ಹಲೋ ಸ್ನೇಹಿತರೇ, ದೇಶದಲ್ಲಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ದೇಶದ ಆರ್ಥಿಕ ಅಭಿವೃದ್ಧಿಯು ಆಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ರೈತರು ದೇಶದ ಬೆನ್ನೆಲುಬು. ಜನರಿಗೆ ಬೇಕಾಗಿರುವ ಆಹಾರ ಪದಾರ್ಥಗಳನ್ನ, ಧಾನ್ಯಗಳನ್ನು ಬೆಳೆಯುವ ರೈತರ ಜೀವನ ಸುಗಮವಾಗಿದ್ದರೆ ಕೃಷಿ ಚಟುವಟಿಕೆಯನ್ನು ಕೂಡ ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯ.
ರೈತರು ಕೃಷಿ ಭೂಮಿಯಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರು ಅವರಿಗೆ ಪಿಂಚಣಿ ಪ್ರಯೋಜನವಂತು ಸಿಗುವುದಿಲ್ಲ. ಇದನ್ನು ಗಮನಿಸಿದ ಸರ್ಕಾರ ಈಗ ಕೃಷಿ ಭೂಮಿಯಲ್ಲಿ ದುಡಿದು, ಜೀವನ ಸಾಧಿಸುವ ರೈತರಿಗಾಗಿಯೇ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಈ ಮೂಲಕ ವಾರ್ಷಿಕವಾಗಿ 36,000 ರೂ. ಗಳನ್ನು ರೈತರು ಪಡೆದುಕೊಳ್ಳಲು ಸಾಧ್ಯವಿದೆ. ಆ ಯೋಜನೆ ಯಾವುದು, ಯಾವ ರೀತಿ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುವ ವಿವರಣೆ ಈ ಲೇಖನದಲ್ಲಿ ಇದೆ ಮುಂದೆ ಓದಿ.
Contents
ಪ್ರಧಾನ ಮಂತ್ರಿ ಮನ್ ಧನ್ ಯೋಜನೆ:
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಅಡಿಯಲ್ಲಿ ನೋಂದಾಯಿತ ರೈತರು ಈ ಯೋಜನೆಗೂ ಅರ್ಜಿ ಸಲ್ಲಿಸಬಹುದು. ಈ ಯೋಜನೆ ವಿಶೇಷತೆ ಅಂದ್ರೆ ನೀವು ಅತಿ ಕಡಿಮೆ ಹೂಡಿಕೆ ಮಾಡಿ 60 ವರ್ಷದ ನಂತರ ಪ್ರತಿ ತಿಂಗಳು 3000 ರೂ. ಗಳ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.
ಇದನ್ನೂ ಸಹ ಓದಿ : ಈ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು 3000 ರೂ. ಹಣ! ಅರ್ಜಿ ಸಲ್ಲಿಸಲು ಇಲ್ಲಿದೆ ಲಿಂಕ್
ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು?
18 ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 18 ವರ್ಷಕ್ಕೆ ನೀವು ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಕೇವಲ 56 ರೂಪಾಯಿಗಳ ಠೇವಣಿ ಇಟ್ಟರೆ ಸಾಕು. ಅದೇ ನೀವು 30 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಆರಂಭಿಸಿದರೆ ಪ್ರತಿ ತಿಂಗಳು 110 ರೂ. ಗಳನ್ನು ಹೂಡಿಕೆ ಮಾಡಬೇಕು. ಈಗ 40 ವರ್ಷಕ್ಕೆ ಹೂಡಿಕೆ ಮಾಡುತ್ತೀರಿ ಎಂದು ಭಾವಿಸಿ, ಆಗ ಪ್ರತಿ ತಿಂಗಳು 220 ರೂ. ಗಳನ್ನು ಹೂಡಿಕೆ ಮಾಡಬೇಕು.
ಈ ಯೋಜನೆಯಲ್ಲಿ ಕನಿಷ್ಠ 660 ರೂ. ಗಳಿಂದ ಗರಿಷ್ಠ 2400 ರೂಪಾಯಿಗಳವರೆಗೆ ವಾರ್ಷಿಕ ಹೂಡಿಕೆ ಮಾಡಿದರೆ. ಅರವತ್ತು ವರ್ಷದ ನಂತರ ಪ್ರತಿವರ್ಷ 36,000 ರೂ. ಅಥವಾ ತಿಂಗಳಿಗೆ 3000 ರೂ. ಗಳನ್ನು ಪಿಂಚಣಿಯಾಗಿ ಪಡೆಯಬಹುದು. 40 ವರ್ಷಗಳ ನಂತರ ಮತ್ತೆ ಹೂಡಿಕೆ ಮಾಡುವ ಅಗತ್ಯ ಇಲ್ಲ ಠೇವಣಿ ಹಣದಿಂದಲೇ ನಿಮ್ಮ ಖಾತೆಗೆ ಪಿಂಚಣಿ ಹಣ ಜಮಾ ಆಗುತ್ತದೆ. ಹೂಡಿಕೆದಾರ ಮರಣ ಹೊಂದಿದರೆ ಆ ಹಣವನ್ನು ಆತನ ಪತ್ನಿಗೆ ನೀಡಲಾಗುತ್ತದೆ. ಇಲ್ಲಿ ನಾಮಿನಿ ಕೇವಲ ಪತ್ನಿ ಮಾತ್ರ ಆಗಿರಬೇಕು ಮನೆಯ ಇತರ ಸದಸ್ಯರಿಗೆ ಇದರ ಪ್ರಯೋಜನ ಸಿಗುವುದಿಲ್ಲ.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:
- ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ವೋಟರ್ ಐಡಿ
ಯಾವುದೇ ಅಂಚೆ ಕಚೇರಿಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಪ್ರಧಾನಮಂತ್ರಿ ಮನ್ ಧನ್ ಯೋಜನೆಯ ಖಾತೆ ಆರಂಭಿಸಬಹುದು. ಒಮ್ಮೆ ಖಾತೆ ಆರಂಭಿಸಿದ ನಂತರ ನಿಮ್ಮ ಬ್ಯಾಂಕ್ ಅಕೌಂಟ್ನಿಂದ ನೇರವಾಗಿ ಯೋಜನೆಗೆ ಹಣ ವರ್ಗಾವಣೆ ಆಗುವಂತೆ ಮಾಡಲಾಗುವುದು. ಹಾಗಾದ್ರೆ ಇನ್ಯಾಕೆ ತಡ 60 ವರ್ಷದ ನಂತರ ಯಾರ ಬಳಿಯೂ ಒಂದು ರೂಪಾಯಿ ಹಣಕ್ಕೆ ಕೈ ಚಾಚದೆ ಆರ್ಥಿಕವಾಗಿ ಸುಧಾರಿತ ಜೀವನ ಕಂಡುಕೊಳ್ಳಲು ತಕ್ಷಣ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ.
ಇತರೆ ವಿಷಯಗಳು:
ಶಾಲಾ ವಿದ್ಯಾರ್ಥಿಗಳಿಗೆ ಹೆಚ್ಚು ಬೇಸಿಗೆ ರಜೆ!
ಶಾಲೆಗಳಿಗೆ ಬೇಸಿಗೆ ರಜೆ! ಹೊಸ ಶೈಕ್ಷಣಿಕ ವರ್ಷದಲ್ಲಿ ಎಷ್ಟು ದಿನ ರಜೆ ಘೋಷಣೆ
ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ನೀಡಿದ್ರಾ ನಿವೃತ್ತಿ