಬಿಡುಗಡೆ

NVS ಬೋಧಕೇತರ ಹುದ್ದೆಗಳ ನೇಮಕಾತಿ.! 1377 ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 14 ಲಾಸ್ಟ್‌ ಡೇಟ್


Share

Leave a Reply

Your email address will not be published. Required fields are marked *